ಕೆರೆಗಳಿಗೆ ತ್ಯಾಜ್ಯ ನೀರು ಸೇರ್ಪಡೆ ತಡೆಗೆ ಎಸ್‌ಟಿಪಿ
Team Udayavani, Sep 1, 2019, 5:29 AM IST
ಕೆರೆಗಳ ಊರಾಗಿದ್ದ ಮಂಗಳೂರಿನಲ್ಲಿ ಇಂದು ಬೆರಳೆಣಿಕೆಯ ಕೆರೆಗಳು ಮಾತ್ರ ಉಳಿದುಕೊಂಡಿವೆೆ. ಆದರೆ ಅವು ಕೂಡ ಕೊಳಚೆ, ತ್ಯಾಜ್ಯ ನೀರು ಸೇರಿ ಮಲಿನಗೊಂಡು ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿವೆ. ಇವುಗಳಿಗೆ ಕೊಳಚೆ ನೀರು, ತ್ಯಾಜ್ಯ ನೀರು ತಡೆಯುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು ಯಶಸ್ವಿಯಾಗಿಲ್ಲ. ಕೆರೆಗಳಿಗೆ ತ್ಯಾಜ್ಯ ನೀರು ಬಿಡದಂತೆ ನೀಡಿದ ಎಚ್ಚರಿಕೆಗಳು ಫಲ ನೀಡಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಗುಜ್ಜರ ಕೆರೆ.
ಇದೇ ರೀತಿಯ ಸಮಸ್ಯೆ ಬೆಂಗಳೂರು ನಗರದಲ್ಲೂ ಕಾಡುತ್ತಿದೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರೂಪಿಸಿರುವ ವಿಧಾನ ಎಂದರೆ ಕೆರೆಗಳಲ್ಲಿ ತ್ಯಾಜ್ಯನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಸ್ಥಾಪಿಸುವುದು. ಈಗಾಗಲೇ ಕೆಲವು ಕೆರೆಗಳಲ್ಲಿ ಎಸ್‌ಟಿಪಿಗಳನ್ನು ಸ್ಥಾಪಿಸಲಾಗಿದೆ. ಇದೇ ಮಾದರಿಯನ್ನು ಮಂಗಳೂರಿನಲ್ಲೂ ಮಹಾನಗರ ಪಾಲಿಕೆ ಅನುಸರಿಸಿದರೆ ಪ್ರಸ್ತುತ ಉಳಿದುಕೊಂಡಿರುವ ಆದರೆ ತ್ಯಾಜ್ಯ, ಕೊಳಚೆ ನೀರಿನಿಂದ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುÊಆ ಕೆರೆಗಳನ್ನು ಉಳಿಸಬಹುದು.
ಬೆಂಗಳೂರಿನಲ್ಲಿ ಕೆರೆಗಳಿಗೆ ತ್ಯಾಜ್ಯ ಹಾಗೂ ಕೊಳಚೆ ನೀರು ಸೇರ್ಪಡೆಯಾಗುತ್ತಿದ್ದ ಕಾರಣದಿಂದ ಕೆರೆಗಳು ಮಲಿನವಾಗುತ್ತಿದ್ದವು. ಕೆರೆಗಳಲ್ಲಿ ಬೆಂಕಿನೊರೆಯಂತಹ ಸಮಸ್ಯೆಗಳು ಕಾಡುತ್ತಿವೆೆ. ಕೆಲವು ಕಡೆ ತ್ಯಾಜ್ಯ ನೀರು ಕೆರೆಗಳನ್ನು ಸೇರುತ್ತಿರುವುದರಿಂದ ಅಂತರ್ಜಲವೂ ಮಲೀನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಗಳಿಗೆ ಕೊಳಚೆ ನೀರು ಪ್ರವೇಶಿಸುವುದನ್ನು ತಪ್ಪಿಸಲು ಕೆರೆಗಳಲ್ಲಿ ಎಸ್‌ಟಿಪಿ ಅಳವಡಿಸಲು ಯೋಜನೆ ರೂಪಿಸಿತ್ತು. ಈಗಾಗಲೇ ಬೆಂಗಳೂರಿನ ದೊರೆ ಕೆರೆ, ದಾಸರಹಳ್ಳಿ ಕೆರೆ, ಹೇರೋಹಳ್ಳಿ ಕೆರೆ ಹಾಗೂ ದೀಪಾಂಜಲಿ ಕೇರೆ ಸೇರಿ 5 ಕೆರೆಗಳಲ್ಲಿ ಎಸ್‌ಟಿಪಿ ಕಾರ್ಯಾಚರಿಸುತ್ತಿದೆ. ಇನ್ನು 15 ಕೆರೆಗಳಲ್ಲಿ ಎಸ್‌ಟಿಪಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಈಗಾಗಲೇ ಎಸ್‌ಟಿಪಿ ಅಳವಡಿಕೆ ಮಾಡಿರುವ ಕೆರೆಗಳಲ್ಲಿ ನಿತ್ಯ 4.5 ಎಂಎಲ್ಡಿ ತ್ಯಾಜ್ಯ ನೀರು ಸಂಸ್ಕರಿಸಲಾಗುತ್ತಿದೆ. ಇನ್ನೂ 15 ಕೆರೆಗಳಲ್ಲಿ ಎಸ್‌ಟಿಪಿ ಅಳವಡಿಕೆ ಕಾರ್ಯ ಪೂರ್ಣಗೊಂಡ ಬಳಿಕ 11 ಎಂಎಲ್ಡಿ ತ್ಯಾಜ್ಯ ನೀರು ಸಂಸ್ಕರಣೆಯಾಗಲಿದೆ. ಆ ಮೂಲಕ ಕೆರೆಗಳಿಗೆ ಸೇರುವ ತ್ಯಾಜ್ಯ ನೀರನ್ನು ನಿಯಂತ್ರಿಸಬಹುದು.
ನಗರದಲ್ಲಿರುವ ಕೆರೆಗಳ ಆಧಾರದ ಮೇಲೆ ಎಸ್‌ಟಿಪಿಗಳನ್ನು ಅಳವಡಿಸಲಾಗುತ್ತಿದೆ. ಇದರಂತೆ 10 ಎಕರೆ ಕಮ್ಮಿ ಇರುವ ಕೆರೆಗಳಲ್ಲಿ 500 ಕೆಎಲ್ಡಿ ಸಾಮರ್ಥ್ಯದ ಎಸ್‌ಟಿಪಿಗಳನ್ನು ಅಳವಡಿಸಲಾಗುತ್ತಿದೆ. 10ರಿಂದ 20 ಎಕರೆ ವಿಸ್ತೀರ್ಣದ ಕೆರೆಗಳಲ್ಲಿ 1 ಎಂಎಲ್ಡಿ ಸಾಮರ್ಥ್ಯದ ಎಸ್‌ಟಿಪಿ ಅಳವಡಿಸಲಾಗುತ್ತಿದೆ. 500 ಕೆಎಲ್ಡಿ ಘಟಕ ನಿರ್ಮಾಣಕ್ಕೆ ಸುಮಾರು 1.5 ಕೋ.ರೂ ವೆಚ್ಚವಾಗುತ್ತದೆ. 1 ಎಂಎಲ್ಡಿ ಸಾಮರ್ಥ್ಯದ ಎಸ್‌ಟಿಪಿ ಘಟಕ ನಿರ್ಮಾಣಕ್ಕೆ ಸುಮಾರು 2.5 ಕೋಟಿ ರೂ.ನಿಂದ 3 ಕೋ.ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಕೆರೆಗಳ ನಿರ್ಲಕ್ಷ್ಯ ವಿರುದ್ದ ರಾಜ್ಯ ಹೈಕೋರ್ಟ್ ಚಾಟಿ ಬೀಸಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಎಚ್ಚೆತ್ತುಕೊಂಡು ಕೆರೆಗಳ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಂಡಿತ್ತು.
ಮಂಗಳೂರು ನಗರದಲ್ಲಿ ಪ್ರಮುಖ ಕೆರೆಗಳಾದ ಗುಜ್ಜರಕೆರೆ, ಕಾವೂರು ಕೆರೆ, ಮೈರಾಡಿ ಕೆರೆ, ಬಗ್ಗುಂಡಿ ಕೆರೆ ಮಲೀನ, ತ್ಯಾಜ್ಯ ನೀರು ಸಮಸ್ಯೆ ಎದುರಿಸುತ್ತಿದೆ. ಕಾಯಕಲ್ಪ ನೀಡಿ ಸಂರಕ್ಷಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದರೂ ಯಶಸ್ಸು ಲಭಿಸಿಲ್ಲ. ಒಂದಷ್ಟು ಕೆಲಸ ನಡೆದರೂ ಮರು ವರ್ಷ ಕೆರೆ ತನ್ನ ಹಿಂದಿನ ಸ್ವರೂಪಕ್ಕೆ ಮರಳುತ್ತದೆ. ಇದಕ್ಕೆ ಮೂಲ ಕಾರಣ ಕೊಳಚೆ ಹಾಗೂ ತ್ಯಾಜ್ಯ ನೀರು ಕೆರೆಗಳನ್ನು ಸೇರುತ್ತಿರುವುದು. ಅದುದರಿಂದ ಬೆಂಗಳೂರು ಮಾದರಿಯಲ್ಲಿ ಮಂಗಳೂರಿನಲ್ಲೂ ಕೆರೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಅಳವಡಿಸಿ ಮಲೀನ ನೀರು ಸೇರದಂತೆ ತಡೆಯವ ಕಾರ್ಯ ಅವಶ್ಯವಿದೆ. ಮಂಗಳೂರಿನಲ್ಲಿ ಪರಿಸರಾಸಕ್ತ ನಾಗರಿಕರು ಒಟ್ಟು ಸೇರಿ ರಚಿಸಿಕೊಂಡಿರುವ ಕೆಲವು ಕೆರೆ ಸಂರಕ್ಷಣಾ ಸಮಿತಿಗಳು ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಶ್ರಮಿಸುತ್ತಿವೆ. ಅವುಗಳ ಸಹಕಾರವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕೆ ಆರ್ಥಿಕ ಸಂಪನ್ಮೂಲವನ್ನು ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಸಹಭಾಗಿತ್ವವನ್ನು ಪಡೆದು ಎಸ್‌ಟಿಪಿಗಳನ್ನು ಅಳವಡಿಸಬಹುದಾಗಿದೆ.
– ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.