ವಾರ್ಡ್ ರಸ್ತೆ ಅಭಿವೃದ್ಧಿಗೆ ಕ್ರಮ: ಜಯಂತಿ ಬಲ್ನಾಡು
Team Udayavani, Jan 3, 2018, 4:29 PM IST
ಸಾಮೆತ್ತಡ್ಕ: ಪುತ್ತೂರು ನಗರಸಭೆಯ ಎಲ್ಲ ವಾರ್ಡ್ಗಳ ರಸ್ತೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲು ಕ್ರಮ
ಕೈಗೊಳ್ಳಲಾಗಿದೆ ಎಂದು ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದರು. 22ನೇ ವಾರ್ಡ್ನ ಸಾಮೆತ್ತಡ್ಕ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಇಂಟರ್ ಲಾಕ್ ಅಳವಡಿಸಿದ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ಸದಸ್ಯ ಎಚ್. ಮಹಮ್ಮದ್ ಆಲಿ ಮಾತನಾಡಿ, ಈ ವಾರ್ಡ್ನ ನಗರಸಭಾ ಸದಸ್ಯೆ ಉಷಾ ಧನಂಜಯ ಆಚಾರ್ಯ ಅವರ ಕೋರಿಕೆಯಂತೆ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ನಗರಸಭೆ ಕೈಗೆತ್ತಿಕೊಂಡಿದೆ. ನಗರಸಭೆಯ ಪ್ರಸ್ತುತ ಆಡಳಿತ ಅವಧಿ ಮುಗಿಯುವ ಮೊದಲು ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಸಾಮೆತ್ತಡ್ಕ ಜಂಕ್ಷನ್ನಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗುವುದು. ಪಾರ್ಕ್ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಸುಂದರಿ ಟೀಚರ್ ತೆಂಗಿನಕಾಯಿ ಒಡೆದು ಶುಭ ಹಾರೈಸಿದರು. ನಗರಸಭೆ ಸದಸ್ಯರಾದ ಉಷಾ ಧನಂಜಯ ಆಚಾರ್ಯ, ಶಕ್ತಿ ಸಿನ್ಹಾ, ಜೆಸಿಂತಾ ಮಸ್ಕರೇನಸ್, ಸ್ಥಳೀಯರಾದ ಅಶ್ವಿನಿ ಚಂದ್ರ, ಸುಲ್ತಾನ್, ಎಂಜಿನಿಯರ್ಗಳಾದ ಮಜೀದ್, ಸುರೇಶ್ ಸಾಲ್ಯಾನ್, ಕೆನರಾ ಬ್ಯಾಂಕ್ನ ವಾಸುದೇವ, ರವೀಂದ್ರ ಹೆಗ್ಡೆ, ದಿನೇಶ್ ಕಾಮತ್, ದೇವಪ್ಪ, ಶೋಭಾ, ಗಿರಿಜಾ, ಸುಶೀಲಾ, ಸತೀಶ, ವಾಸುದೇವ, ಸಂಕಪ್ಪ, ರಾಮ ಕೊರಗಪ್ಪ, ಪದ್ಮನಾಭ,
ಜನಾರ್ದನ, ಪವಿತ್ರಾ, ವಸಂತ, ಅಶ್ವಿನಿ, ಮೀನಾಕ್ಷಿ, ಅನಿತಾ, ಶಿವಪ್ಪ, ಸೌಮ್ಯಾ, ಮಂಜುಳಾ, ಶ್ರೀಧರ್ ಆಚಾರ್ಯ
ಇದ್ದರು. ನಗರಸಭೆ ಸದಸ್ಯರಾದ ಮುಖೇಶ್ ಕೆಮ್ಮಿಂಜೆ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.