ಕುಡುಕ ತಂದೆಯನ್ನು ಹೊಡೆದು ಕೊಂದ ಮಗ
Team Udayavani, Feb 21, 2017, 11:54 AM IST
ಬೆಳ್ಳಾರೆ: ತಂದೆಯನ್ನು ಮಗ ದೊಣ್ಣೆಯಿಂದ ಹೊಡೆದು ಕೊಲೆಗೈದ ಘಟನೆ ಸಮೀಪದ ಪಾಟಾಜೆಯಲ್ಲಿ ರವಿವಾರ ಸಂಭವಿಸಿದೆ.
ಪಾಟಾಜೆ ನಿವಾಸಿ ಬಾಬು (55) ಮೃತಪಟ್ಟವರು. ಅವರ ಪುತ್ರ ಕುಮಾರ (24) ಆರೋಪಿ. ಬಾಬು ಅವರ ಪತ್ನಿ ವಿಮಲಾ ಅವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಬು ಕುಡಿತದ ಚಟವುಳ್ಳವರಾಗಿದ್ದು ಶನಿವಾರ ರಾತ್ರಿ ಕುಡಿದುಕೊಂಡು ಬಂದು ಮಲಗಿದ್ದರು. ಬೆಳಗ್ಗೆ ಎದ್ದು ನೋಡುವಾಗ ಸಾವನ್ನಪ್ಪಿದ್ದಾರೆ ಎಂದು ವಿಮಲಾ ಅವರು ದೂರಿನಲ್ಲಿ ತಿಳಿಸಿದ್ದರು.
ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೋಸ್ಕರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.
ಅಲ್ಲಿ ಶವವನ್ನು ಪರೀಕ್ಷೆಗೆ ಒಳಪಡಿಸಿದಾಗ ಹಲ್ಲೆ ನಡೆಸಿರುವುದು ತಿಳಿದು ಬಂತು. ಶವ ಪರೀಕ್ಷೆ ವರದಿಯನ್ನು ಪೊಲೀಸರು ಪಡೆದುಕೊಂಡರು. ಅನಂತರ ಮನೆ ಮಂದಿಯನ್ನು ವಿಚಾರಿಸಿದಾಗ ಅಸ್ಪಷ್ಟ ಮಾಹಿತಿ ನೀಡಿದರು.
ಬಳಿಕ ಬಾಬು ಅವರ ಸಹೋದರ ಸುಂದರ ಅವರು ದೂರು ನೀಡಿ ಬಾಬು ಅವರು ವಿಪರೀತ ಕುಡಿತದ ಚಟವುಳ್ಳವರಾಗಿದ್ದರು. ಕುಡಿದು ಬಂದು ಮನೆಯವರ ಹಾಗೂ ಆತನ ಮಧ್ಯೆ ಜಗಳವಾಗಿ ಸಾವು ಸಂಭವಿಸಿರಬೇಕು. ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ತಿಳಿಸಿದರು.
ಪೊಲೀಸರು ತನಿಖೆ ನಡೆಸಿದಾಗ ಬಾಬು ಶನಿವಾರ ರಾತ್ರಿ ಮದ್ಯ ಸೇವಿಸಿಕೊಂಡು ಬಂದು ಮನೆಮಂದಿಯೊಂದಿಗೆ ಜಗಳ ಆಡಿದ್ದು ಹಾಗೂ ಆ ಸಂದರ್ಭದಲ್ಲಿ ಮಗ ಕುಮಾರ ದೊಣ್ಣೆಯಿಂದ ಹೊಡೆದು ಕೊಲೆ ನಡೆಸಿರುವುದು ಬೆಳಕಿಗೆ ಬಂತು.
ಕೊಲೆ ನಡೆಸಿರುವುದನ್ನು ಕುಮಾರ ಒಪ್ಪಿಕೊಂಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.