“ಆಡಳಿತ ವೈಫಲ್ಯ: ಬಿಜೆಪಿಗೆ ಸೋಲಿನ ಆಘಾತ’
ಮತಯಾಚನೆ ಪಾದಯಾತ್ರೆ
Team Udayavani, Apr 9, 2019, 6:00 AM IST
ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ಪಾದಯಾತ್ರೆ ಮಾಡಿದರು.
ಬಂಟ್ವಾಳ: ಅಭಿವೃದ್ದಿ ಕುರಿತು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರ ಆಡಳಿತ ವೈಫಲ್ಯವೇ ಈ ಬಾರಿ ಬಿಜೆಪಿಗೆ ಸೋಲಿನ ಆಘಾತವನ್ನು ಕೊಡಲಿದೆ ಎಂದು ಹಿರಿಯ ನ್ಯಾಯವಾದಿ, ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ಆರೋಪ ಮಾಡಿದರು.
ಅವರು ಎ. 6ರಂದು ಬಂಟ್ವಾಳ ಪುರಸಭಾ ವ್ಯಾಪ್ತಿಯ ಶಾಂತಿಯಂ ಗಡಿ ಪರಿಸರದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಮತಯಾಚನೆ ಪಾದಯಾತ್ರೆ ಕೈಗೊಂಡು ಮಾತನಾಡಿ, ನಳಿನ್ ಎರಡು ಅವಧಿ ಸಂಸದರಾದರೂ ಮಂಗಳೂರು ನಗರವನ್ನು ಅಭಿವೃದ್ಧಿ ಮಾಡಿಸುವಲ್ಲಿ ಸಂಪೂರ್ಣ ಸೋಲು ಕಂಡಿದ್ದಾರೆ.
ಮಿಥುನ್ ರೈ ಒಬ್ಬ ಸಮರ್ಥ, ಯುವ ಹಾಗೂ ಸೃಜನಶೀಲ ವ್ಯಕ್ತಿತ್ವ ಹೊಂದಿರುವ ಅಭ್ಯರ್ಥಿ. ಜನರ ಒಲವು ಕಾಂಗ್ರೆಸ್ ಪರವಾಗಿದೆ ಎಂದವರು ಭರವಸೆ ವ್ಯಕ್ತ ಮಾಡಿದರು. ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ.
ಬೆಲೆ ಏರಿಕೆಯಿಂದಾಗಿ ಬಡವರು, ಸಾಮಾನ್ಯ ವರ್ಗದವರ ದೈನಂದಿನ ಖರ್ಚು ನಿರ್ವಹಣೆಗಾಗಿ ಸಾಕಷ್ಟು ಕಷ್ಟವಾಗುತ್ತಿದೆ. ಈ ದೇಶವನ್ನು ಉಸಿರುಗಟ್ಟಿದ ವಾತಾವರಣದಿಂದ ಮುಕ್ತಗೊಳಿಸಲು ಜನತೆ ಮೋದಿ ಯವರನ್ನು ತಿರಸ್ಕರಿಸಲಿದ್ದಾರೆ ಎಂದರು.
ಶಾಂತಿಯಂಗಡಿ, ಪರ್ಲಿಯಾ, ಮಧ್ವ, ತಾಳಿಪಡು³, ಕೊಡಂಗೆ, ಕೈಕಂಬ ಪರಿಸರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದ ಅಶ್ವನಿ ಕುಮಾರ್ ರೈ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚನೆ ನಡೆಸಿದರು.
ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಮಾಜಿ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಮಾಜಿ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಯುವ ಕಾಂಗ್ರೆಸಿನ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಸದಸ್ಯರಾದ ಮಹಮ್ಮದ್ ಶರೀಫ್ ಶಾಂತಿಯಂಗಡಿ, ಲುಕ್ಮಾನ್ ಕೈಕಂಬ, ಇರಾ ಗ್ರಾ.ಪಂ. ಅಧ್ಯಕ್ಷ ರಝಾಕ್ ಕುಕ್ಕಾಜೆ, ಹಂಝ ಮಂಚಿ, ಪ್ರಮುಖರಾದ ಅಮೀರ್ ತುಂಬೆ, ಸ್ಟೀವನ್ ಡಿ’ಸೋಜಾ, ಗೋಪಾಲಕೃಷ್ಣ ತುಂಬೆ, ಮಹಮ್ಮದಾಲಿ ಶಾಂತಿ ಯಂಗಡಿ, ಅಶ್ರಫ್ ಕೈಕಂಬ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.