ಬದುಕು ಕಮರಿಹೋಗುವ ಮೊದಲು ಎಚ್ಚೆತ್ತುಕೊಳ್ಳಿ


Team Udayavani, May 31, 2019, 6:00 AM IST

smoking

ಅಮಲು ಪದಾರ್ಥಗಳು ಮನುಷ್ಯನ ಶತ್ರುಗಳು ಎಂದರೂ ತಪ್ಪಿಲ್ಲ. ಒಮ್ಮೆ ಸೇವಿಸಿದರೆ ಮತ್ತೆ ಮತ್ತೆ ಬೇಕೆನಿಸುವ ಇವುಗಳು ಮನುಷ್ಯನ ಜೀವನವನ್ನು ಸಂಪೂರ್ಣವಾಗಿ ನಾಶ ಮಾಡಿಬಿಡುತ್ತದೆ. ತಂಬಾಕು ಈ ಗುಂಪಿಗೆ ಸೇರಿದ್ದು. ಕೇವಲ ಚಟಕ್ಕೆ ಬಿದ್ದಿರುವ ವ್ಯಕ್ತಿಯನ್ನು ಮಾತ್ರವಲ್ಲ ಅವನ ಕುಟುಂಬದವರ ಖುಷಿಯನ್ನೂ ಕಿತ್ತು¤ಕೊಳ್ಳುವ ತಂಬಾಕಿನಿಂದ ಸಂಪೂರ್ಣ ಮುಕ್ತಿ ಹೊಂದುವ ಪ್ರತಿಜ್ಞೆಯನ್ನು ಈ ದಿನ ಕೈಗೊಳ್ಳೊಣ.

ಕೆಲವೊಂದು ಅಭ್ಯಾಸಗಳೇ ಹಾಗೆ ಪ್ರಾಣಕ್ಕೆ ಅಪಾ ಯವೆಂದು ತಿಳಿದಿದ್ದರೂ ಬಿಡಲಾಗದ ಪರಿ ಸ್ಥಿತಿ. ಕೆಲವೊಂದು ಆಟ, ಚಟಗಳು ಈ ರೀತಿ ಮನುಷ್ಯರನ್ನು ದಾಸರನ್ನಾಗಿ ಮಾಡಿ ಕೊಂಡು ಅವರನ್ನು ಶಾಶ್ವತವಾಗಿ ಸಾವಿನ ಕೂಪಕ್ಕೆ ತಳ್ಳಿ ಬಿಡುತ್ತದೆ. ಅದರಲ್ಲಿ ತಂಬಾಕು ಸೇವನೆಯೂ ಒಂದು. ದೃಶ್ಯ, ಶ್ರವ್ಯ ಮಾಧ್ಯಮ ಗಳು ನಿರಂತರವಾಗಿ ತಂಬಾಕು ಸೇವನೆ ಪ್ರಾಣಕ್ಕೆ ಹಾನಿ ಎಂದು ಬಿಂಬಿಸಿದರೂ ಬುದ್ದಿ ವಂತ  ರೆಲ್ಲರೂ ಅದನು ಸೇವಿಸುವುದನ್ನು ಮಾತ್ರ ಬಿಟ್ಟಿಲ್ಲ. ತಂಬಾಕು ಒಂದು ಅಮಲು ಪದಾ ರ್ಥ ವಾಗಿದ್ದು, ಸಿಗರೇಟ್‌, ಬೀಡಿಗಳಲ್ಲಿ ಇದರ ಬಳಕೆ ಅಧಿಕವಾಗಿರುತ್ತದೆ. ಸತತವಾದ ಇದರ ಸೇವ ನೆಯೂ ಮನುಷ್ಯನಿಗೆ ಕ್ಯಾನ್ಸರ್‌ ಹಾಗೂ ಹೃದಯ ಸಂಬಂಧಿ ರೋಗಗಳಿಗೆ ಕಾರಣವಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯರು 1987ರಲ್ಲಿ ತಂಬಾಕು ರಹಿತ ದಿನವನ್ನು ಆಚರಿಸಲು ಆರಂಭಿಸಿದರು. ಇದರ ನಂತರ ಪ್ರತಿ ವರ್ಷ ಮೇ 31ನೇ ತಾರೀಖನ್ನು ವಿಶ್ವ ತಂಬಾಕು ವಿರೋಧಿ ದಿನವನ್ನಾಗಿ ಎಲ್ಲ ರಾಷ್ಟ್ರಗಳು ಆಚರಿಸುತ್ತವೆ. ತಂಬಾಕಿನ ನಿರಂತರ ಸೇವನೆಯಿಂದ ಉಂಟಾಗುವ ಹಾನಿಗಳನ್ನು ಜನರಿಗೆ ತಿಳಿಸುವುದೇ ಈ ದಿನದ ಪ್ರಮುಖ ಉದ್ದೇಶವಾಗಿದೆ.

ಮೊದಲಾದ ವಿಚಾರಗಳ ಬಗೆಗೆ ಜಾಗೃತಿ ಉಂಟು ಮಡುವುದು ಈ ತಂಬಾಕು ವಿರೋಧಿ ದಿನಾಚರಣೆಯ ವಿಶೇಷತೆ.

ಭಾರತ ಮತ್ತು ತಂಬಾಕು ಸೇವನೆ
ಪ್ರಪಂಚದಲ್ಲಿ 1.1 ಬಿಲಿಯನ್‌ ಜನರು ತಂಬಾಕನ್ನು ಸೇವಿ ಸುತ್ತಾರೆ. ಭಾರತದಲ್ಲಿ 267 ಮಿಲಿ ಯನ್‌ ಜನರು ಈ ಮಾದಕ ವಸ್ತುವಿನ ದಾಸರಾ ಗಿದ್ದಾರೆ. ಇದರಲ್ಲಿ ಶೇಕಡಾ 14ರಷ್ಟು ಮಹಿಳೆ ಯರೂ ಇದ್ದಾರೆ ಎಂಬುದು ಶೋಚ ನೀಯ ವಿಷಯ. ಇತ್ತೀಚೆಗೆ ಮಕ್ಕಳಲ್ಲಿ ತಂಬಾಕು ಸೇವನೆಯ ಚಟ ಹೆಚ್ಚುತ್ತಿರುವುದು ಗಂಭೀರ ವಾಗಿ ಪರಿಗಣಿಸಬೇಕಾದ ವಿಷಯ. 13ರಿಂದ 15ವರ್ಷದೊಳಗಿ ಮಕ್ಕಳಲ್ಲಿ 14.6 ಶೇಕಡಾ ಮಕ್ಕಳು ಈಗಾಗಲೇ ತಂಬಾಕು ಸೇವನೆ ಚಟ ವನ್ನಾಗಿ ಸಿಕೊಂಡಿದ್ದಾರೆ. ಪ್ರತಿನಿತ್ಯ ತಂಬಾಕು ಸೇವನೆ ಯಿಂದ ಮರಣವನ್ನಪ್ಪುವವರ ಸಂಖ್ಯೆ ಸಾವಿ ರವನ್ನು ದಾಟುತ್ತಿ ದೆ.

ಆಧುನಿಕತೆಯತ್ತ ಓಡುತ್ತಿರುವ ಸಮಾಜ. ಸಂಬಂಧ, ಪ್ರೀತಿ, ಸ್ನೇಹಗಳಿಗಿಂತ ಪ್ರತಿಷ್ಠೆ, ಹಣದ ಆಮಿಷಗಳು ಹೆಚ್ಚಾದಾಗ ಜನರು ತಪ್ಪು ದಾರಿ ಹಿಡಿಯುವುದು. ಒಂದು ವರ್ಗ ಹಣ ವಿಲ್ಲದೆ ಚಿಂತೆಯಲ್ಲಿ ಮಾದಕ ವಸ್ತುಗಳಿಗೆ ದಾಸರಾ ಗುತ್ತಿದ್ದಾರೆ. ಅದೇ ಸಮಯದಲ್ಲಿ ಹಣ, ಅಧಿಕ ಾರದ ಸುಲಭ ಸಂಪಾದನೆಗಾಗಿ ಇನ್ನೊಂದು ವರ್ಗ ಇದೇ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ತಂಬಾಕು ಉತ್ಪನ್ನಗಳ ಮೇಲೆ ಸರಕಾರ ತೆರಿಗೆಗಳನ್ನು ಅಧಿಕ ಮಾಡಿದರೂ ಇವುಗಳ ಮಾರಾಟದಲ್ಲಿ ಮಾತ್ರ ಯಾವುದೇ ಕುಸಿತ ಉಂಟಾಗಲಿಲ್ಲ.

ಜೀವನ ಎಂಬುದು ತುಂಬಾ ಅಮೂಲ್ಯ ವಾದುದು. ಅದನ್ನು ನಮ್ಮ ಕೈಯಾರೆ ಹಾಳು ಮಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಬದುಕು ಅರ್ಥ ಕಳೆದುಕೊಳ್ಳವುದಕ್ಕಿಂತ ಮೊದಲು ಎಚ್ಚೆತ್ತು ಕೊಂಡು ತಂಬಾಕಿಗೆ ದಾಸರಾ ಗುವು ದನ್ನು ಬಿಟ್ಟು ಬಿಡೋಣ. ಉತ್ತಮ ಕೌನ್ಸೆಲಿಂಗ್‌, ಕುಟುಂಬದವರ ಪ್ರೀತಿ, ಸ್ನೇಹದ ಮೂಲಕ ತಂಬಾಕು ದಾಸರಾದವರಿಗೆ ಬದುಕಲು ಮತ್ತೂಂದು ಅವಕಾಶ ಕಲ್ಪಿಸಿಕೊಡೋಣ.

ಶ್ವಾಸಕೋಶದ ಆರೋಗ್ಯಕ್ಕೆ ತಂಬಾಕು ತ್ಯಜಿಸಿ
ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆ ತಂಬಾಕು ರಹಿತ ದಿನವನ್ನು ಆಚರಿಸುವಾಗ ಒಂದೊಂದು ಹೊಸ ಯೋಜನೆಗಳನ್ನಿಟ್ಟುಕೊಂಡಿರುತ್ತದೆ. ಹೆಚ್ಚಾಗಿ ಇವುಗಳೆಲ್ಲಾ ತಂಬಾಕು ಸೇವನೆಯ ದುಷ್ಪರಿಣಾಮವನ್ನು ಜನರಿಗೆ ತಿಳಿಸುವಂತದ್ದೇ ಆಗಿರುತ್ತದೆ. ಈ ಸಲ ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ (tobbacco and laungs health) ವಿಶೇಷ ಸಂದೇ ಶ ದೊಂದಿಗೆ ಆಚರಿಸಲಾಗುತ್ತದೆ. ಇದರ ಮುಖ್ಯ ಅಂಶಗಳು ಹೀಗಿವೆ.

-ತಂಬಾಕು ಸೇವನೆಯಿಂದ ಶ್ವಾಸಕೋಶಕ್ಕೆ ಉಂಟಾಗುವ ಕ್ಯಾನ್ಸರ್‌ ಹಾಗೂ ಇತರ ಮಾರಕ ರೋಗಗಳು ಕುರಿತು ಅರಿವು ಮೂಡಿಸುವುದು.
– ಮನುಷ್ಯರ ದೇಹದಲ್ಲಿ ಶ್ವಾಸಕೋಶ ನಿರ್ವಹಿಸುವ ಪಾತ್ರ ಹಾಗೂ ಅದರ ಪ್ರಾಮುಖ್ಯ.

-ಸುಶ್ಮಿತಾಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

3(1)

Mangaluru: ಪ್ಲಾಸ್ಟಿಕ್‌ ಬ್ರಹ್ಮರಾಕ್ಷಸನ ತಡೆವ ಮಂತ್ರದಂಡ ಬೇಕಿದೆ !

11

Kulai: ಬೃಹತ್‌ ಟ್ರಕ್‌ ಓಡಾಟದಿಂದ ರಸ್ತೆಗೆ ಹಾನಿ

10

Lalbagh: ಪಾಲಿಕೆ ಚುನಾವಣೆ ಸನ್ನಿಹಿತ; ಮೀಸಲಾತಿಯದೇ ಆತಂಕ!

7–ullala

Ullala: ಇನ್ಸ್‌ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆ ಮುಖಂಡನಿಗೆ ಮುಸ್ಲಿಂ ಯುವಕ ಹಲ್ಲೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.