ತ್ಯಾಜ್ಯ ವಿಲೇವಾರಿಗೆ ಒಟ್ಟಾದ ಗ್ರಾ.ಪಂ.ಗಳು
Team Udayavani, Mar 14, 2017, 4:33 PM IST
ನಾಲ್ಕು ಅಧ್ಯಕ್ಷೆಯರಿಂದ ಹೊಸ ಉಪಕ್ರಮ
ಬಜಪೆ: ತ್ಯಾಜ್ಯ ವಿಲೇವಾ ರಿಯ ಬಿಸಿ ಎಲ್ಲ ಗ್ರಾಮ ಪಂಚಾಯತ್‌ಗಳಿಗೂ ಇದ್ದದ್ದೇ. ಅದಕ್ಕೇ ಒಗ್ಗೂಡಿ ಪರಿಹಾರ ಕಂಡುಕೊಳ್ಳಲು ಹೊರಟಿವೆ ಈ ನಾಲ್ಕು ಪಂಚಾಯತ್‌ಗಳು. ದೊಡ್ಡ ಸಮಸ್ಯೆಯ ನಿವಾರಣೆಯತ್ತ ಇದೊಂದು ಹೊಸ ಮಾದರಿ. ಅಷ್ಟೇ ಅಲ್ಲ ; ಈ ಎಲ್ಲ ಗ್ರಾ.ಪಂ. ಅಧ್ಯಕ್ಷರು ಮಹಿಳೆಯರು.
ಗಂಜಿಮಠ, ಕಂದಾವರ, ಗುರುಪುರ ಮತ್ತು ಪಡುಪೆರಾರ ಗ್ರಾ.ಪಂ.ಗಳು ತಮ್ಮ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಗೆ ಒಟ್ಟಾಗಿವೆ. ಇದಕ್ಕೆ ಸಂಬಂಧಿಸಿದಂತೆ ನಾಲ್ಕೂ ಗ್ರಾಮಗಳನ್ನೊಳಗೊಂಡ ಸಭೆ ನಡೆಸಿ ತ್ಯಾಜ್ಯ ನಿರ್ವಹಣ ಸಮಿತಿ ಯನ್ನೂ ರಚಿಸಲಾಗಿದೆ. ಕಂದಾವರ ಗ್ರಾ.ಪಂ. ಅಧ್ಯಕ್ಷರು ಇದರ ಅಧ್ಯಕ್ಷ ರಾಗಿದ್ದರೆ, ಗಂಜಿಮಠ ಗ್ರಾ.ಪಂ ಪಿಡಿಒ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿ ಸುವರು. ಉಳಿದ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಸಂಘ ಸಂಸ್ಥೆಗಳ ಸದಸ್ಯರು ಈ ಸಮಿತಿಯಲ್ಲಿದ್ದಾರೆ.
ಕೈಕಂಬ ಪೇಟೆಯಲ್ಲಿ ಈ ನಾಲ್ಕೂ ಗ್ರಾ.ಪಂ. ಗಳ ವ್ಯಾಪ್ತಿ ಬರುತ್ತದೆ. ಇದರಲ್ಲಿ ಗಂಜಿಮಠ ಗ್ರಾ.ಪಂ ವ್ಯಾಪ್ತಿ ಹೆಚ್ಚು. ಕೈಕಂಬ ಪೇಟೆ ಸ್ವತ್ಛವಾಗಬೇಕಾದರೆ ಈ ಗ್ರಾ.ಪಂ. ಗಳು ಒಟ್ಟಾಗಲೇಬೇಕು.
ಸವಾಲಿನ ಸಂಗತಿ: ಈ ಗ್ರಾ.ಪಂ.ಗಳ ಅಧ್ಯಕ್ಷರ ಮಹಿಳೆಯರು. ಗಂಜಿಮಠ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಕಂದಾವರ ಗ್ರಾ.ಪಂ. ಅಧ್ಯಕ್ಷೆ ವಿಜಯಾಗೋಪಾಲ ಸುವರ್ಣ, ಗುರುಪುರ ಗ್ರಾ.ಪಂ. ಅಧ್ಯಕ್ಷೆ ರುಕಿಯಾ ಮತ್ತು ಪಡುಪೆರಾರ ಗ್ರಾ.ಪಂ. ಅಧ್ಯಕ್ಷೆ ಶಾಂತಾ ಎಂ. ಸಾಮಾಜಿಕ ಕಾರಣಕ್ಕಾಗಿ ಒಗ್ಗಟ್ಟಾದವರು.
ಸಮಿತಿಯ ಉಪವಿಧಿ ಅನುಮೋದನೆಗೆ ಸಮಿತಿ ರಚನೆ ಗೊಂಡು ಉಪವಿಧಿ ಅನುಮೋದನೆಗೆ ಈಗಾಗಲೇ ಜಿ.ಪಂ.ಗೆ ಕಳುಹಿಸಲಾಗಿದೆ. ಒಪ್ಪಿಗೆ ಸಿಕ್ಕ ಕೂಡಲೇ ತ್ಯಾಜ್ಯ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗು ವುದು. ಪ್ರತಿ ಗ್ರಾ.ಪಂ.ನಲ್ಲಿ ತ್ಯಾಜ್ಯ ಘಟಕಕ್ಕೆ ಜಾಗ ಸಿಕ್ಕಿದಲ್ಲಿ ತ್ಯಾಜ್ಯ ಘಟಕ ನಿರ್ಮಿ ಸಲಾಗುವುದು.
-ವಿಜಯಾ ಗೋಪಾಲ ಸುವರ್ಣ, ಅಧ್ಯಕ್ಷೆ, ಸಮನ್ವಯ ಸಮಿತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.