ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹ ಆರಂಭ
Team Udayavani, Sep 18, 2018, 12:16 PM IST
ಬಂಟ್ವಾಳ: ತುಂಬೆ ಡ್ಯಾಂನಲ್ಲಿ ಹೊರ ಹರಿವು ನಿಲುಗಡೆ ಮಾಡಿದ್ದು, ಮೂರು ದಿನಗಳಿಂದ ನೀರಿನ ಮಟ್ಟ ಏರಿಕೆ ಆಗುತ್ತಿದೆ.
ನೇತ್ರಾವತಿ ನದಿಯಲ್ಲಿ ಹರಿವು ಕಡಿಮೆ ಆಗುತ್ತಿದ್ದಂತೆ ಮನಪಾ ಈ ಬಾರಿ ಅವಧಿಗಿಂತ ಮುಂಚಿತವಾಗಿಯೇ ಡ್ಯಾಂ ಗೇಟ್‌ಗಳನ್ನು ಇಳಿಸುವ ಮೂಲಕ ಹೊರ ಹರಿವನ್ನು ನಿಯಂತ್ರಿಸಿದೆ.
ಪ್ರಸ್ತುತ ಡ್ಯಾಂನಲ್ಲಿ 5 ಮೀ. ಎತ್ತರಕ್ಕೆ ನೀರನ್ನು ಕಾಯ್ದಿಟ್ಟುಕೊಳ್ಳಲಾಗಿದೆ. ನೆರೆ ನೀರಿನಿಂದ ತುಂಬಿ ಹರಿದಿದ್ದ ನೇತ್ರಾವತಿ ನದಿಯಲ್ಲಿ ಒಳಹರಿವು ಕುಸಿದಿದೆ.
ಈ ಹಿಂದೆ ಅಕ್ಟೋಬರ್ ಅಂತ್ಯಕ್ಕೆ ಡ್ಯಾಂನ ಗೇಟ್ ಮುಚ್ಚಲಾಗುತ್ತಿತ್ತು. ಆದರೆ ಈ ಬಾರಿ ಸೆಪ್ಟಂಬರ್ ಮಧ್ಯದಲ್ಲೇ 30 ಗೇಟುಗಳ ಪೈಕಿ 26ನ್ನು ಮುಚ್ಚಲಾಗಿದೆ. ಶಂಭೂರಿನ ಎಎಂಆರ್ ಡ್ಯಾಂನಲ್ಲೂ ನೀರಿನ ಹರಿವು ಕಡಿಮೆಯಾಗಿದ್ದು, ಪ್ರಸ್ತುತ 18.9 ಮೀ. ನೀರು ಕಾಯ್ದುಕೊಳ್ಳಲಾಗಿದೆ. ನದಿ ಬದಿಯಲ್ಲಿ ಡಿಸೆಂಬರ್‌ವರೆಗೆ ನೀರು ಹರಿಯುತ್ತಿದ್ದ ತೊರೆಗಳು ಈ ಬಾರಿ ನೀರಿನ ಹರಿವಿಲ್ಲದೆ ಸೊರಗಿವೆ.
ನೀರಿನ ಮಟ್ಟ ಇಳಿಕೆ ಕಾರಣ
ಪ್ರಸ್ತುತ ವರ್ಷ ಸೆ. 16ರಿಂದ ಡ್ಯಾಂ ಗೇಟುಗಳನ್ನು ಇಳಿಸಲಾಗಿದೆ. ನೀರು ಹರಿವು ಕಡಿಮೆ ಆಗಿರುವುದು ಗೇಟ್ ಇಳಿಸಲು ಕಾರಣ ಎಂದು ಮನಪಾ ಅಧಿಕಾರಿಗಳು ವಿವರ ನೀಡಿದ್ದಾರೆ.
ವಾಸ್ತವದಲ್ಲಿ ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರನ್ನು ಸಂಪೂರ್ಣ ತಡೆದು ಹೊರ ಹರಿವನ್ನು ನಿಯಂತ್ರಿಸಲಾಗಿದೆ. ಅಲ್ಲಿ ನೀರಿನ ಮಟ್ಟವನ್ನು 18.5 ಮೀ.ಗೆ ಏರಿಸಿರುವುದು ಹರಿವು ಕಡಿಮೆಯಾಗಲು ಕಾರಣವಾಗಿದೆ, ಉಪ್ಪಿನಂಗಡಿ, ಧರ್ಮಸ್ಥಳಗಳಲ್ಲಿ ನದಿಯಲ್ಲಿ ನೀರ ಹರಿವು ಇದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಮಳೆ ನಿಂತ ಬಳಿಕ ನೀರ ಹರಿವು ಕಡಿಮೆ ಆಗಿದೆ ಎಂಬುದಾಗಿ ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟಂಬರ್‌ಗೆà ಡಿಸೆಂಬರ್ ಸ್ಥಿತಿ
ಕಳೆದ ವರ್ಷ ತುಂಬೆ ನೂತನ ಡ್ಯಾಂ ಕಾಮಗಾರಿ ಪೂರ್ತಿಗೊಂಡು ಎಪ್ರಿಲ್ ಬಳಿಕ 6 ಮೀ. ನೀರು ನಿಲುಗಡೆ ಆಗಿತ್ತು. ಅದಕ್ಕೆ ಮೊದಲು 5 ಮೀ. ಎತ್ತರ ನೀರು ನಿಲ್ಲಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹಲಗೆ ಇಳಿಸಿದ್ದರು. ಎಪ್ರಿಲ್‌ನಲ್ಲಿ ನೂತನ ಡ್ಯಾಂ ಕೆಲಸ ಮುಗಿಸಿ ನೀರು ನಿಲುಗಡೆ ಆಗಿದ್ದು, ಕಿರು ಡ್ಯಾಂ ಮುಳುಗಡೆ ಆಗಿತ್ತು. ಪ್ರಸ್ತುತ ವರ್ಷ ಹೊರ ಹರಿವು ನಿಲ್ಲಿಸುವ ಡಿಸೆಂಬರ್‌ನ ಸ್ಥಿತಿ ಸೆಪ್ಟಂಬರ್‌ನಲ್ಲೇ ಎದುರಾಗಿದೆ.
2015-16ನೇ ಸಾಲಿನಲ್ಲಿ ನವೆಂಬರ್‌ನಲ್ಲಿ ಕಿಂಡಿ ಅಣೆಕಟ್ಟಿಗೆ ಹಲಗೆ ಇಳಿಸಿದ್ದರು. ಸುಮಾರು ಒಂದು ತಿಂಗಳ ಕಾಲ ಆ ಕಾಮಗಾರಿ ನಡೆಯುವುದ ರಿಂದ ಡಿಸೆಂಬರ್ ತಿಂಗಳಾಗುವಾಗ ನೀರು ನಿಲ್ಲಲು ಆರಂಭವಾಗುತ್ತಿತ್ತು.
15 ವರ್ಷಗಳಲ್ಲಿ ಸಾಮಾನ್ಯವಾಗಿ ನವೆಂಬರ್- ಡಿಸೆಂಬರ್ ತಿಂಗಳಲ್ಲಿ ನೀರು ನಿಲ್ಲಿಸಲಾಗುತ್ತಿತ್ತು. ಪ್ರಸ್ತುತ ವರ್ಷ ಮಳೆ ಹಠಾತ್ ನಿಂತ ಕೂಡಲೇ ನೀರಿನ ಕೊರತೆಯ ಲಕ್ಷಣ ಕಾಣಿಸಿದೆ. ಸಾಮಾನ್ಯ ಸ್ಥಿತಿಯಲ್ಲಿ ಸೆಪ್ಟಂಬರ್‌ನಲ್ಲಿ ಉತ್ತಮ ಮಳೆ ಆಗುವುದರ ಜತೆಗೆ ನೆರೆ ನೀರು ನದಿಯ ದಂಡೆಯ ಮಟ್ಟಕ್ಕೂ ಹರಿದ ಉದಾಹರಣೆಗಳು ಇವೆ. ಇನ್ನು ಮಳೆಯಾಗದಿದ್ದಲ್ಲಿ ಪರಿಸ್ಥಿತಿ ಕೈ ಮೀರಲಿದೆ.
ಪಯಸ್ವಿನಿ: ನೀರಿನ ಮಟ್ಟ ಇಳಿಮುಖ
1974ನೇ ಇಸವಿಯ ಬಳಿಕ ಕುಮಾರಧಾರಾ, ಪಯಸ್ವಿನಿ ನದಿ ಸೇರಿದಂತೆ ತಾಲೂಕಿನ ನೀರಿನ ಮೂಲಗಳಲ್ಲಿ ಗರಿಷ್ಠ ಮಟ್ಟದಲ್ಲಿ ಮಳೆ ನೀರು ಹರಿದಿತ್ತು. ಈಗ ಒಂದು ವಾರದಿಂದ ನೀರಿನ ಪ್ರಮಾಣ ಸಾಕಷ್ಟು ಕುಸಿದಿದ್ದು, ನದಿಯಲ್ಲಿ ಕಲ್ಲು ಬಂಡೆ ಕಾಣುತ್ತಿದೆ.
ಅಂತರ್ಜಲ ಸಮೀಕ್ಷೆ ಪ್ರಕಾರ 1.96ರಲ್ಲಿ ಇದ್ದ ಜಲಮಟ್ಟ ಈಗ 2.45ಕ್ಕೆ ಕುಸಿದಿದೆ. ಸದ್ಯ ತಾಲೂಕಿ ನಲ್ಲಿ ನೀರಿನ ಅಭಾವ ತಲೆದೋರಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ
Sullia: ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.