ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧ: ಬಾಲಕ ಸಮುದ್ರ ಪಾಲು
Team Udayavani, Apr 23, 2018, 6:00 AM IST
ಮಂಗಳೂರು/ಉಡುಪಿ: ಕಳೆದು ಎರಡು ದಿನಗಳಿಂದ ಹವಾಮಾನ ವೈಪರಿತ್ಯದಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು, ರವಿವಾರ ಮಧ್ಯಾಹ್ನದಿಂದ ಕರಾವಳಿ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು. ಮರವಂತೆಯಲ್ಲಿ ರವಿವಾರ ಸಂಜೆ ನೀರಾಟ ಆಡುತ್ತಿದ್ದ ಬಾಲಕನೊಬ್ಬ ಅಲೆಗಳಿಗೆ ಸಿಲುಕಿ ಸಮುದ್ರ ಪಾಲಾಗಿದ್ದಾನೆ. ವಿವಿಧೆಡೆ ಉಪ್ಪು ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ನಿಗಾ ವಹಿಸಲಾಗಿದೆ.
ಮುಡಿಪು ಸಮೀಪದ ಬೋಳಿಯಾರು ನಿವಾಸಿ ರಶೀದ್ ಅವರ ಪುತ್ರ ಮೊಹಮ್ಮದ್ ಜುನೈದ್ (12) ಮೃತ ಬಾಲಕ. ಈತ ತಂದೆ, ತಾಯಿ ಮತ್ತು ಬಂಧುಗಳ ಜತೆಗೆ ಮಂಗಳೂರಿನಿಂದ ಶಿರೂರಿಗೆ ಮದುವೆಗೆ ತೆರಳಿದ್ದ. ಮರಳಿ ಬರುವಾಗ ಸಂಜೆ 5.30ರ ಸುಮಾರಿಗೆ ಮರವಂತೆಯ ಸುಂದರ ಕಡಲ ತಡಿಯ ವೀಕ್ಷಣೆಗೆ ತೆರಳಿದ್ದರು. ವರಾಹ ಮಾರಸ್ವಾಮಿ ದೇವಸ್ಥಾನದ ಎದುರು ಗೂಡಂಗಡಿ ಸಮೀಪ ಬಾಲಕ ಸಮುದ್ರ ದಡಕ್ಕೆ ಇಳಿಯುತ್ತಿದ್ದಂತೆ ಭಾರೀ ಗಾತ್ರದ ಅಲೆಗಳು ಅಪ್ಪಳಿಸಿ ಬಾಲಕ ಸಮುದ್ರ ಪಾಲಾಗಿದ್ದಾನೆ. ತಡರಾತ್ರಿವರೆಗೂ ಬಾಲಕನಿಗಾಗಿ ಹುಡುಕಾಟ ಮುಂದುವರಿದಿತ್ತು.
80ಕ್ಕೂ ಹೆಚ್ಚು ಮನೆಗಳಿಗೆ ನೀರು: ರವಿವಾರ ಉಳ್ಳಾಲ ಮತ್ತು ಉಚ್ಚಿಲ ಸಮುದ್ರ ತೀರದಲ್ಲಿ ಸಮುದ್ರದ ಅಲೆಗಳು ದಡಕ್ಕಪ್ಪಳಿಸುವುದರೊಂದಿಗೆ ಪ್ರವಾಹದ ರೂಪದಲ್ಲಿ ಸುಮಾರು 80ಕ್ಕೂ ಹೆಚ್ಚು ಮನೆಗಳನ್ನು ಸುತ್ತುವರಿದಿದ್ದು, ಉಳ್ಳಾಲ, ಉಚ್ಚಿಲ ಪ್ರದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಮುದ್ರದ ನೀರು ಈ ರೀತಿ ಉಕ್ಕೇರಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ. ಉಚ್ಚಿಲದಲ್ಲಿ 3 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಜಿಲ್ಲಾಧಿ ಕಾರಿ, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರವು ಹವಾಮಾನ ವೈಪರೀತ್ಯದಿಂದಾಗಿ ಶನಿವಾರ ಮತ್ತು ರವಿವಾರ ಕಡಲಿನ ಅಲೆಗಳ ಅಬ್ಬರ ಹೆಚ್ಚಳವಾಗಲಿದೆ ಎಂದು ಮೀನುಗಾರಿಕಾ ಇಲಾಖೆಗೆ ಮುನ್ಸೂಚನೆ ನೀಡಿತ್ತು.
ಇದನ್ನು ಆಧರಿಸಿ ಮೀನುಗಾರಿಕಾ ಇಲಾಖೆಯು ಕಳೆದ ಎರಡು ದಿನಗಳ ಹಿಂದೆಯೇ ಸ್ಥಳೀಯ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದು, ಇದೇ ಕಾರಣಕ್ಕೆ ಶನಿವಾರ ಮತ್ತು ರವಿವಾರ ಅನೇಕ ಬೋಟುಗಳು ನಗರದ ಧಕ್ಕೆ ಬಂದರಿನಲ್ಲಿಯೇ ಲಂಗರು ಹಾಕಿತ್ತು. ಈ ನಡುವೆ ರವಿವಾರ ಅಲೆಗಳ ಏರಿಕೆ ಕೊಂಚ ಕಡಿಮೆಯಾಗುವ ನಿರೀಕ್ಷೆಯಲ್ಲಿ ಕೆಲ ಬೋಟುಗಳು ಮೀನುಗಾರಿಕೆಗೆ ಆಳ ಸಮುದ್ರಕ್ಕೆ ತೆರಳಿವೆೆ.
ಕಾಪು, ಪಣಂಬೂರು ಕಡಲ ಕಿನಾರೆಗಳಲ್ಲಿ ಪ್ರವಾಸಿಗರನ್ನು ಕಡಲಿಗೆ ಇಳಿಯಲು ಬಿಡಲಿಲ್ಲ. ಈ ಬಗ್ಗೆ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಹೇಶ್ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದು, “ವಾತಾವರಣದಲ್ಲಿನ ಉಷ್ಣಾಂಶದಲ್ಲಿ ಗಮನಾರ್ಹ ಏರುಪೇರು ಉಂಟಾ ದಾಗ ಸಹಜವಾಗಿಯೇ ಗಾಳಿಯ ವೇಗವೂ ಹೆಚ್ಚಳವಾಗುತ್ತದೆ. ಪರಿಣಾಮ ಅಲೆಗಳ ಅಬ್ಬರ ಹೆಚ್ಚಾಗುತ್ತದೆ. ಹವಾಮಾನದ ವೈಪರಿತ್ಯದಿಂದಾಗಿ ಕಳೆದ 2 ದಿನಗಳಿಂದ ಸುಮಾರು 4 ಮೀಟರ್‌ನಷ್ಟು ಎತ್ತರಕ್ಕೆ ಅಲೆಗಳು ಅಪ್ಪಳಿಸುತ್ತಿವೆ. ಸಾಮಾನ್ಯ ದಿನಗಳಲ್ಲಿ ಸುಮಾರು 1.52 ಮೀ.ನಷ್ಟು ಎತ್ತರಕ್ಕೆ ಅಲೆಗಳು ದಡಕ್ಕೆ ಅಪ್ಪಲಿಸುತ್ತವೆೆ. ಅದೇ ಇತ್ತೀಚೆಗೆ ಓಖೀ ಚಂಡಮಾರುತ ಬಂದಾಗ ಸುಮಾರು 6 ಮೀಟರ್‌ನಷ್ಟು ಎತ್ತರಕ್ಕೆ ಸಮುದ್ರದಲ್ಲಿ ಅಲೆಗಳು ಸೃಷ್ಟಿಯಾಗಿತ್ತು. ಈಗ ಅಲೆಗಳ ಇಳಿಮುಖವಾಗಿದ್ದು ಗಾಬರಿ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.
ಸೈಂಟ್‌ಮೇರೀಸ್ ಯಾನ ನಿಷೇಧ
ಮಲ್ಪೆ ಬೀಚ್‌ನಲ್ಲಿಯೂ ಅಲೆಗಳು ದಡಕ್ಕೆ ಬಡಿದು ನೀರು ರಸ್ತೆ ಬದಿಯ ವರೆಗೂ ಹರಿದು ಬಂದಿದೆ. ಪ್ರವಾಸಿಗರು ಕುಳಿತುಕೊಳ್ಳುವ ಜಾಗ ನೀರಿನಿಂದಾವೃತವಾಗಿತ್ತು. ಪ್ರವಾಸಿಗರು ಸಮುದ್ರದಲ್ಲಿ ಬಹುದೂರ ಹೋಗಿ ಆಟವಾಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಮೈಕ್ ಮೂಲಕವೂ ಎಚ್ಚರಿಕೆಯ ಸಂದೇಶ ನೀಡಲಾಗುತ್ತಿ¤ದೆ. ಸೈಂಟ್‌ಮೇರೀಸ್ ದ್ವೀಪಕ್ಕೆ ತೆರಳುವ ಪ್ರವಾಸಿ ಬೋಟ್‌ಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಇದರಿಂದ ಪ್ರವಾಸಿಗರು ನಿರಾಶರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.