ಗುಡ್ಡೆಯ ನೀರನ್ನು ಇಂಗು ಗುಂಡಿಯಲ್ಲಿ ಇಂಗಿಸಿ ಗೆದ್ದರು !


Team Udayavani, Mar 27, 2017, 6:47 PM IST

gudde.jpg

ಬಜಪೆ: ಇವರು ಇಂಗು ಗುಂಡಿ ಮತ್ತು ಕೃಷಿ ಹೊಂಡ ಮಾಡಿ ಗೆದ್ದವರು. ಅಂದರೆ ಇರುವ ನೀರನ್ನು ಬೇಸಗೆಯಲ್ಲೂ ಗಿಡಗಳಿಗೆ ನೀಡುತ್ತಾ ನಿರ್ವಹಿಸುವ ಕೆಲಸ. ಸುಡು ಬೇಸಗೆಯಲ್ಲಿ ಕುಡಿಯಲೇ ನೀರಿಲ್ಲ ಎನ್ನುವಾಗ ಮೂಡು ಪೆರಾರ
ಈಶ್ವರ ಕಟ್ಟೆಯ ನಿವಾಸಿ ಜೂವಿತಾ ರೊಡ್ರಿಗಸ್‌ ತಣ್ಣಗೆ ಕುಳಿತಿರುತ್ತಾರೆ. ಕ್ಸೇವಿಯರ್‌ ರೋಡ್ರಿಗಸ್‌ ಅವರ ಪತ್ನಿ ಜೂವಿತಾ ರೊಡ್ರಿಗಸ್‌ ಅವರ 4 ಎಕ್ರೆಯ ಪೈಕಿ 2 ಎಕ್ರೆ ಅಡಿಕೆ ತೋಟ, ತೆಂಗು, ಕರಿಮೆಣಸು, ಕೋಕೋ, ಬಾಳೆಗಿಡ
ಬೆಳೆಸಿದ್ದಾರೆ. 33 ವರ್ಷದ ಕಾಡಿನಂತಿದ್ದ ಈ ಪರಿಸರ ಗಿಡಪೊದೆಗಳಿಂದ ತುಂಬಿತ್ತು. ಎತ್ತರ ಪದೇಶದಲ್ಲಿದ್ದ ಅವರ ಮನೆ
ಇಳಿಜಾರು ಪ್ರದೇಶದ ಕೆಳಗೆ ಒಂದು ಬಾವಿಯನ್ನು ತೋಡಿದ್ದರು.

ಈ ತೋಟಗಳಿಗೆ ಈ ಬಾವಿಯ ನೀರು ಸಾಕಾಗುತ್ತಿರಲಿಲ್ಲ. ಆರು ವರ್ಷಗಳ ಹಿಂದೆ ಮನಸ್ಸು ಗಟ್ಟಿ ಮಾಡಿದ ಇವರು, ತೋಟದ ಮಧ್ಯೆ 45 ಇಂಗು ಗುಂಡಿಗಳನ್ನು ಮಾಡಿದರು. ಗುಡ್ಡದಿಂದ ಬರುವ ಮಳೆಯ ನೀರು ಈ ಇಂಗು ಗುಂಡಿಗೆ
ಬಿದ್ದು ಅಲ್ಲೇ ಇಂಗುತ್ತಿತ್ತು.

ಕೃಷಿ ಹೊಂಡ: ತೋಟವಿಲ್ಲದ ಜಾಗದಲ್ಲಿ ದೊಡ್ಡದೊಂದು ಕೃಷಿ ಹೊಂಡವನ್ನೂ ಮಾಡಿದ ಇವರು, ಆ ಪರಿಸರದ
ಮಳೆಯ ನೀರು ಈ ಕೃಷಿ ಹೊಂಡಕ್ಕೆ ಬಂದು ಬೀಳುವಂತೆ ಮಾಡಿದರು. ಸಣ್ಣ ಕೆರೆಯಷ್ಟು ಗ್ರಾತದ ಈ ಹೊಂಡದಲ್ಲಿ ನೀರು ತುಂಬಿ ಕಾಲುವೆಗಳ ಮೂಲಕ ಹರಿಯುವಂತೆ ಮಾಡಲಾಯಿತು.

ದಿಶಾ ಟ್ರಸ್ಟ್‌ ಮಾರ್ಗದರ್ಶನ ಮಾಡಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋ ಜನೆಯವರು ಇಂಗು ಗುಂಡಿ ಕಂಡು ಸಹಾಯ ಧನ ನೀಡಿದರು. ಮನೆಯಲ್ಲಿ ಗೋಬರ್‌ ಗ್ಯಾಸ್‌, ಎರೆಹುಳ ಗೊಬ್ಬರವನ್ನೂ ಪ್ರಾರಂಭಿಸಿದರು.
ಒಟ್ಟೂ ಕೃಷಿ ಯಾವ ಸಮಯದಲ್ಲೂ ಕೈ ಕೊಡದಂತೆ ನೋಡಿಕೊಂಡರು. ಬಾವಿಯ ನೀರು ಎಪ್ರಿಲ್‌ನಲ್ಲಿ ಕಡಿಮೆಯಾಗುತ್ತಿತ್ತು.

ಆದರೆ ಇತ್ತೀಚಿನ 5 ವರ್ಷಗಳಿಂದ ಆ ಸಮಸ್ಯೆ ಇಲ್ಲ. ಸುತ್ತಲಿನ ಸುಮಾರು 10 ಮನೆಗಳು ನೀರಿಗಾಗಿ ಇಲ್ಲಿಗೆ ಬರುತ್ತಿದ್ದರು. ಕೆಲವರಿಗೆ ಈಗ ಧಾರಾಳ ನೀರಿದೆ. ಇನ್ನೂ ಕೆಲವರು ಬಾವಿ ಅಗೆದಿದ್ದು, ಅವರಿಗೂ ನೀರು ಸಿಕ್ಕಿದೆ.
ಒಂದುವೇಳೆ ನೀರು ಸಿಗದಿದ್ದರೆ ಕೊಳವೆ ಬಾವಿ ಕೊರೆಯಬೇಕೆಂದಿದ್ದರಂತೆ. 

ನೀರು ಬಳಕೆ ಎಚ್ಚರ ಅಗತ್ಯ
ನೀರು ಭೂಮಿಯ ಪ್ರತಿಯೊಂದು ಜೀವರಾಶಿಗೆ ಬಹಳ ಅಗತ್ಯ. ಭೂಮಿಯಲ್ಲಿ ಕುಡಿಯಲು ಯೋಗ್ಯವಾದ ಶುದ್ಧ ನೀರು ಲಭ್ಯವಿರುವುದು ಶೇ. 3ರಷ್ಟು ಮಾತ್ರ. ಆದರೆ, ನಾವು ದಿನಬಳಕೆಗೆಂದು ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿ ನೀರನ್ನು ಪೋಲು ಮಾಡುತ್ತಿದ್ದೇವೆ. ಹೀಗಾಗಿ ನೀರನ್ನು ಸಂರಕ್ಷಣೆ ಅಗತ್ಯವಾಗಿದೆ. ಇದಕ್ಕಾಗಿ ಕೆಲವೊಂದು ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವುದು ಅಗತ್ಯ.

ಅಗತ್ಯವಿದ್ದಷ್ಟೇ ನೀರನ್ನು ಬಳಸಿ, ಇಂಗು ಗುಂಡಿಗಳನ್ನು ತೋಡಿ ನೀರನ್ನು ಸಂಗ್ರಹಿಸಿ, ಬಳಸಿದ ನೀರನ್ನು ಮತ್ತೆ ದ್ವಿತೀಯ ಅಗತ್ಯತೆಗಳಿಗೆ ಬಳಸುವುದು. ಮಳೆಯ ಅಸಮರ್ಪಕತೆ ತಡೆಯಲು ಮರಗಳನ್ನು ಬೆಳೆಸುವುದು.ಮಳೆ
ನೀರನ್ನು ಸಂಗ್ರಹಿಸುವುದು. ನದಿ ನೀರು ಕಲುಷಿತವಾಗದಂತೆ ತಡೆಯುಧಿವುಧಿದು, ಹನಿ ನೀರಾವರಿ ಪದ್ಧತಿ ಅನುಸರಿಸಿ, ನೀರು ಹೆಚ್ಚು ವ್ಯಯವಾಗದಂತೆ ಎಚ್ಚರವಹಿಸುವುದು. ಕೊಳವೆ ಬಾವಿಧಿಗಳ ಬದಧಿಲು ತೆರೆದ ಬಾವಿಗಳನ್ನೇ ಬಳಸುವುದು. ಪೈಪ್‌ ಒಡೆದು ನೀರು ಪೋಲಾಗದಂತೆ ಎಚ್ಚರವಹಿಸುವುದು ಅಗತ್ಯವಾಗಿದೆ. ಅಮೂಲ್ಯವಾದ ನೀರನ್ನು ಮಿತವಾಗಿ ಬಳಸಿ, ಅನಗತ್ಯವಾಗಿ ಪೋಲಾಗದಂತೆ ತಡೆದರೆ, ಮುಂದೆಯೂ ಕೆಲಕಾಲ ನೀರಿನ ಅಭಾವದಿಂದ ದೂರ ಉಳಿಯಬಹುದು.

– ಹಕೀಂ ಪೇರಡ್ಕ

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.