ಕೆಮ್ರಾಲ್ ಗ್ರಾಮ ಪಂಚಾಯತ್ ನಿಂದ ತ್ಯಾಜ್ಯ ವಿಲೇವಾರಿ
Team Udayavani, Apr 27, 2018, 11:21 AM IST
ಕಿನ್ನಿಗೋಳಿ : ಕಿನ್ನಿಗೋಳಿ – ಮೂಲ್ಕಿ ರಾಜ್ಯ ಹೆದ್ದಾರಿಯ ರಾಜಾಂಗಣದ ಮುಂದಿನ ಭಾಗದಲ್ಲಿ ರಸ್ತೆಯ ಉದ್ದಕ್ಕೂ ಪ್ಲಾಸ್ಟಿಕ್ ತ್ಯಾಜ್ಯ, ಪೊಟ್ಟಣಗಳ ರಾಶಿಯೇ ಕಂಡು ಬರುತ್ತಿದ್ದು, ಈ ಬಗ್ಗೆ ಎ. 25 ರ ಉದಯವಾಣಿ ಸುದಿನದಲ್ಲಿ ಸಚಿತ್ರ ವರದಿ ಮಾಡಿತ್ತು ಇದಕ್ಕೆ ಕೂಡಲೇ ಕೆಮ್ರಾಲ್ ಗ್ರಾಮ ಪಂಚಾಯತ್ ಸ್ಪಂದಿಸಿದೆ. ಗ್ರಾಮ ಪಂಚಾಯತ್ ತ್ಯಾಜ್ಯ ವಿಲೇವಾರಿ ಘಟಕದ ವಾಹನದ ಮೂಲಕ ಪಂಚಾಯತ್ ಪೌರ ಕಾರ್ಮಿಕರು ರಾಶಿ ಬಿದ್ದ ಎಲ್ಲ ಪ್ಲಾಸ್ಟಿಕ್ ಹಾಗೂ ಕಸ ತ್ಯಾಜ್ಯವನ್ನು ತೆರವುಗೊಳಿಸಿದರು.
ಇಲ್ಲಿನ ಒಂದು ಪ್ರದೇಶ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರುತ್ತದೆ. ಎದುರು ಭಾಗ ಕಿನ್ನಿಗೋಳಿ ಗ್ರಾ.ಪಂ. ವ್ಯಾಪ್ತಿಗೆ ಸೇರು ತ್ತಿ ದೆ. ಆದರೆ ಕಸ ಪ್ಲಾಸ್ಟಿಕ್ ತ್ಯಾಜ್ಯಗಳು ಮಾತ್ರ ಕೆಮ್ರಾಲ್ ಪಂಚಾಯತ್ ಸ್ಥಳದಲ್ಲಿಯೇ ಬಿಸಾಡುತ್ತಿದ್ದು, ಪಂಚಾಯತ್‌ಗೆ ಸಮಸ್ಯೆಯಾಗಿ ಕಾಡು ತ್ತಿ ದೆ. ಎದುರು ಭಾಗದಲ್ಲಿ ಬಹುಮಹಡಿಯ ಕಟ್ಟಡಗಳಿದ್ದು ಅಲ್ಲಿನ ಕಸಗಳನ್ನು ಈ ಪ್ರದೇಶದಲ್ಲಿ ಬಿಸಾಡುತ್ತಿದ್ದಾರೆ ಎಂದು ಕೆಮ್ರಾಲ್ ಗ್ರಾಮ ಪಂಚಾಯತ್ ಮೂಲ ತಿಳಿಸಿದೆ.
ಕಿನ್ನಿಗೋಳಿ ಗ್ರಾ.ಪಂ.ಗೆ ಮನವರಿಕೆ ಮಾಡಲಾಗುವುದು
ಉದಯವಾಣಿ ವರದಿಗೆ ತತ್ ಕ್ಷಣ ಸ್ಪಂದನೆ ನೀಡಿ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿನ್ನಿಗೋಳಿಯ ಪರಿಸರದಲ್ಲಿ ಹಾಕಿದ ಕಸ ಹಾಗೂ ತ್ಯಾಜ್ಯವನ್ನು ತೆರವು ಗೊಳಿಸಲಾಗಿದೆ. ಆ ಪ್ರದೇಶದಲ್ಲಿ ನಾಮ ಫಲಕ ಹಾಕಿದ್ದರೂ ಇನ್ನೂ ಕಸ, ತ್ಯಾಜ್ಯ ಬಿಸಾಡುವುದು ಮುಂದುವರಿದೆ. ಈ ಬಗ್ಗೆ ಕಿನ್ನಿಗೋಳಿ ಗ್ರಾಮ ಪಂಚಾಯತ್‌ನವರಿಗೆ ಮನವರಿಕೆ ಮಾಡಲಾಗುವುದು ಎಂದು ರಮೇಶ್ ರಾಥೋಡ್, ಪಿಡಿಒ ಕೆಮ್ರಾಲ್ ಗ್ರಾಮ ಪಂಚಾಯತ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.