ನೀರು ಸರಬರಾಜು ಕೊಳವೆ ಸೋರಿಕೆ ಪತ್ತೆ
Team Udayavani, Apr 15, 2018, 1:22 PM IST
ಬಂಟ್ವಾಳ : ಕೊಳವೆಯಲ್ಲಿ ಬಿರುಕು ಉಂಟಾಗಿ ಬಿ.ಸಿ. ರೋಡ್ ಪರಿಸರದಲ್ಲಿ ಕಳೆದ 7 ದಿನಗಳ ಕುಡಿಯುವ ನೀರಿನ ಸಮಸ್ಯೆಗೆ ಭಾಗಶಃ ಪರಿಹಾರ ಕಾಣುವ ಯತ್ನವಾಗಿದೆ.
ಬಿ.ಸಿ. ರೋಡ್ ಫ್ಲೈಓವರ್ ಅಡಿಯಲ್ಲಿ ಇದ್ದ ಕೊಳವೆಯೊಂದರಲ್ಲಿ ಬಿರುಕು ಉಂಟಾಗಿದ್ದನ್ನು ಸತತ ಆರು ದಿನಗಳ ಹುಡುಕಾಟದ ಬಳಿಕ ಪತ್ತೆಹಚ್ಚಿ ಅದನ್ನು ಸರಿಪಡಿಸಲಾಗಿದೆ. ಎ. 13ರಂದು ಸಂಜೆ ಹೊತ್ತಿಗೆ ಪ್ರಾಯೋಗಿಕ ನೀರು ಹರಿಯುವಂತೆ ಮಾಡಲಾಗಿದ್ದು, ಸೋರಿಕೆ ಸ್ಥಳದ ಮೇಲೆ ಗಮನ ಇಡಲಾಗಿದೆ.
ಎ. 7ರಿಂದ ಪೈಪ್‌ಲೈನ್‌ನಲ್ಲಿ ಬಿರುಕು ಉಂಟಾಗಿ ಸೋರಿಕೆ ಉಂಟಾಗಿ ಕುಡಿಯುವ ನೀರಿನ ಸರಬರಾಜಿನಲ್ಲಿ ಸಮಸ್ಯೆ ತಲೆದೋರಿತ್ತು. ಸೋರಿಕೆ ಎಲ್ಲಿ ಎಂಬುದನ್ನು ಪತ್ತೆಹಚ್ಚುವಲ್ಲೇ ಆರು ದಿನಗಳು ಕಳೆದಿದ್ದು, ಎ. 13ರಂದು ನಿರ್ದಿಷ್ಟ ಸ್ಥಳ ಗಮನಕ್ಕೆ ಬಂದು ಪೈಪು ಜೋಡಣೆ ಕಾರ್ಯಕ್ಕೆ ರಸ್ತೆ ಪಕ್ಕ ಅಗೆಯುವ ಕಾರ್ಯ ನಡೆಯಿತು.
ನೀರಿನ ಹಳೇ ಪೈಪು ಎಲ್ಲೆಲ್ಲಿ ಹೋಗಿದೆ ಎಂಬ ಸ್ಪಷ್ಟ ಅರಿವು ಹೊಂದಿರದ ಸಿಬಂದಿ ಅಲ್ಲಲ್ಲಿ ಹೊಂಡ ಮಾಡಿದ್ದರು. ಈ ಸಂದರ್ಭ ಬಿ.ಸಿ. ರೋಡಿನ ಕೇಂದ್ರ ಭಾಗದಲ್ಲೇ ಹೆದ್ದಾರಿಯ ಕಾಂಕ್ರಿಟೀಕೃತ ಸರ್ವಿಸ್ ರಸ್ತೆಯಲ್ಲಿ ಬಿರುಕು ಉಂಟಾಗಿ ನೀರು ಚಿಮ್ಮಲು ಆರಂಭಿಸಿ ಹೊಳೆಯಂತೆ ಹರಿಯಿತು. ಒಂದು ಹಂತದಲ್ಲಿ ಪೊಲೀಸ್ ಸ್ಟೇಶನ್‌ಗೆ ತೆರಳುವ ರಸ್ತೆಯಲ್ಲಿ ಸಂಚರಿಸಲೂ ಆಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿತು. ಸ್ಟೇಟ್ ಬ್ಯಾಂಕ್ ಪಕ್ಕದಲ್ಲಿ ಹೊಳೆಯಂತೆ ನೀರು ತುಂಬಿತ್ತು. ಅಂತೂ ಸ್ಪಷ್ಟ ಸ್ಥಳ ಗಮನಕ್ಕೆ ಬರುತ್ತಿದ್ದಂತೆ ಅದನ್ನು ದುರಸ್ತಿ ಮಾಡಿ ಮುಚ್ಚುವ ಕೆಲಸ ಭರದಿಂದ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.