ಚೆಂಬು ಗುಡ್ಡೆಯಲ್ಲಿ ಬಾರ್‌ಗೆ ಅವಕಾಶ ನೀಡೆವು’
Team Udayavani, Jul 5, 2017, 3:45 AM IST
ಉಳ್ಳಾಲ: ಚೆಂಬುಗುಡ್ಡೆ ಪ್ರದೇಶದಲ್ಲಿ ವೈನ್‌ಶಾಪ್‌ಗೆ ನಗರಸಭೆಯಿಂದ ಬೆಂಬಲವೂ ಇಲ್ಲ, ಅನು ಮತಿಯನ್ನೂ ನೀಡುವುದಿಲ್ಲ ಎಂದು ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು ತಿಳಿಸಿದರು.
ಅವರು, ಬಾರ್ ಮತ್ತು ವೈನ್‌ಶಾಪ್‌ಗೆ ಅನುಮತಿ ನೀಡಬಾರದೆಂದು ಆಗ್ರಹಿಸಿ ಚೆಂಬುಗುಡ್ಡೆ ನಾಗರಿಕ ರಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮೌನ ಪ್ರತಿ ಭಟನೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದರು.
ಚೆಂಬುಗುಡ್ಡೆಯ ನೂರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಹನೀಫ್ ಮಾತನಾಡಿ, ಶಾಂತಿ ಸೌಹಾರ್ದದಿಂದಿರುವ ಪ್ರದೇಶದಲ್ಲಿ ವೈನ್‌ಶಾಪ್ ತೆರೆ ಯುವುದರ ಮೂಲಕ ಅಶಾಂತಿಯ ವಾತಾವರಣ ಸೃಷ್ಟಿಯಾಗಲಿದೆ. ವೈನ್‌ಶಾಪ್‌ಗೆ ಅನುಮತಿ ನೀಡಿದ್ದೇ ಆದಲ್ಲಿ ನಗರಸಭೆ ಕಚೇರಿ ಎದುರುಗಡೆ ಕುಳಿತು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಜುಮಾ ಮಸೀದಿ ಕಾರ್ಯದರ್ಶಿ ಮಹಮ್ಮದ್ ಅಸ್ಲಾಂ ಮಾತನಾಡಿ, ಮಸೀದಿಯ ಮೂರು ಮೀಟರ್ ವ್ಯಾಪ್ತಿಯಲ್ಲೇ ವೈನ್ ಶಾಪ್‌ಗೆ ಜಾಗ ಗುರುತಿಸಿರುವುದು ಖಂಡನೀಯ. ರಸ್ತೆಯುದ್ದಕ್ಕೂ ಧಾರ್ಮಿಕ ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಈ ಕುರಿತು ಕಮಿಷನರ್, ಜಿಲ್ಲಾಧಿಕಾರಿ, ನಗರಸಭೆ ಅಧ್ಯಕ್ಷರು, ಅಬಕಾರಿ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಆದರೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಇನ್ನಾದರೂ ಸ್ಥಳೀಯಾ ಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನೂರುಲ್ ಹುದಾ ಜುಮಾ ಮಸ್ಜಿದ್ ಚೆಂಬುಗುಡ್ಡೆ ಇದರ ಮಾಜಿ ಅಧ್ಯಕ್ಷ ಇಮಿ¤ಯಾಝ್, ಅಬ್ಟಾಸ್, ಆದಂ, ಫಾರೂಕ್ ಚೆಂಬುಗುಡ್ಡೆ, ಎಂ.ಸಿ. ಖಾದರ್ ಚೆಂಬುಗುಡ್ಡೆ, ಯು.ಕೆ. ಬಾವಾ ಪಿಲಾರ್, ಹನೀಫ್ ದಾರಂದಬಾಗಿಲು, ಸಜಾದ್ ಚೆಂಬುಗುಡ್ಡೆ, ಅಶ್ರಫ್, ಜೆರಾಲ್ಡ್ ಮೊಂತೇರೊ ಚೆಂಬುಗುಡ್ಡೆ, ಅಂತೋನಿ ಡಿ’ಸೋಜಾ ಚೆಂಬುಗುಡ್ಡೆ, ನಾಗೇಶ್ ಕೆರೆಬೈಲು, ಗಣೇಶ್, ನಾಗೇಶ್, ಸುರೇಶ್, ಅಶ್ರಫ್, ಸತೀಶ್, ಕೆರೆಬೈಲು ಅಝರ್, ನೌಷಾದ್, ತೌಸೀಫ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
Mangaluru: ಕರಾವಳಿಯ ವೃತ್ತಿಪರರಿಗೆ ವಿಶ್ವದೆಲ್ಲೆಡೆ ಮನ್ನಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.