“ಪೆಟ್ರೋಲ್‌ನಂತೆ ಭವಿಷ್ಯದಲ್ಲಿ ತಲೆ ಎತ್ತಲಿವೆ ವಾಟರ್ ಬಂಕ್’
"ಉದಯವಾಣಿ' ಸಹಯೋಗದಲ್ಲಿ ಮಳೆ ನೀರು ಕೊಯ್ಲು ಮಾಹಿತಿ
Team Udayavani, Jul 15, 2019, 5:42 AM IST
ಪುತ್ತೂರು: ಮಾೖದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಮಳೆ ನೀರು ಕೊಯ್ಲು ಮಾಹಿತಿ ಕಾರ್ಯಕ್ರಮ ನಡೆಯಿತು.
ಪುತ್ತೂರು: ಇಲ್ಲಿನ ಮಾೖದೆ ದೇವುಸ್ ಚರ್ಚ್, ಐಸಿವೈಎಂ ಘಟಕ ಪುತ್ತೂರು ಹಾಗೂ “ಉದಯವಾಣಿ’ ಸಹಯೋಗದಲ್ಲಿ ಮಳೆ ನೀರು ಕೊಯ್ಲು ಮಾಹಿತಿ ಕಾರ್ಯಕ್ರಮ ಚರ್ಚ್
ಸಭಾಂಗಣದಲ್ಲಿ ರವಿವಾರ ನಡೆಯಿತು.
“ಉದಯವಾಣಿ’ಯ ಮನೆ ಮನೆಗೆ ಮಳೆ ಕೊಯ್ಲು ಅಭಿಯಾನದಿಂದ ಪ್ರೇರಣೆ ಗೊಂಡು ನೀರಿನ ಸಂರಕ್ಷಣೆಗೆ ಎಲ್ಲ ಚರ್ಚ್ ಗಳಲ್ಲಿ ಜಲಬಂಧನ್ ಮಾಡಬೇಕು ಎನ್ನುವ ಮಂಗಳೂರು ಬಿಷಪ್ ವಂ| ಡಾ| ಪೀಟರ್ ಪೌಲ್ ಸಲ್ದಾನ್ಹಾ ಅವರ ಮನವಿ ಮೇರೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಾಗೃತರಾಗಿಲ್ಲ
ಸಂಪನ್ಮೂಲ ವ್ಯಕ್ತಿಯಾಗಿದ್ದ ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮಾಹಿತಿ ನೀಡಿ, ನಮ್ಮಲ್ಲಿ ಬಾವಿ ಇದೆ. ಉತ್ತಮ ಮಳೆಯೂ ಇದೆ. ಆದರೆ ನೀರಿನ ಕೊರತೆಯೂ ಇದೆ. ಇದಕ್ಕೆ ಕಾರಣ ನಾವು ಜಾಗೃತರಾಗದೇ ಇರುವುದು ಎಂದರು.
ಭವಿಷ್ಯದಲ್ಲಿ ಪೆಟ್ರೋಲ್ ಬಂಕ್‌ಗಳಂತೆ ವಾಟರ್ ಬಂಕ್‌ಗಳುಗಳು ತಲೆ ಎತ್ತಬಹುದು. ದುಡ್ಡನ್ನು ನೀರಿನಂತೆ ಖರ್ಚು ಮಾಡಿದರು ಎನ್ನುವ ಬದಲು ನೀರನ್ನು ದುಡ್ಡಿನಂತೆ ಖರ್ಚು ಮಾಡಿದರು ಎನ್ನುವ ಸ್ಥಿತಿ ಬಂದೀತು ಎಂದರು.
ಹರಿಯುವ ನೀರಿಗೆ ದೋಷವಿಲ್ಲ
ದೇವರು ಕೊಟ್ಟ ಮಳೆ ಭೂಮಿಯ ಹಕ್ಕು. ಆದರೆ ನಾವು ಅದನ್ನು ಕಸಿದುಕೊಂಡು ಬೇಕಾಬಿಟ್ಟಿ ಬಳಸುತ್ತಿದ್ದೇವೆ. ಓಡುವ ನೀರು ತೆವಲುವಂತೆ, ನಿಂತ ನೀರು ಇಂಗಿಸುವ, ಇಂಗಿದ ನೀರು ಬಳಕೆ ಮಾಡುವ ನಿಟ್ಟಿನಲ್ಲಿ ನಮ್ಮ ಗಮನ ಹರಿಯಬೇಕು. ಸುರಿಯುವ ಮತ್ತು ಹರಿಯುವ ನೀರಿಗೆ ದೋಷವಿಲ್ಲ. ಮನೆಯ ಮಾಡಿನಲ್ಲಿ ಬಂದ ನೀರನ್ನು ಕೇವಲ ಬಟ್ಟೆ ಕಟ್ಟಿ ಬಳಕೆ ಮಾಡಿಕೊಳ್ಳಬಹುದು ಎಂದರು.
ಪ್ರಶ್ನೆಗಳಿಗೆ ಉತ್ತರ
ನೂರಕ್ಕೂ ಮಿಕ್ಕಿ ಮಂದಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು. ಸಂದೇಹಗಳನ್ನು ಬಗೆಹರಿಸಿಕೊಂಡರು. ಹಳ್ಳಿಗಳಲ್ಲಿ ಇಂಗುಗುಂಡಿ, ಕಟ್ಟ ಕಟ್ಟಿ ನೀರು ನಿಲ್ಲಿಸುವ ಜಾಗೃತಿ ಇನ್ನಷ್ಟು ಆಗಬೇಕು. 5 ವರ್ಷಗಳಿಂದ ಬತ್ತಿಹೋದ ಬೋರ್‌ವೆಲ್‌ಗೆ ನೀರು ಮರುಪೂರಣ ಮಾಡಿದರೆ ಪ್ರಯೋಜನವಿದೆಯೇ?, ಬಾತ್‌ರೂಂ, ಅಡಿಕೆ ಕೋಣೆಗಳ ನೀರನ್ನು ಇಂಗಿಸಬಹುದೇ? ಎನ್ನುವ ಪ್ರಶ್ನೆಗಳಿಗೆ ರಾಜೇಂದ್ರ ಕಲಾºವಿ ಉತ್ತರಿಸಿದರು.
ಪರ್ಯಾಯ ಮೂಲ ಅಗತ್ಯ
ಬೋರ್‌ವೆಲ್‌ಗಳು ಇಂಜೆಕ್ಷನ್‌ನಂತೆ. ಮನುಷ್ಯನಿಗೆ ಲೆಕ್ಕಕ್ಕಿಂತ ಜಾಸ್ತಿ ಇಂಜೆಕ್ಷನ್ ಕೊಟ್ಟರೆ ಬದುಕಲಾರ. ಅದೇ ರೀತಿ ಭೂಮಿ ತಾಯಿಯ ಸ್ಥಿತಿಯೂ ಆಗಿದೆ. ಇದಕ್ಕೆ ಪರ್ಯಾಯ ನೀರಿನ ಮೂಲಗಳನ್ನು ಕಂಡುಕೊಳ್ಳಬೇಕು.
ಒಮ್ಮೆ ಬತ್ತಿಹೋದ ಬೋರ್‌ವೆಲ್‌ಗೆ
ಜಲ ಮರುಪೂರಣ ಮಾಡಿದರೆ 2-3 ವರ್ಷಗಳಲ್ಲಿ ಫಲ ಕಾಣಬಹುದು ಎಂದು ರಾಜೇಂದ್ರ ಕಲ್ಬಾವಿ ಹೇಳಿದರು.ಮಾçದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಆಲ್ಫ್ರೆಡ್ ಜೆ. ಪಿಂಟೋ, ಸಹಾಯಕ ಧರ್ಮಗುರು ವಂ| ಲ್ಯಾರಿ ಪಿಂಟೋ, ಉಪಾಧ್ಯಕ್ಷ ಜೆ.ಪಿ. ರೋಡ್ರಿಗಸ್, ಐಸಿವೈಎಂ ಘಟಕದ ಅಧ್ಯಕ್ಷ ಮಹಿಮ್ ಮೊಂತೆರೋ ಉಪಸ್ಥಿತರಿದ್ದರು.
ಅತಿಥಿ ಗಣ್ಯರನ್ನು ಗಿಡ ನೀಡುವ ಮೂಲಕ ಸ್ವಾಗತಿಸಲಾಯಿತು. ಐಸಿವೈಎಂ ಘಟಕದ ಕಾರ್ಯದರ್ಶಿ ಲವಿನಾ ವಂದಿಸಿದರು. ಘಟಕದ ಪಿಆರ್‌ಒ ಲಿಯಾನ್ನಾ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು.
ಮನೆ-ಮನೆಗೆ ಮಾಹಿತಿ
ಜಲಮೂಲ ಬತ್ತುತ್ತಿರುವ ಈ ಸಂದರ್ಭದಲ್ಲಿ ಮಳೆ ನೀರಿನ ಬಳಕೆಗೆ ಒತ್ತು ನೀಡುವುದು ಅನಿವಾರ್ಯವಾಗಿದೆ. ಈ ಕುರಿತು ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮನೆ-ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದಕ್ಕೆ ಯೋಜನೆ ಹಾಕಿಕೊಂಡಿದ್ದೇವೆ.
– ಮಹಿಮ್ ಮೊಂತೆರೋ
ಅಧ್ಯಕ್ಷರು, ಐಸಿವೈಎಂ ಪುತ್ತೂರು ಘಟಕ
“ಉದಯವಾಣಿ’ಯ ಪ್ರೇರಣೆ
“ಉದಯವಾಣಿ’ಯ ಪ್ರೇರಣೆ ಹಾಗೂ ಸಹಯೋಗದಲ್ಲಿ ಉತ್ತಮ, ಸಕಾಲಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಹಳ್ಳಿಗಳಲ್ಲಿ ಗುಂಡಿ ನಿರ್ಮಿಸಿ ನೀರಿಂಗಿಸಬೇಕು. ಪಾಳುಬಿದ್ದ ಹೊಂಡ, ಬಾವಿಗಳಿಗೆ ಜಲ ಮರುಪೂರಣ ಮಾಡಿಸಬೇಕು. ಈ ನಿಟ್ಟಿನಲ್ಲಿ ನಾವೂ ಯೋಜನೆ ಹಾಕಿಕೊಂಡಿದ್ದೇವೆ. ಮಳೆಗಾಲದಲ್ಲಿ ಗ್ರಾ.ಪಂ.ಗಳ ನೀರು ಪೂರೈಕೆ ಹಾಗೂ ಇತರ ಚಟುವಟಿಕೆಗೆ ಕೊಳವೆ ಬಾವಿ, ಬಾವಿಗಳನ್ನು ಬಿಟ್ಟು ಹರಿಯುವ ತೋಡು, ಇತರ ಮೂಲಗಳ ನೀರನ್ನು ಬಳಸಿಕೊಳ್ಳುವ ಪ್ರಯತ್ನ ನಡೆಯಬೇಕು. ಈ ನಿಟ್ಟಿನಲ್ಲಿ ಚರ್ಚ್‌ಗಳ ಮೂಲಕ ಗ್ರಾ.ಪಂ.ಗಳಿಗೂ ಮನವಿ ಮಾಡುತ್ತೇವೆ. ಒಟ್ಟಿನಲ್ಲಿ ಓಪಲ್ ವೆಲ್‌ಗಳ ಬಳಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳನ್ನು ನಡೆಸುತ್ತೇವೆ. ನಮ್ಮ ಸಂಸ್ಥೆಗಳಲ್ಲೂ ಮಳೆ ಕೊಯ್ಲುವಿಗೆ ವಿಶೇಷ ಆದ್ಯತೆ ನೀಡುತ್ತೇವೆ.
– ವಂ| ಆಲ್ಫ್ರೆಡ್ ಜೆ. ಪಿಂಟೋ , ಪ್ರಧಾನ ಧರ್ಮಗುರುಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.