‘ಮನೆ ಮನೆಗೆ ಕಾಂಗ್ರೆಸ್ ನಡಿಗೆ’
Team Udayavani, Oct 2, 2017, 4:28 PM IST
ನಿಡ್ಪಳ್ಳಿ: ಸರಕಾರದ ಸಾಧನೆ ಬಗ್ಗೆ ಜನರಿಗೆ ಅರಿವು ನೀಡಲು ‘ಮನೆ ಮನೆಗೆ ಕಾಂಗ್ರೆಸ್ ನಡಿಗೆ’ ಕಾರ್ಯಕ್ರಮದ ಅಂಗವಾಗಿ ನನ್ನ ಅನುದಾನದಲ್ಲಿ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆಗೆ ಬಂದಿದ್ದೇನೆ. ಪಕ್ಷ ಭೇದ ಮಾಡದೆ ಅಭಿವೃದ್ಧಿಗೆ ಆದ್ಯತೆ ನೀಡುವುದೇ ಗ್ರಾಮ ಭೇಟಿಯ ಉದ್ದೇಶ. ಪ್ರತಿ ದಿನ ಬೇರೆ ಬೇರೆ ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಪುತ್ತೂರು ಶಾಸಕಿ, ಸರಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಅವರು ಹೇಳಿದರು.
ಶಿಲಾನ್ಯಾಸ
ಪಾಣಾಜೆ ಗ್ರಾಮಕ್ಕೆ ಈಚೆಗೆ ಭೇಟಿ ನೀಡಿದ ಅವರು, ಸಂಜೆಯವರೆಗೂ ಗ್ರಾಮದಲ್ಲಿದ್ದ ಅವರು, ಹಲವು ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿದರು. ಗ್ರಾಮದ ಪಿಲಾವೂರು, ನೀರಮೂಲೆ, ಸೂರಂಬೈಲು, ಭರಣ್ಯ, ಸುಡ್ಕುಳಿ, ಆರ್ಲಪದವು ಶಾಲೆ ಬಳಿ, ನಡುಕಟ್ಟ, ಬೇರಿಕೆ, ಕೀಲಂಪಾಡಿ, ಕಲ್ಲಪದವು, ಬೊಳ್ಳಿಂಬಳ, ಗುರಿಕೇಲು, ಅಂಗಡಿಮಜಲು ಪ್ರದೇಶಗಳಿಗೆ ಭೇಟಿ ನೀಡಿ, ರಸ್ತೆ ಕಾಂಕ್ರೀಟೀಕರಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಕೆದಂಬಾಡಿ ಭರಣ್ಯ ನಡುಕಟ್ಟ ಕೊಳವೆ ಬಾವಿ ಪೈಪ್ ಲೈನ್ ಉದ್ಘಾಟನೆ ಮತ್ತು ನೀರಿನ ಟ್ಯಾಂಕ್ ರಚನೆಗೆ ಶಂಕುಸ್ಥಾಪನೆ ಮಾಡಿ ಶುಭ ಹಾರೈಸಿದರು.
ಸಮಾಲೋಚನೆ
ಗ್ರಾಮದ ಅಲ್ಲಲ್ಲಿ ಶಾಸಕರನ್ನು ಪಕ್ಷದ ಮುಖಂಡರು ಸ್ವಾಗತಿಸಿದರು. ಅಭಿವೃದ್ಧಿ ಕೆಲಸಗಳ ಬಗ್ಗೆ ಸಮಾಲೋಚನೆ ನಡೆಸಿದರು. ಮನವಿಗಳನ್ನು ಸ್ವೀಕರಿಸಿದ ಶಾಸಕರು, ಸ್ಪಂದಿಸುವ ಭರವಸೆ ನೀಡಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹಾಜಿ ಬಡಗನ್ನೂರು, ಅಮಲ ರಾಮಚಂದ್ರ, ಕೆಡಿಪಿ ಸದಸ್ಯ ಕೃಷ್ಣಪ್ರಸಾದ ಆಳ್ವ, ಪುಷ್ಪ ರಾಜ್ ಶೆಟ್ಟಿ ಕೋಟೆ, ಯತೀಶ್ ರೈ ಪಡ್ಯಂಬೆಟ್ಟು, ಶಿವಾನಂದ ಮಣಿ ಯಾಣಿ ನಡುಕಟ್ಟ, ರೋಶನ್ ರೈ ಬನ್ನೂರು, ನಾಗರಾಜ್ ಘಾಟೆ, ಚಂದ್ರ ಶೇಖರ ರೈ, ಜಯರಾಮ ಭಟ್ ಘಾಟೆ, ಈಶ್ವರ ಭಟ್ ಕಡಂದೇಲು, ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಗ್ರಾ.ಪಂ. ಸದಸ್ಯರಾದ ಜಗನ್ಮೋಹನ ರೈ ಕೆದಂಬಾಡಿ, ಮೈಮುನಾತುಲ್ ಮೆಹ್ರಾ, ಎ.ಕೆ. ಮಹಮ್ಮದ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಉಮ್ಮರ್ ಜನಪ್ರಿಯ, ಮಾಧವ ಮಣಿಯಾಣಿ, ಎಸ್.ಅಬೂಬಕ್ಕರ್ ಆರ್ಲಪದವು, ರಫೀಕ್ ಕಂಚಿಲ್ಕುಂಜ, ಜಯರಾಮ ಆಳ್ವ ಸೂರಂಬೈಲು, ಮಹಾಬಲೇಶ್ವರ ಭಟ್ ಗಿಳಿಯಾಲು, ಸದಾಶಿವ ರೈ ಸೂರಂಬೈಲು, ಅಬ್ದುಲ್ ರಹಿಮಾನ್, ಕೆ.ಎ. ಅಲಿ, ನಾರಾಯಣ ನಾಯಕ್ ಅಪಿನಿಮೂಲೆ, ಜಯಶ್ರೀ, ಮಂಜಪ್ಪ ಪೂಜಾರಿ, ಕೊರಗಪ್ಪ ಪೂಜಾರಿ, ಪ್ರವೀಣ ರೈ ಸೂರಂಬೈಲು, ಚನಿಯ ನಾಯ್ಕ, ನಾರಾಯಣ ನಾಯ್ಕ, ಮೋಹನ ನಾಯ್ಕ, ಅಬ್ದುಲ್ ಕಡಮಾಜೆ, ಮಹಮ್ಮದ್ ಕುಂಞ ಕಂಚಿಲ್ಕುಂಜ, ಅನಂತರಾಮ ರೈ ಕೆದಂಬಾಡಿ, ಹರಿಪ್ರಸಾದ್ ಕೊಂದಲಡ್ಕ, ರಾಮ ನಾಯ್ಕ ಕೋಟೆ, ಮಂಜುನಾಥ ನಾಯ್ಕ ಕೊಂದಲಡ್ಕ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.