ಮಾತಿನ ಮತ, ಸಂದರ್ಶನ: ಎ.ಜಿ. ಕೊಡ್ಗಿ, ಮಾಜಿ ಶಾಸಕರು, ಬೈಂದೂರು
Team Udayavani, Mar 10, 2018, 2:40 PM IST
1967ರಿಂದ ರಾಜಕೀಯ ರಂಗ ಪ್ರವೇಶಿಸಿದ ಎ.ಜಿ. ಕೊಡ್ಗಿ (ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ) ಕಾಂಗ್ರೆಸ್‌ನಿಂದ ಸ್ಪರ್ಧಿಸಿ 1972ರಿಂದ 83ರ ವರೆಗೆ ಬೈಂದೂರು ಕ್ಷೇತ್ರದ ಶಾಸಕನಾಗಿ ಸೇವೆ ಸಲ್ಲಿಸಿದ್ದರು. 1993ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡು, 94ರಲ್ಲಿ ಕುಂದಾಪುರದಿಂದಲೂ ಸ್ಪರ್ಧಿಸಿ, ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಸೋಲುಂಡರು. 1999ರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ರಾಜಕೀಯಕ್ಕೆ ಕರೆತಂದು, ಶಾಸಕರನ್ನಾಗಿಸಿದ ಹೆಗ್ಗಳಿಕೆ ಇವರದು.
ಆಗಿನ ರಾಜಕೀಯಕ್ಕೂ ಈಗಿನ ರಾಜಕೀಯಕ್ಕೂ ಏನು ವ್ಯತ್ಯಾಸ?
ಆ ಕಾಲದ ರಾಜಕೀಯಕ್ಕೂ ಇಂದಿನ ರಾಜಕೀಯಕ್ಕೂ ಅನೇಕ ಭಿನ್ನತೆಗಳಿವೆ. ಆಗ ಚುನಾವಣೆಯ ಖರ್ಚು ಕಡಿಮೆ. ವೈಯಕ್ತಿಕ ಖರ್ಚುಗಳು ಬಿಟ್ಟರೆ ಉಳಿದೆಲ್ಲವನ್ನೂ ಪಕ್ಷ ಹಾಗೂ ಕಾರ್ಯಕರ್ತರು ಭರಿಸುತ್ತಿದ್ದರು. ಆದರೆ ಈಗ ಅಭ್ಯರ್ಥಿಯ ಖರ್ಚು ಬಹುಕೋಟಿ ತಲುಪಿದೆ. ಹಿಂದೆ ಭ್ರಷ್ಟಾಚಾರಕ್ಕೆ ಮಿತಿ ಇತ್ತು. ಹಿಂದೆ ಪಕ್ಷದ ಸಾಧನೆಯ ಅಂಕಿ -ಅಂಶಗಳ ಮೇಲೆ ರಾಜಕಾರಣ, ಈಗ ವೈಯಕ್ತಿಕ ಹಾಗೂ ಸುಳ್ಳು ರಾಜಕಾರಣದ ಮೇಲೆ ರಾಜಕೀಯ ನಡೆಯುತ್ತಿದೆ. ರಾಜಕೀಯದಲ್ಲಿ ಯೋಗ್ಯ ಹಾಗೂ ಪ್ರಾಮಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ಬೆಳವಣಿಗೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತ ವೈಖರಿ ಬಗ್ಗೆ?
ಸರಕಾರದ ಕೆಲವೊಂದು ಕಾರ್ಯಕ್ರಮಗಳು ಒಳ್ಳೆಯದಿದ್ದರೂ ಅದು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಜನರಿಗೆ ತಲುಪುತ್ತಿಲ್ಲ. ವಿಪಕ್ಷ ಇದನ್ನು ಸರಿಯಾಗಿ ಬಳಸಿಕೊಂಡು, ಅಂಕಿ-ಅಂಶದೊಂದಿಗೆ ವಾದ ಮಾಡಬೇಕು.
ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆ ಬಗ್ಗೆ ?
ಅವರಿಗೆ ಸಚಿವ ಸ್ಥಾನ ನೀಡುವಂತೆ ನಾನೇ ಸೂಚಿಸಿದ್ದೆ. ರಾಜೀನಾಮೆ ನೀಡುವಾಗ, ಈಗ ಪಕ್ಷಕ್ಕೆ ಸೇರುವಾಗಲೂ ನನ್ನ ಬಳಿ ಕೇಳಲಿಲ್ಲ. ಅವರಿಗೆ ಟಿಕೇಟ್ ಕೊಡುವುದು ಹಿರಿಯರಿಗೆ ಹಾಗೂ ಪಕ್ಷಕ್ಕೆ ಬಿಟ್ಟ ವಿಚಾರ.
ಇಂದಿನ ರಾಜಕೀಯಕ್ಕೆ ಯಾರು ಸೂಕ್ತ?
ದೇಶ, ಸಾಮಾಜಿಕ ಚಿಂತನೆ ಮತ್ತು ಭ್ರಷ್ಟಾಚಾರದಿಂದ ದೂರ ಇರುವವರು ಬೇಕು. ಪ್ರಾಥಮಿಕ ಹಂತದಿಂದ ರಾಜಕೀಯಕ್ಕೆ ಬಂದವರಾಗಿರಬೇಕು. ಹಿರಿಯರು ಯುವಕ ರಿಗೆ ತಮ್ಮ ಅನುಭವ ಧಾರೆಯೆರೆದು ಮಾರ್ಗದರ್ಶನ ನೀಡಬೇಕು.
ಸತೀಶ ಆಚಾರ್ ಉಳ್ಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.