ನೀರು ಸರಬರಾಜು ಸಮಸ್ಯೆ 7ನೇ ದಿನಕ್ಕೆ
Team Udayavani, Apr 14, 2018, 12:37 PM IST
ಬಂಟ್ವಾಳ : ಬಿ.ಸಿ. ರೋಡ್ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ನೀರು ಸರಬರಾಜು ಆಗದೆ ಏಳು ದಿನಗಳು ಕಳೆದಿವೆ.ನೀರಿಲ್ಲದೆ ಸರಬರಾಜು ನಿಲುಗಡೆ ಆಗಿರುವುದಲ್ಲ. ಪೈಪ್‌ಲೈನ್‌ನಲ್ಲಿ ನೀರಿನ ಸೋರಿಕೆಯಾಗಿ ನೀರು ಹರಿಸಲು ಸಾಧ್ಯವಾಗಿಲ್ಲ ಎಂಬುದಿಲ್ಲಿ ಮಹತ್ವದ್ದಾಗಿದೆ.
ಪ್ರತೀ ದಿನವೂ ಬಿ.ಸಿ.ರೋಡ್ ನಗರದಲ್ಲಿ ಪೈಪ್‌ಲೈನ್ ಒಡೆದು ನೀರು ರಸ್ತೆಯಲ್ಲಿ ಹರಿದು ಕೃತಕ ನೆರೆ ಸೃಷ್ಟಿ ಜತೆಗೆ ಅಧಿಕಾರಿ ವರ್ಗಕ್ಕೆ ದೂರು ಹೋಗಿ ನೀರು ಸರಬರಾಜು ನಿಲುಗಡೆ ಆಗುತ್ತಿದೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಯಾರನ್ನೂ ಪ್ರಶ್ನಿ ಸುವಂತಿಲ್ಲ ಎಂಬ ಉತ್ತರ ಅಧಿಕಾರಿ ವರ್ಗದಿಂದ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಬಳಕೆದಾರರು.
ಟ್ಯಾಂಕರ್‌ಗೆ ಮೊರೆ
ಜನರು ನೀರಿಗಾಗಿ ಸ್ಥಳೀಯವಾಗಿ ಕೆಲವೇ ಮಂದಿಯಲ್ಲಿ ಇರುವಂತಹ ಕುಡಿಯುವ ನೀರಿನ ಬಾವಿಗೆ ಎಡತಾಕುವಂತಾಗಿದೆ. ಟ್ಯಾಂಕರ್ ನೀರು ಸರಬರಾಜು ವ್ಯವಸ್ಥೆಗೆ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶದಲ್ಲಿ ಕೆಲವರು ಸ್ವಂತ ವಾಹನ ಬಳಸಿಕೊಂಡು ನದಿಯಿಂದ, ಕೆರೆಯಿಂದ, ನೀರು ಸಮರ್ಪಕವಾಗಿ ಸರಬರಾಜು ಆಗುವ ಟ್ಯಾಪ್‌ನಿಂದ ಪಾತ್ರೆಗಳಲ್ಲಿ ನೀರು ತುಂಬಿಸಿ ತರುವ ಮೂಲಕ ಸ್ವಯಂ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ನೀರು ಸರಬರಾಜು ಸಮಸ್ಯೆ 7ನೇ ದಿನಕ್ಕೆ ಮುಂದುವರಿದಿದೆ. ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿ ವರ್ಗ ತುರ್ತು ಕರ್ತವ್ಯದಲ್ಲಿದೆ. ಜನಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಜನತೆ ಸಮಸ್ಯೆ ಶೀಘ್ರ ಪರಿಹಾರವಾಗಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.
ಕಾಮಗಾರಿಯ ವೈಫಲ್ಯ
ದಿನಂಪ್ರತಿ ಪೈಪ್ ಒಡೆದು ನೀರು ಪೋಲಾಗುತ್ತಿರುವುದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಯ ವೈಫಲ್ಯವನ್ನು ತೋರಿಸುವಂತಾಗಿದೆ. ಕಳೆದ ನಾಲ್ಕು ದಿನಗಳಿಂದ ಕಾಂಕ್ರೀಟ್ ರಸ್ತೆಯನ್ನು ಅಲ್ಲಲ್ಲಿ ಪರಿಶೀಲನಾರ್ಥ ಅಗೆದು ಹಾಕುತ್ತಿದ್ದಾರೆ. ಎಲ್ಲಿ ಪೈಪ್ ಒಡೆದಿದೆ ಎನ್ನುವುದು ಇನ್ನೂ ಖಾತ್ರಿ ಇಲ್ಲದಂತಿದೆ. ಬಿ.ಸಿ. ರೋಡಿನ ಸರ್ವಿಸ್ ರಸ್ತೆಯ ಕಾಮಗಾರಿ ನಡೆಯುವ ಸಂದರ್ಭ ಪುರಸಭೆ ಈ ಪೈಪ್‌ಲೈನ್ ಬಗ್ಗೆ ಕಾಳಜಿ ವಹಿಸಬೇಕಾದ ವ್ಯವಸ್ಥೆಗಳನ್ನು ಮಾಡದಿರುವುದು ಇಂದಿನ ಸಮಸ್ಯೆಗೆ ಕಾರಣ ಎಂಬುದಾಗಿ ಜನಾಭಿಪ್ರಾಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.