ಮತವ ಹಾಕು ಮನುಸ ನೀ ಚುನಾವಣೆಯ ದಿವಸ
ಕಸ ಸಂಗ್ರಹ ವಾಹನದಲ್ಲಿ ಮೊಳಗುತ್ತಿದೆ ಜಾಗೃತಿ ಹಾಡು
Team Udayavani, Apr 15, 2019, 6:00 AM IST
ಸುಳ್ಯ: ನಗರದ ಮನೆ-ಮನೆ, ಅಂಗಡಿ, ಮಾರುಕಟ್ಟೆಯಿಂದ ದಿನವಿಡಿ ಕಸ ಒಯ್ಯುವ ವಾಹನವೀಗ ಮತದಾನದ ಜಾಗೃತಿ ಸಂದೇಶ ಸಾರುತ್ತಿದೆ. ಮತವ ಹಾಕು ಮನುಸ ಚುನಾವಣೆಯ ದಿವಸ… ಎನ್ನುವ ಹಾಡು ಕೇಳಿಸಿ ಗಮನ ಸೆಳೆಯುತ್ತಿದೆ.
ನಗರದ ವಾರ್ಡ್‌ಗಳಲ್ಲಿ ಸಂಚರಿಸುವ ಕಸ ಸಂಗ್ರಹ ವಾಹನಗಳಲ್ಲಿ ಈ ಹಾಡು ಜನರಿಗೆ ಮತದಾನದ ಮಹತ್ವ ಸಾರುತ್ತಿದೆ. ಸ್ವೀಪ್ ಸಮಿತಿ ಜಾಗೃತಿ ಹಾಡನ್ನು ಪ್ರಾಯೋಜಿಸಿದೆ.
ಮತದಾನದ ಮಹತ್ವ
“ಒಳಿತು ಮಾಡು ಮನುಸ ನೀ ಇರೋದೆ ಮೂರು ದಿವಸ’ ಎನ್ನುವ ಕನ್ನಡ ಹಾಡಿನ ಟ್ಯೂನ್‌ಗೆ ಚುನಾವಣೆ ಜಾಗೃತಿ ಗೀತೆ ರೂಪದಲ್ಲಿ ಪದ್ಯ ಬರೆದು ಹಾಡಲಾಗಿದೆ. ಐದು ನಿಮಿಷದ ಈ ಹಾಡಿನಲ್ಲಿ ಮತದಾನದ ಮಹತ್ವ ಸಾರಲಾಗಿದೆ. ಮತದಾನ ಮಾಡಿದ ಮೇಲೆ ನಿಮ್ಮನ್ನ ಜಾಣ ಅನ್ನುತ್ತಾರೆ ಎನ್ನುವ ಸಾಲು ಇದರಲ್ಲಿದೆ. ನೀವು ಒಂದು ಮತ ಹಾಕಬೇಕು, ಮತವೇ ನಿಮ್ಮ ಹಕ್ಕು, ಮತದಾನ ಕಡ್ಡಾಯ ಎನ್ನುತ್ತಲೇ ಮತ ಚಲಾಯಿಸಲು ಮರೆಯಬೇಡಿ ಎಂದು ಹಾಡಿನ ಮೂಲಕ ಎಚ್ಚರಿಸಲಾಗುತ್ತಿದೆ.
ಓಟು ಮಾರಿಕೊಳ್ಳಬೇಡಿ, ನಾಡಿಗಾಗಿ ಜಾಗೃತಿ ಇರಲಿ ಅಣ್ಣಾ ಎಂದು ವಿನಂತಿಸುತ್ತಾ, ನೀನು ಚಲಾಯಿಸುವುದು ಒಂದು ಮತ ಮಾತ್ರ ಎಂದು ತಿಳಿಯಬೇಡಿ. ಅದು ದೇಶಕ್ಕಾಗಿ ಬಹಳ ಮುಖ್ಯ ಎನ್ನುವ ಸಂದೇಶ ಸಾರುತ್ತಾ ಸಾಗುವುದು ವಿಶೇಷ.
ಸೈರನ್ ಜಾಗದಲ್ಲಿ ಹಾಡು
ನ.ಪಂ.ನಲ್ಲಿ ಕಸ ಸಂಗ್ರಹಕ್ಕೆ ಮೂರು ವಾಹನಗಳು ಇವೆ. ಇದರಲ್ಲಿ ಎರಡು ವಾಹನ ಮನೆ-ಮನೆ ಸಂಚರಿಸಿದರೆ, ಇನ್ನೊಂದು ವಾಹನ ಮುಖ್ಯ ರಸ್ತೆಯ ಅಂಗಡಿ, ಮಾರುಕಟ್ಟೆಗಳಲ್ಲಿ ಕಸ ಸಂಗ್ರಹಿಸುತ್ತದೆ. ಈ ಮೂರು ವಾಹನಗಳಲ್ಲಿ ಈ ಜಾಗೃತಿ ಹಾಡು ಬಳಸಲಾಗಿದೆ. ನ.ಪಂ. ವತಿಯಿಂದ ಹಾಡು ಡೌನ್‌ಲೋಡ್ ಮಾಡಿ, ಪೆನ್‌ಡ್ರೈವ್ ಬಳಸಿ ಲಘು ಧ್ವನಿವರ್ಧಕದ ಮೂಲಕ ಬಿತ್ತರಿಸಲಾಗುತ್ತಿದೆೆ. ಕಸ ಲೋಡ್, ಅನ್‌ಲೋಡ್, ಸಂಚಾರದ ವೇಳೆಯಲ್ಲಿ ಹಾಡು ಮತ್ತೆ -ಮತ್ತೆ ಪುನರಾವರ್ತನೆ ಆಗುತ್ತದೆ. ಹಾಗಾಗಿ ಪೇಟೆಯಲ್ಲಿ “ಮತವ ಹಾಕು ಮನುಷ್ಯ ನೀ ಚುನಾವಣೆ ದಿವಸ…’ ಎನ್ನುವ ಹಾಡು ಕೇಳುತ್ತಲಿದೆ.
ಜಾಗೃತಿ ಹಾಡು
ಕಳೆದ ಶುಕ್ರವಾರದಿಂದ ಈ ಹಾಡನ್ನು ಹಾಕುತ್ತಿದ್ದೇವೆ. ಕಸ ವಾಹನಕ್ಕೆ ತನ್ನಿ ಎನ್ನುವ ಸೈರನ್ ಜತೆಗೆ ಮತದಾನ ಜಾಗೃತಿ ಹಾಡಿನ ಮೂಲಕ ಸಂಚಾರ ಆರಂಭಿಸಿದ್ದೇವೆ. ಕಸ ಹಾಕುವ ವೇಳೆ ಈ ಹಾಡು ನಾಗರಿಕರ ಗಮನ ಸೆಳೆಯುತ್ತಿದೆ.
– ರಮೇಶ್
ವಾಹನ ಚಾಲಕ
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Aranthodu ಕಲ್ಲುಗುಂಡಿ: ಕಾರು ಪಲ್ಟಿ, ನಾಲ್ವರಿಗೆ ಗಾಯ
Vitla: ಉದ್ಘಾಟನೆಯಾದ ನಾಡಕಚೇರಿ ತೆರೆದಿಲ್ಲ !
Vitla: ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾರಿನ ಬ್ರೇಕ್ ಫೇಲ್ ಆಗಿ ಪಲ್ಟಿ
Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.