ಸಂಭ್ರಮದಿಂದ ಮತ ಚಲಾಯಿಸಿ: ಶಶಿಕಾಂತ್ ಸೆಂಥಿಲ್
Team Udayavani, Apr 18, 2018, 11:19 AM IST
ಬಂಟ್ವಾಳ : ಸಜ್ಜನರು ಮತ ಚಲಾಯಿಸಿದರೆ ಸಜ್ಜನರೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ. ಚುನಾವಣೆಯನ್ನು ಹಬ್ಬವನ್ನು ಆಚರಿಸುವ ರೀತಿಯಲ್ಲಿ ಸಂಭ್ರಮದಿಂದ ಆಚರಿಸಿ ಮತ ಚಲಾಯಿಸಿರಿ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಹೇಳಿದರು. ಅವರು ಎ. 16ರಂದು ರಾತ್ರಿ ಫರಂಗಿ ಪೇಟೆ ಸೇವಾಂಜಲಿ ಪ್ರತಿಷ್ಠಾನದ ಭವನ ದಲ್ಲಿ ನಡೆದ ಪುದು ಮತ್ತು ಮೇರ ಮಜಲು ಗ್ರಾಮದ ಬೀಟ್ ಸಭೆ, ಚುನಾವಣೆಯಲ್ಲಿ ನಾನೇಕೆ ಮತ ಚಲಾಯಿ ಸಬೇಕು ಕಾರ್ಯಕ್ರಮದಲ್ಲಿ ಬೀಟ್ ಸದಸ್ಯರು, ಜನರನ್ನು ಉದ್ದೇಶಿಸಿ ಮಾತನಾಡಿದರು.
ಐದು ವರ್ಷಗಳಿಗೊಮ್ಮೆ ಜನರಿಗೆ ಬೇಕಾದವರನ್ನು ಆಯ್ಕೆ ಮಾಡುವ ಅವಕಾಶ ಸಂವಿಧಾನದಲ್ಲಿ ದೊರಕಿದೆ. ಇದು ಜನರ ಹಕ್ಕು. ಇದನ್ನು ಯಾರೂ ಕಳೆದುಕೊಳ್ಳಬಾರದು. ಚುನಾವಣೆಯಲ್ಲಿ ಎಲ್ಲರ ಸಹಕಾರ ಅಗತ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ ಪ್ರಜೆಗಳು ಕೋಮುವಾದದ ಬಗ್ಗೆ ಆಲೋಚನೆಯೇ ಮಾಡುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಎಸ್ಪಿ ಡಾ| ರವಿಕಾಂತೇಗೌಡ, ‘ಸಮೃದ್ಧ ಮತ್ತು ಶಾಂತಿಯುತವಾದ ಮತದಾನ ನಮ್ಮದಾಗ ಬೇಕು. ನಾಗರಿಕರು ಪೊಲೀಸ್ ಮೇಲೆ ವಿಶ್ವಾಸ ವಿಡಬೇಕು. ಪ್ರತಿಯೊಬ್ಬ ಪೊಲೀಸ್ ಕಾನ್‌ಸ್ಟೇಬಲ್ ಕೂಡ ಮುಖ್ಯಸ್ಥರು. ಇವರಲ್ಲಿ ಊರಿನ ಸಮಸ್ಯೆ ಹಾಗೂ ಕಾನೂನು ಸುವ್ಯವಸ್ಥೆಯ ಬಗ್ಗೆ ಯಾವಾಗ ಬೇಕಾದರೂ ಮಾತನಾಡಬಹುದು. ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸಿಬಂದಿಯಿದ್ದು, ಸುಮಾರು 25 ಸಾವಿರ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದರು. ಪ್ರೊಬೆಷನರಿ ಐಪಿಎಸ್ ಅಧಿಕಾರಿ ಅಕ್ಷಯ್ ಎಂ., ಬಂಟ್ವಾಳ ಸಿಐ ಪ್ರಕಾಶ್ ಎಂ.ಎಸ್. ಉಪಸ್ಥಿತರಿದ್ದರು. ಬಂಟ್ವಾಳ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಪ್ರಸ್ತಾವಿಸಿ, ಶಶಿಕಲಾ ಪ್ರಾರ್ಥಿಸಿದರು. ಮನೋಜ್ ಕುಮಾರ್ ಕೆ. ಸ್ವಾಗತಿಸಿ, ವಂದಿಸಿದರು.
ಸ್ನೇಹ ಸಂಬಂಧವಿರಲಿ
ಜನರು ಮತ್ತು ಪೊಲೀಸರ ನಡುವೆ ಸ್ನೇಹ ಸಂಬಂಧ ಇರಬೇಕು. ಹೆದರಿಕೆಯ ವಾತಾವರಣವಿರಬಾರದು. ಅಪರಾಧಿಗಳನ್ನು ಶಿಕ್ಷಿಸುವಲ್ಲಿ ಕಾನೂನು ಹೇಗೆ ಮುಖ್ಯವೋ ಅದೇ ರೀತಿ ಅಪರಾಧವಾಗದಂತೆ ಮಾಡಲು ಸಮಾಜ ಬಾಂಧವ್ಯ ಕೂಡಾ ಅಷ್ಟೇ ಮುಖ್ಯ. ಎಲ್ಲರೂ ಉತ್ತಮ ರೀತಿಯಲ್ಲಿ ಮತ ಚಲಾಯಿಸಬೇಕು.
– ಡಾ| ರವಿಕಾಂತೇಗೌಡ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Kannada: ಮಾತೃಭಾಷಾ ಹೊಳಪು
Kannada: ಕನ್ನಡ ಎನೆ ಕುಣಿದಾಡುವುದೆನ್ನೆದೆ… ಕನ್ನಡ ಎನೆ ಕಿವಿ ನಿಮಿರುವುದು…
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.