ನೀರು ತುಂಬುವಾಗಲೇ ಒಡೆದ ಟ್ಯಾಂಕ್‌! ಯುವಕ ಸಾವು, ಇನ್ನೋರ್ವನಿಗೆ ಗಾಯ


Team Udayavani, Jan 28, 2019, 12:50 AM IST

gode.jpg

ಬಡಗನ್ನೂರು: ಕೆಂಪು ಕಲ್ಲಿನಿಂದ ಕಟ್ಟಿದ ಗಂಗಾ ಕಲ್ಯಾಣ ಇಲಾಖೆ ಯ ಕುಡಿಯುವ ನೀರಿನ ಟ್ಯಾಂಕ್‌ ಒಡೆದು ಓರ್ವ ಮೃತಪಟ್ಟು, ಇನ್ನೋರ್ವ ಕಾಲು ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡ ಘಟನೆ ಜ. 26 ರಂದು ತಡರಾತ್ರಿ ಅರಿಯಡ್ಕ ಗ್ರಾಮದ ಪಾಪೆಮಜಲಿನಲ್ಲಿ ಸಂಭವಿಸಿದೆ.

ಪಾಪೆಮಜಲು ನಿವಾಸಿ ಅಂಗಾರ – ದೇವಕಿ ದಂಪತಿಯ ಪುತ್ರ ರಮೇಶ್‌ ಯಾನೆ ರಾಮ (30) ಮೃತ ಪಟ್ಟವರು. ದಂಪತಿಗೆ ಮೂವರು ಮಕ್ಕಳಿದ್ದು ರಮೇಶ್‌ ಹಿರಿಯ ಪುತ್ರ. ಅವರ ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ತಂದೆ ಈ ಹಿಂದೆ ನಿಧನಹೊಂದಿದ್ದರು. ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬವು ಹಿರಿಯ ಸಹೋದರನ ಸಾವಿನಿಂದ ಕಂಗೆಟ್ಟಿದೆ. ಗಂಭೀರವಾಗಿ ಗಾಯಗೊಂಡಿರುವ ಮಾಧವ ಅವರನ್ನು ಆಸ್ಪ ತ್ರೆಗೆ ದಾಖಲಿಸಲಾಗಿದೆ.

6 ವರ್ಷ ಹಿಂದೆ ನಿರ್ಮಾಣವಾಗಿತ್ತು
5 ಅಡಿ ಎತ್ತರ, 6 ಅಡಿ ಅಗಲದ ಈ ಟ್ಯಾಂಕನ್ನು 6 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ ಒಮ್ಮೆಯೂ ನೀರು ತುಂಬಿಸಿರಲಿಲ್ಲ ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ನೀರು ತುಂಬಿಸಲು ನೋಡಿದಾಗ ಟ್ಯಾಂಕ್‌ ಬಿರುಕು ಬಿಟ್ಟಿರುವುದು ಕಂಡುಬಂದಿತ್ತು. ಬಿರುಕು ಮುಚ್ಚುವ ಕೆಲಸ ಮಾಡಿದ ಬಳಿಕ ನಾಲ್ಕೈದು ದಿನಗಳಿಂದ ಸ್ವಲ್ಪ ಸ್ವಲ್ಪ ನೀರು ತುಂಬಿಸಿ ಪರೀಕ್ಷಿಸಲಾಗಿತ್ತು. ಯಾವುದೇ ಸೋರಿಕೆ ಕಂಡುಬಾರದ ಹಿನ್ನೆಲೆಯಲ್ಲಿ ಜ. 26ರಂದು ರಾತ್ರಿ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿ ಸಲು ಯೋಜಿಸಿದ್ದರು.

ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಗ್ರಾ.ಪಂ. ಅಧ್ಯಕ್ಷೆ ಸವಿತಾ, ಪಿಡಿ ಒ ಪದ್ಮಕುಮಾರಿ, ಪಂ. ಸದಸ್ಯರಾದ ಸಂತೋಷ ಮಣಿಯಾಣಿ, ಚಿತ್ರಾ ನಾಯ್ಕ…, ನಿರ್ಮಲಾ, ತಿಲಕ್‌ ರೈ ಕುತ್ಯಾಡಿ, ಶಶಿಕಲಾ ಚೌಟ, ಕಾವು ಹೇಮನಾಥ ಶೆಟ್ಟಿ, ಸಂಪ್ಯ ಗ್ರಾಮಾಂತರ ಠಾಣಾ ಠಾಣಾ ಎಸ್‌ಐ ಸತ್ತಿವೇಲು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿ¨ªಾರೆ. 

ಇಣುಕಿ ನೋಡುವಾಗ ದುರ್ಘ‌ಟನೆ
ತಡರಾತ್ರಿ 11.30ರ ಹೊತ್ತಿಗೆ ಟ್ಯಾಂಕಿನಲ್ಲಿ ನೀರು ತುಂಬಿದೆಯಾ ಎಂದು ನೋಡಲು ಸ್ಥಳೀಯ ನಾಲ್ವರು ಯುವಕರು ಹೋಗಿದ್ದು, ಟ್ಯಾಂಕಿಗೆ ಇಣುಕಿ ನೋಡುವ ಯತ್ನದಲ್ಲಿದ್ದಾಗ ಏಕಾಏಕಿ ಒಡೆದುಹೋಯಿತು. ಟ್ಯಾಂಕ್‌ ಮೇಲೇರಲು ಏಣಿಯಾಗಲೀ ಮೆಟ್ಟಿಲಾಗಲಿ ಇರಲಿಲ್ಲ. ನೀರು ತುಂಬುತ್ತಿದ್ದಂತೆ ಟ್ಯಾಂಕ್‌ ಒಡೆದಿದ್ದು, ಹತ್ತಿರದಲ್ಲಿದ್ದ ರಮೇಶ್‌ ಎದೆಗೆ ಹಾಗೂ ಮಾಧವ ಅವರ ಕಾಲಿಗೆ ಕಲ್ಲು ಬಿದ್ದು ಗಂಭೀ ರ ವಾಗಿ ಗಾಯ ಗೊಂಡರು. ತತ್‌ಕ್ಷಣ ಗಾಯಾಳು ಗಳನ್ನು ಪುತ್ತೂರು ಆಸ್ಪತ್ರೆಗೆ ತರಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯು ತ್ತಿದ್ದ ವೇಳೆ ರಮೇಶ್‌ ಮೃತಪಟ್ಟರು. 

ಟಾಪ್ ನ್ಯೂಸ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1(2)

Puttur: ಮೊದಲ ಕಿನ್ನಿಪಿಲಿಗೆ 48 ವರ್ಷ!; 15ರಿಂದ 75ಕ್ಕೇರಿದ ಟೀಮ್‌

5-belthanagdy

Belthanagdy:ಹಿರಿಯ ಸಹಕಾರಿ,ಉಜಿರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸೇವಾಸಂಘದ ಅಧ್ಯಕ್ಷ ನಿಧನ

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Cap-Brijesh-Chowta

Putturu: ವಿದೇಶಗಳಿಂದ ಅಡಿಕೆ ಆಮದು ಪರಿಣಾಮ ಅಧ್ಯಯನ: ಸಂಸದ ಕ್ಯಾ.ಬ್ರಿಜೇಶ್‌ ಚೌಟ

Bela1

Wild Elephant: ಧರ್ಮಸ್ಥಳ, ಚಾರ್ಮಾಡಿಯಲ್ಲಿ ಕಾಡಾನೆಗಳ ಹಾವಳಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!

2

Kasaragod: ಗಾಯಕಿಯ ಮಾನಭಂಗ; ದೂರು: ಗಾಯಕ ರಿಯಾಸ್‌ ಬಂಧನ

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

11(1)

Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.