ಮಕ್ಕಳ ಮನಸ್ಸಿಗೆ ಮುದ ನೀಡುವ ಗೋಡೆ ಚಿತ್ತಾರ
ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನ ಭಿತ್ತಿಗಳಲ್ಲಿ ಚಿತ್ರಾಲಂಕಾರ
Team Udayavani, Mar 24, 2019, 1:36 PM IST
ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನಲ್ಲಿ ಮನ ಸೆಳೆಯುವ ಗೋಡೆ ಚಿತ್ರಗಳು, ಕಾರ್ಟೂನ್‌ಗಳು.
ಕಡಬ: ಮಕ್ಕಳ ಮನಸ್ಸಿಗೆ ಮುದ ನೀಡುವ ಪ್ರಕೃತಿ, ಪ್ರಾಣಿ, ಪಕ್ಷಿಗಳ ಚಿತ್ರಗಳು ಕಲಾವಿದರ ಕುಂಚದಿಂದ ಗೋಡೆಗಳ ಮೇಲೆ ಮೂಡಿವೆ. ಇಂತಹ ಸುಂದರ ದೃಶ್ಯ ಕಂಡುಬರುವುದು ರಾಮ ಕುಂಜದ ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನ ಗೋಡೆಗಳ ಮೇಲೆ.
ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಇ. ಕಲ್ಲೇರಿ ಹಾಗೂ ಕಾರ್ಯದರ್ಶಿ ಕೆ. ಸೇಸಪ್ಪ ರೈ ಅವರ ಮಾರ್ಗದರ್ಶನದಲ್ಲಿ ಮನಸೆಳೆಯುವ ಗೋಡೆ ಚಿತ್ರಗಳನ್ನು ಚಿಕ್ಕಮಗಳೂರು ಮೂಲದ ಕಲಾವಿದರು ಕೆಲವು ದಿನಗಳಿಂದ ಬಿಡಿಸುತ್ತಿದ್ದಾರೆ. ಪೇಜಾವರ ಶ್ರೀಗಳ ಹುಟ್ಟೂರು ರಾಮಕುಂಜದಲ್ಲಿರುವ ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್ ಶಾಲೆಯಲ್ಲಿ ಈಗಾಗಲೇ 200ಕ್ಕೂ ಹೆಚ್ಚು ಪುಟಾಣಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ವಿಷಯಾಧಾರಿತ ಚಿತ್ರಗಳು
ಮಕ್ಕಳಿಗೂ ಚಿತ್ರಗಳೆಂದರೆ ಪ್ರೀತಿ. ಗೋಡೆ ಚಿತ್ರಗಳು ಮಕ್ಕಳು ಮತ್ತು ಪುಸ್ತಕದ ನಡುವಿನ ಬಾಂಧವ್ಯವನ್ನು ತೋರಿಸುತ್ತದೆ. ಇಲ್ಲಿ ವಿಷಯಾಧಾರಿತ ಚಿತ್ರಗಳಿದ್ದು, ಪ್ರತಿಯೊಂದು ಚಿತ್ರವೂ ಮಕ್ಕಳಿಗೆ ಸ್ಫೂರ್ತಿ ತುಂಬುವ, ಅವರ ಮನಸ್ಸನ್ನು ಉಲ್ಲಾಸಗೊಳಿಸುವ ನಿಟ್ಟಿನಲ್ಲಿ ರಚನೆಯಾಗಿವೆ. ಮಾನವೀಯ ಮೌಲ್ಯವನ್ನು ವೃದ್ಧಿಸುವ ಮತ್ತು ಮನುಷ್ಯ ಸಂಬಂಧವನ್ನು ಪರಿಚಯಿಸುವ ಚಿತ್ರಗಳನ್ನು ರಚಿಸಲಾಗಿದೆ. ಪ್ರಾಣಿ ಪಕ್ಷಿಗಳು, ಪರಿಸರ ಪ್ರಜ್ಞೆ ಮೂಡಿಸುವ ಚಿತ್ರಗಳು, ಭಾರತಾಂಬೆಯ ಚಿತ್ರ, ರಾಜ್ಯ ಮತ್ತು ರಾಷ್ಟವನ್ನು ಪ್ರತಿಬಿಂಬಿಸುವ ಮಕ್ಕಳ ಚಿತ್ರವು ಪಠ್ಯಕ್ರಮಕ್ಕೆ ಪೂರಕವಾಗಿದೆ ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿ ಕೆ. ಸೇಸಪ್ಪ ರೈ ಅವರು.
ಕಲಿಕೆಯಲ್ಲಿ ಖುಷಿ
ಮಕ್ಕಳ ಅಲೋಚನೆಯ ಅನುಗುಣವಾಗಿ ಅಂದರೆ ಜೋಕಾಲಿ, ನವಿಲು, ಮೊಲ, ಪ್ರಕೃತಿ ಹಾಗೂ ಛೋಟಾ ಭೀಮ್‌ಗಳಂತಹ ಚಿತ್ರಗಳನ್ನು ಬಿಡಿಸಲಾಗುತ್ತದೆ. ಚಿಕ್ಕ ಮಕ್ಕಳಿಗೆ ಚಿತ್ರಗಳೇ ಕಲಿಕಾ ಮಾಧ್ಯಮವಾಗಿರುವುದರಿಂದ ಅವರ ಕಲಿಕೆ ಖುಷಿಯಿಂದ ಕೂಡಿರುತ್ತದೆ.
– ನಾರಾಯಣಚಿಕ್ಕಮಗಳೂರು,
ಚಿತ್ರ ಕಲಾವಿದ
ಜೀವಂತಿಕೆಯ ಚಿತ್ರಗಳು
ಕಿಂಟರ್ ಗಾರ್ಟನ್ ಮಕ್ಕಳಿಗೆ ಇಂತಹ ಗೋಡೆ ಚಿತ್ರಗಳಿಂದ ಕಲಿಕಾ ವಿಷಯಗಳಿಗೆ ಸಹಾಯವಾಗುತ್ತದೆ. ಅಲ್ಲದೆ ಈ ಚಿತ್ರಗಳು ಗೋಡೆಗಳಿಗೆ ಜೀವಂತಿಕೆಯನ್ನು ತಂದುಕೊಡುತ್ತವೆ.
– ಲೋಹಿತಾ ಎ.
ಮುಖ್ಯ ಶಿಕ್ಷಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.