ಗೋಳಿತ್ತೂಟ್ಟು: ಲಾರಿ ಚಾಲಕನ ಕಟ್ಟಿ ಹಾಕಿ ದರೋಡೆ

ಕಾರಿನಲ್ಲಿ ಬಂದ ತಂಡದ ಕೃತ್ಯ

Team Udayavani, Mar 26, 2019, 6:30 AM IST

lorry-kasavu

ಉಪ್ಪಿನಂಗಡಿ: ಗೋಳಿತ್ತೂಟ್ಟು ಗ್ರಾಮದ ಶಿರ್ಡಿಗುಡ್ಡೆಯಲ್ಲಿ ರಾ. ಹೆ. 75ರಲ್ಲಿ ರವಿವಾರ ತಡರಾತ್ರಿ 3 ಮಂದಿಯ ತಂಡವೊಂದು ಲಾರಿಯನ್ನು ತಡೆದು ದರೋಡೆ ಮಾಡಿರುವ ಘಟನೆ ಸಂಭವಿಸಿದೆ.

ಚಿಕ್ಕಬಳ್ಳಾಪುರದಿಂದ ಮಂಗಳೂರು ಕಡೆಗೆ ಹಿಂದೂಸ್ಥಾನ್‌ ಕಂಪೆನಿಗೆ ಸೇರಿದ ಸೋಪು, ಸೋಪಿನ ಹುಡಿ ಮೊದಲಾದವುಗಳನ್ನು ತರುತ್ತಿದ್ದ ಲಾರಿಯನ್ನು ನಸುಕಿನ ಜಾವ 2.30ರ ಸುಮಾರಿಗೆ ನಂಬರ್‌ ಪ್ಲೇಟ್‌ ಇಲ್ಲದ ಬಿಳಿ ಇಂಡಿಕಾ ಕಾರಿನಲ್ಲಿ ಬಂದ ತಂಡ ಅಡ್ಡಗಟ್ಟಿತ್ತು. ಬಳಿಕ ಚಾಲಕ ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ಅಂಬರೀಷ್‌ ಬಾಯಿಗೆ ಬಟ್ಟೆ ತುರುಕಿ, ಹಲ್ಲೆ ನಡೆಸಿ, ಕಟ್ಟಿ ಹಾಕಿ ಅವರಲ್ಲಿದ್ದ 5,200 ರೂ. ಮತ್ತು 2 ಸಾ. ರೂ. ಮೌಲ್ಯದ ಮೊಬೈಲ್‌ಫೋನನ್ನು ದೋಚಿದ್ದಾರೆ ಎಂದು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾನೆ 5-30ರ ವೇಳೆಗೆ ಅದೇ ಸಂಸ್ಥೆಯ ಇನ್ನೊಂದು ಲಾರಿ ಬಂದಿದ್ದು, ಆಗ ದರೋಡೆ ಮಾಡಿರುವುದು ಬೆಳಕಿಗೆ ಬಂತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಚಾಲಕ ಅಂಬರೀಷ್‌ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

5 ವರ್ಷ ಹಿಂದೆಯೂ ನಡೆದಿತ್ತು
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಇದೇ ರೀತಿ ಲಾರಿಯೊಂದರ ಚಾಲಕನನ್ನು ಕಟ್ಟಿ ಹಾಕಿ ಉಪ್ಪಿನಂಗಡಿಯ ಪಂಜಾಲದಲ್ಲಿ ದರೋಡೆ ಮಾಡಲಾಗಿತ್ತು. ಆ ಪ್ರಕರಣದ ಆರೋಪಿಗಳು ಸೆರೆ ಸಿಕ್ಕಿರಲಿಲ್ಲ.

ತನಿಖೆ ಬಳಿಕ ಸ್ಪಷ್ಟ ಚಿತ್ರಣ
ನಾವು ಲಾರಿಯಲ್ಲಿರುವ ಬಾಕ್ಸ್‌ಗಳನ್ನು ಖಾಲಿ ಮಾಡುತ್ತಿದ್ದೇವೆ. ಬಾಕ್ಸ್‌ನೊಳಗೆ ಶಂಕಾಸ್ಪದ ವಸ್ತುಗಳಿರುವ ಬಗ್ಗೆ ಈಗ ಹೇಳಲು ಸಾಧ್ಯವಿಲ್ಲ. ತನಿಖೆ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾರಿಯಿಂದ ಕೆಲವು ಬಾಕ್ಸ್‌ ಕಳವು
ಲಾರಿಯಲ್ಲಿದ್ದ ಮೂರು ಬಾಕ್ಸ್‌ಗಳನ್ನು ದರೋಡೆಕೋರರು ಒಡೆದು ನೋಡಿದ್ದಾರೆ. ಅದನ್ನು ಚೆಲ್ಲಾಪಿಲ್ಲಿ ಮಾಡಿ ಅಲ್ಲಿಯೇ ಬಿಟ್ಟು ಹೋಗಿದ್ದು, ಅದರಲ್ಲಿ ಅವರು ಏನನ್ನು ಹುಡುಕಾಡಿದ್ದಾರೆ ಎಂಬ ಕುತೂಹಲ ಮೂಡಿದೆ. ಕೆಲವು ಬಾಕ್ಸ್‌ಗಳನ್ನು ಜತೆಯಲ್ಲಿ ಕೊಂಡೊಯ್ದಿದ್ದಾರೆ ಎಂದೂ ತಿಳಿದು ಬಂದಿದೆ. ಘಟನೆ ಸಂಭವಿಸುವ ಹೊತ್ತಿಗೆ ಅನತಿ ದೂರಲ್ಲಿ ಜೀಪೊಂದು ಸಂಚರಿಸುತ್ತಿತ್ತೆಂದು ತಿಳಿಸಲಾಗಿದ್ದು, ಇದು ದರೋಡೆಕೋರರ ಬೆಂಗಾವಲು ಕೆಲಸ ಮಾಡುತ್ತಿರಬೇಕೆಂದು ಊಹಿಸಲಾಗಿದೆ.

ಟಾಪ್ ನ್ಯೂಸ್

MH–Shinde-pawr

Mahayuti: ಈ ಬಾರಿ ನಾನು ದೇವೇಂದ್ರ ಫ‌ಡ್ನವೀಸ್‌ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

FOOD-DELIVERY

E-Commerce: ಆಹಾರ ಪದಾರ್ಥ ಪ್ರತ್ಯೇಕ ಪ್ಯಾಕ್‌ ಕಡ್ಡಾಯ: ಪ್ರಾಧಿಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

11

Subrahmanya: ಅಂಗಡಿಗಳ ಮೇಲೆ ದಾಳಿ; ತಂಬಾಕು ಉತ್ಪನ್ನಗಳು ವಶಕ್ಕೆ

Uppinangady: ತಲೆಗೆ ಕಲ್ಲಿನಿಂದ ಜಜ್ಜಿ ಕಾರ್ಮಿಕನ ಕೊ*ಲೆ

Uppinangady: ತಲೆಗೆ ಕಲ್ಲಿನಿಂದ ಜಜ್ಜಿ ಕಾರ್ಮಿಕನ ಕೊ*ಲೆ

dw

Sullia: ಇಲಿ ಪಾಷಾಣ ಸೇವಿಸಿದ್ದ ಯುವಕ ಸಾವು

12

Puttur: ಪೆರ್ನಾಜೆ; ಕೃಷಿ ತೋಟಕ್ಕೆ ಕಾಡಾನೆ ಲಗ್ಗೆ

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

MH–Shinde-pawr

Mahayuti: ಈ ಬಾರಿ ನಾನು ದೇವೇಂದ್ರ ಫ‌ಡ್ನವೀಸ್‌ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.