ಬಸ್‌ ನಿಲ್ಲಿಸಿ ಓಡಿ ಹೋಗಿ ವೋಟ್‌ ಮಾಡಿದ ಚಾಲಕ

ಮತದಾನದ ಮಹತ್ವ ಸಾರಿದ ವಿಜಯ ಶೆಟ್ಟಿ ವೀಡಿಯೋ ವೈರಲ್‌

Team Udayavani, Apr 20, 2019, 6:00 AM IST

BUS

ಮೂಡುಬಿದಿರೆ: ಚುನಾವಣೆಯ ದಿನ ಹಕ್ಕು ಚಲಾವಣೆಯ ಸ್ಫೂರ್ತಿಯಾಗಿ ಅನೇಕ ಚಿತ್ರಗಳು, ವೀಡಿಯೋಗಳು ಹರಿದಾಡಿರಬಹುದು. ಆದರೆ ನಿಜಕ್ಕೂ ಜ್ವಾಜ್ವಲ್ಯಮಾನವಾಗಿ ವೈರಲ್‌ ಆಗಿರುವುದು ಒಬ್ಬ ಬಸ್‌ ಚಾಲಕನ ವೀಡಿಯೋ!

ಚಲಾಯಿಸುತ್ತಿದ್ದ ಬಸ್ಸನ್ನೇ ಮತಗಟ್ಟೆಯ ಬಳಿ ನಿಲ್ಲಿಸಿ ಓಡಿ ಹೋಗಿ ಮತ ಚಲಾಯಿಸಿ ಬಂದು ಬಸ್‌ ಚಲಾಯಿಸಿದ ಖಾಸಗಿ ಬಸ್‌ ಚಾಲಕ ಬೆಳುವಾಯಿ ಕುಕ್ಕುಡೇಲು (ಕಾಂತಾವರ ಕ್ರಾಸ್‌) ನಿವಾಸಿ ವಿಜಯ ಶೆಟ್ಟಿ ಅವರ ಮಿಂಚಿನ ನಡವಳಿಕೆ ಇದು.

ಮತದಾನದ ಮಹತ್ವವನ್ನು ಸಾರುವ ಜತೆಗೆ ಮನೆಯಲ್ಲಿದ್ದೂ ಮತಗಟ್ಟೆಗೆ ಬಾರದೆ ಲೋಕೋಪದೇಶ ಮಾಡುವ “ಉದಾಶೀನಣ್ಣ’ನವರಿಗೆ ಇದೊಂದು ಪಾಠದಂತಿದೆ.

ಮಂಗಳೂರು -ಮೂಡುಬಿದಿರೆ -ಕಾರ್ಕಳ-ಶಿವಮೊಗ್ಗ ರೂಟ್‌ನಲ್ಲಿ ಮೂಡುಬಿದಿರೆ ಬೆಳುವಾಯಿ ಮೂಲಕ ಸಂಚರಿಸುವ ಎಕ್ಸ್‌ಪ್ರೆಸ್‌ ಬಸ್ಸಿನ ಚಾಲಕ 55ರ ಹರೆಯದ ವಿಜಯ ಶೆಟ್ಟಿ ಗುರುವಾರ ಸಂಜೆ 4.45ರ ವೇಳೆಗೆ ತಾನು ಮತ ಚಲಾಯಿಸಬೇಕಾಗಿದ್ದ ಬೆಳುವಾಯಿ ಚರ್ಚ್‌ ಬಳಿ ಶಾಲೆಯ ಬಳಿ ಬಸ್‌ ಚಲಾಯಿಸಿಕೊಂಡು ಬಂದರು. ಬಸ್ಸನ್ನು ಶಾಲೆಯ ಗೇಟಿನ ಮುಂಭಾಗ ನಿಲ್ಲಿಸಿದವರೇ ಓಡಿ ಹೋಗಿ ಎರಡೇ ನಿಮಿಷಗಳಲ್ಲಿ ಮತ ಚಲಾಯಿಸಿ ಮತ್ತೆ ಓಡಿ ಬಂದು ಮತ್ತೆ ಬಸ್‌ ಸ್ಟಿಯರಿಂಗ್‌ ವೀಲ್‌ ಹಿಡಿದರು!

“ಅದು ನಮ್ಮ ಹಕ್ಕು, ಬದುಕಿನ ಸಂಕೇತ’ ಎಂದು ವಿಜಯ ಶೆಟ್ಟಿ ಹೆಮ್ಮೆಯಿಂದ ಸಂತಸ ಹಂಚಿಕೊಂಡಿದ್ದಾರೆ.ಕಳೆದ ಪಂಚಾಯತ್‌ ಚುನಾವಣೆಯಲ್ಲೂ ಶೆಟ್ಟರು ಹೀಗೆಯೇಮತ ಚಲಾಯಿಸಿದ್ದರು. ಈ ಬಗ್ಗೆ ಸಂಪರ್ಕಿಸಿ ಮಾಹಿತಿ ಕೇಳಿದಾಗ, ಹಿಂದೆ ಭಟ್ಕಳ ಬಸ್‌ನಲ್ಲಿರುವಾಗ ಬೆಳಗ್ಗೆ ಬೇಗನೇ ಮತ
ದಾನ ಮಾಡಿ ಹೋಗಿದ್ದುದನ್ನು ನೆನಪಿಸಿಕೊಂಡರು.ಬೆಂಗಳೂರಿನಲ್ಲಿ ವಿಪ್ರೋ ಉದ್ಯೋಗಿಯಾಗಿರುವ ಶೆಟ್ಟರ ಪುತ್ರಿ ದೀಪಾ ಕೂಡ ಊರಿಗೆ ಬಂದು ಮತದಾನ ಮಾಡಿದ್ದಾರೆ.

ಟಾಪ್ ನ್ಯೂಸ್

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

ಬಡ ದಂಪತಿಗೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

1-mang

Mangaluru ಧರ್ಮಪ್ರಾಂತ;ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ

arrest-woman

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

4

Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Exam

Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ

1-aaaa

ಬಡ ದಂಪತಿಗೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.