ವಿವೇಕಾನಂದರು ಭಾರತದ ಆತ್ಮ
Team Udayavani, Feb 13, 2017, 3:45 AM IST
ಮಂಗಳೂರು: ವಿವೇಕಾನಂದರು ಭಾರತದ ಆತ್ಮ ಇದ್ದಂತೆ. ದೇಶವನ್ನು ಸಾಂಸ್ಕೃತಿಕ, ಬೌದ್ಧಿಕ, ಆಧ್ಯಾತ್ಮಿಕವಾಗಿ ಮೇಲಕ್ಕೆತ್ತಿದ ಸಂತ ಸ್ವಾಮೀಜಿಯವರು ಎಂದು ಗುಜರಾತ್‌ನ ರಾಜಕೋಟ್ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಸರ್ವಸ್ಥಾನಂದಜೀ ಮಹಾರಾಜ್ ನುಡಿದರು.
ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಆಶ್ರಯಧಿದಲ್ಲಿ ನಗರದ ಕೇಂದ್ರ ಮೈದಾನದ ಗುಡ್ವಿನ್ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾಧಿರಂಭದಲ್ಲಿ ಅವರು ರವಿಧಿವಾರ ಮಾತನಾಡಿದರು. ವಿವೇಕಾನಂದರನ್ನು ಅರ್ಥೈಸಿಧಿಕೊಳ್ಳದೇ ಭಾರತವನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ದೇಶದ ಶ್ರೇಷ್ಠ ಪರಂಪರೆ, ಆಧ್ಯಾತ್ಮಿಕ ಸಂಸ್ಕೃತಿಯನ್ನು ಜಗತ್ತಿಗೇ ಬೋಧಿಸಿದ ಮಹಾನ್ ಪ್ರೇರಕ ಶಕ್ತಿ ಅವರು. ಯುವಕರ ಮೇಲೆ ಅವರು ಇಟ್ಟ ನಂಬಿಕೆ ಅಪಾರ. ಸ್ವಾಮೀಜಿಯವರ ಕನಸಿನಂತೆ ಸದೃಢ ಭಾರತ ಕಟ್ಟುವಲ್ಲಿ ಯುವ ಸಮೂಹ ಶ್ರಮಿಸಬೇಕು. ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಭಾರತವನ್ನು ಸಶಕ್ತವನ್ನಾಗಿಸಲು ಯುವಕರು ಮುಂದಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಸಾಹಿತ್ಯ ಸಾರ್ವಕಾಲಿಕ
ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ತಿರುವಣ್ಣಾಮಲೈ ಶ್ರೀ ಶಾರದಾ ಆಶ್ರಮದ ಮಾತಾಜಿ ಯತೀಶ್ವರಿ ಕೃಷ್ಣಪ್ರಿಯ ಅಂಬಾಜಿ ಅವರು ಮಾತನಾಡಿ, ಸ್ವಾಮೀಜಿ ಮತ್ತು ನಿವೇದಿತಾರ ಸಂದೇಶ, ಸಾಹಿತ್ಯಗಳು ಸಾರ್ವಕಾಲಿಕ. ಅವರ ಸಾಹಿತ್ಯಗಳಂತೆ ಬದುಕಿದರೆ ಜೀವನ ಸಾರ್ಥಕ್ಯ ಪಡೆಯುತ್ತದೆ. ಇಡೀ ವಿಶ್ವಕ್ಕೇ ಭಾರತೀಯ ಸಂಸ್ಕೃತಿಯ ಸಿರಿವಂತಿಕೆಯನ್ನು ಬೋಧಿಸಿದ ಅವರು ನಮ್ಮೆಲ್ಲರ ಆದರ್ಶವಾಗಬೇಕು ಎಂದು ಅಭಿಪ್ರಾಯಪಟ್ಟರು.
ವಿವೇಕಾನಂದ ಕೊಲಾಜ್ ವಿಶ್ವ ದಾಖಲೆಗೆ ಪ್ರವೇಶ
ಮೂಲ್ಕಿಯ ಪಂಜಿನಡ್ಕ ಕೆಪಿಎಸ್‌ಕೆ ಪ್ರೌಢಶಾಲೆಯ ಕಲಾ ಶಿಕ್ಷಕ ವೆಂಕಿ ಪಲಿಮಾರ್ ಮತ್ತು ವಿದ್ಯಾರ್ಥಿಗಳು ನಿರ್ಮಿಸಿದ 21×16 ಅಡಿ ಎತ್ತರದ ವಿವೇಕಾನಂದರ ಕೊಲಾಜ್ ಚಿತ್ರ ಮತ್ತು 10 ನಿಮಿಷದಲ್ಲಿ 108 ಸೂರ್ಯ ನಮಸ್ಕಾರ ಮಾಡಿದ ಯುವ ಬ್ರಿಗೇಡ್ ಕಾರ್ಯಕರ್ತ ನಿರಂಜನ್ ಶೆಟ್ಟಿ ಅವರ ಸಾಧನೆ ವಿಶ್ವ ದಾಖಲೆಗೆ ಪ್ರವೇಶ ಪಡೆದಿದೆ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಈ ವೇಳೆ ಪ್ರಕಟಿಸಿದರು.
ವೇದಿಕೆಯಲ್ಲಿ ಕೆಲವೇ ನಿಮಿಷಗಳಲ್ಲಿ ವಿವೇಕಾನಂದರ ಚಿತ್ರ ರಚಿಸಿದ ಮತ್ತು ಸಮ್ಮೇಳನ ಪ್ರಚಾರಾರ್ಥವಾಗಿ ಪಣಂಬೂರು ಕಡಲ ಕಿನಾರೆಯಲ್ಲಿ ವಿವೇಕ, ನಿವೇದಿತಾರ ಚಿತ್ರವನ್ನು ಮರಳಿನಲ್ಲಿ ರಚಿಸಿದ ಕಲಾವಿದ ಮಹೇಂದ್ರ ಅವರನ್ನು ಈ ವೇಳೆ ಗೌರವಿಸಲಾಯಿತು.
ವಿವೇಕಾನಂದ, ನಿವೇದಿತಾರ ಸಾಹಿತ್ಯ ಪುಸ್ತಕಗಳನ್ನು ಪುತ್ತೂರು ವಿವೇಕಾನಂದ ತಾಂತ್ರಿಕ ಕಾಲೇಜಿನಲ್ಲಿರುವ ವಿವೇಕ, ನಿವೇದಿತಾರ ಸಾಹಿತ್ಯ ರ್ಯಾಕ್‌ಗೆ ನೀಡುವ ಸಲುವಾಗಿ ಸಾಂಕೇತಿಕವಾಗಿ ಯುವ ಬ್ರಿಗೇಡ್ ಮಂಗಳೂರು ವಿಭಾಗ ಸಂಚಾಲಕ ಮಂಜಯ್ಯ ನೇರಂಕಿ ಅವರಿಗೆ ಹಸ್ತಾಂತರಿಸಲಾಯಿತು. ವಿವೇಕಾನಂದರ ಲೋಗೋ ಹೊಂದಿರುವ ಟೀಶರ್ಟ್‌ಗಳನ್ನು ಈ ವೇಳೆ ಬಿಡುಗಡೆಗೊಳಿಸಲಾಯಿತು.
ಸಮ್ಮೇಳನದ ಸಂಚಾಲಕ ಗಿರಿಧರ ಶೆಟ್ಟಿ ಉಪಸ್ಥಿತರಿದ್ದರು. ಯುವ ಬ್ರಿಗೇಡ್ ರಾಜ್ಯ ಸಂಚಾಲಕ ನಿತ್ಯಾನಂದ ವಿವೇಕವಂಶಿ ಸ್ವಾಗತಿಸಿಧಿದರು. ಸೋದರಿ ನಿವೇದಿತಾ ಪ್ರತಿಧಿಷ್ಠಾನದ ಸ್ವಾತಿ ಮಂಗಳೂರು ನಿರೂಪಿಸಿದರು.
ಯುವ ಬ್ರಿಗೇಡ್ ನಿರ್ಣಯಗಳು
ಸೋದರಿ ನಿವೇದಿತಾ ಅವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ರಾಜ್ಯಾದ್ಯಂತ 150 ಸಮ್ಮೇಳನಗಳ ಆಯೋಜನೆ ಮತ್ತು ಇದರ ಸಮಾರೋಪದ ಅಂಗವಾಗಿ ಸೆ. 11, 12ರಂದು ಬೆಳಗಾವಿಯಲ್ಲಿ ಸಾಹಿತ್ಯ ಸಮ್ಮೇಳನ ಏರ್ಪಡಿಸುವುದು, ಫೆ. 14ರಂದು ಪೌರ ಕಾರ್ಮಿಕರ ಕಾಲನಿಗಳಿಗೆ ಅಥವಾ ವೃದ್ಧಾಶ್ರಮಗಳಿಗೆ ಭೇಟಿ ನೀಡುವ ನಿರ್ಣಯಗಳನ್ನು ಯುವ ಬ್ರಿಗೇಡ್ ಕೈಗೊಂಡಿದೆ.
ನಿರ್ಣಯ ಪ್ರಕಟಿಸಿದ ಯುವಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ನಿವೇದಿತಾ 150ನೇ ವರ್ಷಾಚರಣೆ ಪ್ರಯುಕ್ತ ವಿವೇಕಾನಂದರ ಚಿಂತನೆಗಳನ್ನು ಮತ್ತು ನಿವೇದಿತಾ ಅವರ ಕಲ್ಪನೆಗಳನ್ನು ಸಮಾಜಕ್ಕೆ ಮುಟ್ಟಿಸುವ ಕಾರ್ಯಕ್ಕಾಗಿ ಸಮ್ಮೇಳನಗಳು ಮಹತ್ವ ಪಡೆಯಲಿವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.