ಇಂದು ಮತಗಟ್ಟೆಗೆ ಮತದಾರರು
ಮತಯಂತ್ರಗಳ ವಿತರಣೆ: ಚುನಾವಣ ಸಾಮಗ್ರಿ ಮತಗಟ್ಟೆಗೆ
Team Udayavani, Oct 21, 2019, 5:35 AM IST
ಕಾಸರಗೋಡು : ಮಂಜೇಶ್ವರ ವಿಧಾನ ಸಭಾ ಉಪಚುನಾವಣ ಪ್ರಚಾರಕ್ಕೆ ಅ. 19ರಂದು ಸಂಜೆ ವೈವಿಧ್ಯಮಯ ಅಬ್ಬರದ ಪ್ರಚಾ ರಕ್ಕೆ ತೆರೆ ಬಿದ್ದಿದ್ದು, ಅ. 21ರಂದು ಸೋಮವಾರ ನಡೆಯುವ ಮತದಾನಕ್ಕೆ ಚುನಾವಣ ಸಾಮಗ್ರಿಗಳನ್ನು ಆಯಾಯ ಮತಗಟ್ಟೆಗಳಿಗೆ ಸಾಗಿಸಲಾಯಿತು. ತಮ್ಮ ನೇತಾ ರ ನನ್ನು ಆಯ್ಕೆ ಮಾಡಲು ಮತದಾರರು ಅ. 21ರಂದು ಮತಗಟ್ಟೆಗೆ ತೆರಳಲಿದ್ದಾರೆ.
ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅ. 20ರಂದು ಬೆಳಗ್ಗೆ ಚುನಾವಣ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಕೇಂದ್ರದಲ್ಲಿ ಸಜ್ಜುಗೊಳಿಸಿದ್ದ ಕೌಂಟರ್‌ಗಳ ಮೂಲಕ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಬೆಳಗ್ಗೆ ವಿತರಣೆ ಆರಂಭಿಸಲಾಗಿತ್ತು.
ಆಯಾಯ ಮತ ಗಟ್ಟೆಗಳಿಗೆ ನೀಡುವ ಇಲೆಕ್ಟ್ರೋನಿಕ್ ವೋಟಿಂಗ್ ಯಂತ್ರಗಳನ್ನು ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಭದ್ರ ಕೊಠಡಿಯಿಂದ ಸಂಬಂಧಿತ ಮತ ಗಟ್ಟೆಯ ಕರ್ತವ್ಯದಲ್ಲಿರುವ ಸಿಬಂದಿ ಪಡೆದುಕೊಂಡರು. ಚುನಾವಣಾ ಸಾಮಗ್ರಿಗಳನ್ನು ಕೊಂಡೊಯ್ಯಲು ಹಾಗೂ ಅಧಿಕಾರಿಗಳ ಸಹಿತ ಸಿಬಂದಿಯನ್ನು ಆಯಾಯ ಮತಗಟ್ಟೆಗಳಿಗೆ ತಲುಪಿಸಲು ಬಸ್ ಮೊದಲಾದ ವಾಹನಗಳನ್ನು ಬಳಸಲಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳು
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಾಗಿ ಏಳು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಐಕ್ಯರಂಗದಿಂದ ಮುಸ್ಲಿಂ ಲೀಗ್ ಅಭ್ಯರ್ಥಿ ಎಂ.ಸಿ. ಕಮರುದ್ದೀನ್, ಎನ್.ಡಿ.ಎ. ಯಿಂದ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು, ಎಡರಂಗ ದಿಂದ ಸಿಪಿಎಂನ ಎಂ. ಶಂಕರ ರೈ ಮಾಸ್ತರ್, ಸ್ವತಂತ್ರ ಅಭ್ಯರ್ಥಿಗಳಾಗಿ ಗೋವಿಂದನ್ ಬಿ. ಆಲಿಂತಾಯ, ಕಮರುದ್ದೀನ್ ಎಂ.ಸಿ., ಜೋನ್ ಡಿ’ಸೋಜ ಐ., ರಾಜೇಶ್ ಬಿ. ಕಣದಲ್ಲಿದ್ದಾರೆ.
ಉಪಚುನಾವಣೆ
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅಬ್ದುಲ್ ರಝಾಕ್ ಅವರ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ.
ಮೊಬೈಲ್ ನಿಷೇಧ
ಮತಗಟ್ಟೆಗಳ 100 ಮೀ. ವ್ಯಾಪ್ತಿಯಲ್ಲಿ ಪೋಲಿಂಗ್ ಏಜೆಂಟರು ಬಳಸುವ ಮೊಬೈಲ್ ಫೋನ್ ಸಹಿತ ವಿದ್ಯುನ್ಮಾನ ಉಪಕರಣಗಳನ್ನು ತರಬಾರದು ಎಂದು ಜಿಲ್ಲಾ ಚುನಾವಣೆ ಅಧಿ ಕಾರಿಯಾಗಿರುವ ಜಿಲ್ಲಾ ಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ವೀಡಿಯೋ ಚಿತ್ರೀಕರಣ
ಎಲ್ಲ ಮತಗಟ್ಟೆಗಳಲ್ಲಿ ಮತದಾನದ ವೀಡಿಯೋ ಚಿತ್ರೀಕರಣ ನಡೆಸಲಾಗುವುದು ಎಂದು ಡಿ.ಸಿ. ಡಾ| ಡಿ. ಸಜಿತ್ ಬಾಬು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.