ಉಳ್ಳಾಲ ಸೇತುವೆ: ಅಪಾಯಕಾರಿಯಾಗಿದೆ ನೀರಿನ ಪೈಪ್!
Team Udayavani, Aug 3, 2019, 5:14 AM IST
ಮಹಾನಗರ: ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಸಾವಿನ ಪ್ರಕರಣದ ಅನಂತರ ಇದೀಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೇತ್ರಾವತಿ ನದಿಯಲ್ಲಿ ಉಳ್ಳಾಲ ಸೇತುವೆ ಮೇಲೆ ಹಾದು ಹೋಗುವ ಜನರ ಸುರಕ್ಷತೆ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ.
ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುವ ಹಳೆಯ ಸೇತುವೆಯ ಎಡಭಾಗದ ಫುಟ್ಪಾತ್‌ನಲ್ಲಿ ಉಳ್ಳಾಲಕ್ಕೆ ನೀರು ಸರಬರಾಜು ಮಾಡಲು ಪೈಪ್‌ಲೈನ್ ಅಳವಡಿಸಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಈ ಪೈಪ್‌ಲೈನ್ ಮೇಲೆ ಕಾಲಿಟ್ಟು, ಕೆಲವರು ನದಿಗೆ ಇಣುಕಿ ನೋಡುವ ಪ್ರಯತ್ನ ನಡೆಸುತ್ತಿದ್ದು, ಹಲವು ಬಾರಿ ಅಪಾಯಕ್ಕೂ ಕಾರಣವಾಗಿದೆ ಎಂಬುದು ಅವರ ವಾದ. ಒಂದೊಮ್ಮೆ, ಸಿದ್ಧಾರ್ಥ್ ಅವರು ಕೂಡ ಇದೇ ಸೇತುವೆಯಿಂದ ನದಿಗೆ ಹಾರಿದ್ದರೆ, ಈ ಪೈಪ್‌ಲೈನ್ ಮೇಲೆಯೇ ಕಾಲಿಟ್ಟು ಸುಮಾರು ನಾಲ್ಕು ಅಡಿ ಎತ್ತರಕ್ಕೆ ಇರುವ ತಡೆಯನ್ನು ಬಹಳ ಸುಲಭವಾಗಿ ದಾಟಿ ನದಿಗೆ ಧುಮುಕಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಅನುಮತಿ ಪಡೆದಿಲ್ಲ
ಮನಾರ್ಹ ಅಂದರೆ, ಹಳೆ ಸೇತುವೆಯಲ್ಲಿ ನೀರಿನ ಪೈಪ್‌ಲೈನ್ ಅನ್ನು ರಸ್ತೆಯ ಪಕ್ಕದಲ್ಲಿ ಅಳವಡಿಸಲು ಮಹಾನಗರ ಪಾಲಿಕೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿಯನ್ನೂ ಪಡೆದಿರಲಿಲ್ಲ. ಸೇತುವೆಯ ಕೆಳ ಭಾಗದಲ್ಲಿ 24 ಕಂಬಗಳ ಬೀಮ್‌ನ ಮಧ್ಯೆಯ ಭಾಗದಿಂದ ಪೈಪ್‌ಲೈನ್ ಅಳವಡಿಸಲು ಅವಕಾಶ ನೀಡಲಾಗಿತ್ತು. ಸೇತುವೆಯ ರಸ್ತೆಯ ಪಕ್ಕದಲ್ಲಿ ಪೈಪ್‌ಲೈನ್ ಅಳವಡಿಸಿದರೆ ವಿವಿಧ ರೀತಿಯ ಸಮಸ್ಯೆಯಾಗುತ್ತದೆ ಎಂದು ಪಾಲಿಕೆಯ ಗಮನಕ್ಕೂ ತರಲಾಗಿತ್ತು. ಆದರೆ ಸೇತುವೆಯ ಫುಟ್ಪಾತ್‌ನಲ್ಲೇ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ.
ನೀರಿನ ಪೈಪ್‌ಲೈನ್ ಅನ್ನು ಸೇತುವೆಯ ಕೆಳಭಾಗದಲ್ಲಿ ಹಾಕಿದರೆ ಅದರಲ್ಲಿ ಸೋರಿಕೆ ಉಂಟಾದರೆ ಪೈಪ್‌ಲೈನ್ ದುರಸ್ತಿ ಮಾಡುವುದು ಅಸಾಧ್ಯ ಎಂಬುದು ಪಾಲಿಕೆಯ ವಾದ.
ಸೇತುವೆಯ ಬದಿಯಲ್ಲಿ 4 ಅಡಿ ಎತ್ತರದಲ್ಲಿ ಸುರಕ್ಷಾ ಬೇಲಿ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಇದನ್ನು ಒಬ್ಬ ವ್ಯಕ್ತಿ ಸುಲಭವಾಗಿ ಮೀರಿ ಹಾರಲು ಕಷ್ಟ ಸಾಧ್ಯ. ಇಂತಹ ಸಂದರ್ಭ ನೀರಿನ ಪೈಪ್‌ಲೈನ್ ಕೆಲವರಿಗೆ ಉಪಯೋಗಕ್ಕೆ ಬಂದಿದೆ. ಜತೆಗೆ ದೂರದೂರಿನಿಂದ ಬರುವವರು ಕೂಡ ಸೇತುವೆ ಪಕ್ಕ ವಾಹನ ನಿಲ್ಲಿಸಿ ಪೈಪ್‌ಲೈನ್‌ನ ಮೇಲೆ ಕಾಲಿಟ್ಟು ನದಿಗೆ ಇಣುಕಿ ನೋಡುವ ದುಸ್ಸಾಹಸ ಮಾಡುತ್ತಿದ್ದು, ಇದು ಅಪಾಯಕಾರಿ.
ಉರಿಯದ ಬಿದಿದೀಪ
ಈ ಮಧ್ಯೆ, ಪಂಪ್‌ವೆಲ್-ತೊಕ್ಕೊಟ್ಟು ಹೆದ್ದಾರಿ ಕೆಲವು ವರ್ಷಗಳ ಹಿಂದೆ ಚತುಷ್ಪಥ ಆಗಿದ್ದರೂ ಈ ರಸ್ತೆಯಲ್ಲಿ ಮೂಲ ಸಮಸ್ಯೆಗಳು ಇತ್ಯರ್ಥವಾಗಲೇ ಇಲ್ಲ. ನೇತ್ರಾವತಿ ಸೇತುವೆ ಸಹಿತ ರಸ್ತೆಯ ಉದ್ದಕ್ಕೂ ಕೆಲವೆಡೆ ಬೀದಿದೀಪ ಇದ್ದರೂ ಅದು ಉರಿಯುತ್ತಿಲ್ಲ.
ಜತೆಗೆ ಈ ರಸ್ತೆ ವ್ಯಾಪ್ತಿಯಲ್ಲಿ ಎಲ್ಲಿಯೂ ಸಿಸಿ ಕೆಮರಾ ವ್ಯವಸ್ಥೆಯೂ ಇಲ್ಲ. ಹೀಗಾಗಿ ಸಿದ್ದಾರ್ಥ್ ನಾಪತ್ತೆ ಪ್ರಕರಣವನ್ನು ಭೇದಿಸುವಲ್ಲಿ ಜಿಲ್ಲಾಡಳಿತ-ಪೊಲೀಸ್ ಇಲಾಖೆಗೂ ಸವಾಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.