ಸುಗಮ ಮತದಾನಕ್ಕೆ ವೆದರ್ ರಿಪೋರ್ಟ್
Team Udayavani, May 10, 2023, 7:20 AM IST
ಸದ್ಯದ ಹವಾಮಾನ ಮುನ್ಸೂಚನೆ ಪ್ರಕಾರ ಕೆಲವು ಕ್ಷೇತ್ರಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅದರ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ. ಹೆಚ್ಚು ಕಡೆ ಮಧ್ಯಾಹ್ನ, ಸಂಜೆ ಮಳೆ ಸಾಧ್ಯತೆ ಇದೆ. ಹಾಗಾಗಿ ಬೆಳಗ್ಗೆಯೇ ಹೋಗಿ ಮತ ಹಾಕಿ ಬಂದು ಬಿಡಿ, ತಪ್ಪಿಸಬೇಡಿ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಮೇ 10ರಂದು ವಿಧಾನ ಸಭಾ ಚುನಾವಣೆ ನಡೆಯಲಿದ್ದು, ಈ ಬಾರಿಯ ಚುನಾ ವಣೆಗೆ ಕೆಲವೊಂದು ಕ್ಷೇತ್ರಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮತದಾರರು ತಮ್ಮ ಮತ ಹಾಕಲು ಮಳೆರಾಯ ಅಡ್ಡಿಪಡಿಸುವ ಸಾಧ್ಯತೆ ಇದೆ.
ಮಂಗಳೂರು ನಗರ ಸಹಿತ ವಿವಿಧ ತಾಲೂಕು ಗಳಲ್ಲಿ ಸೋಮವಾರ ರಾತ್ರಿ ವೇಳೆ ಉತ್ತಮ ಮಳೆ ಯಾಗಿತ್ತು. ಮಂಗಳವಾರ ದಿನವಿಡೀ ಸೆಕೆಯಿಂದ ಕೂಡಿದ ವಾತಾವರಣ ಇತ್ತು. ಭಾರತೀಯ ಹವಾ ಮಾನ ಇಲಾಖೆಯು ಮೇ 10 ರಂದು ಕರಾವಳಿ ಯಾದ್ಯಂತ ಎಲ್ಲೋ ಅಲರ್ಟ್ ಘೋಷಿಸಿದೆ. ಸದ್ಯದ ಮಾಹಿತಿಯಂತೆ ಮೇ 10ರಂದು ಜಿಲ್ಲೆಯಾದ್ಯಂತ ಬೆಳಗ್ಗೆಯ ವೇಳೆ ಮೋಡ ಕವಿದ ವಾತಾವರಣ ಇರಲಿದೆ. ಸುಮಾರು 10 ಗಂಟೆಯ ಬಳಿಕ ಬಿಸಿಲಿನ ವಾತಾವರಣ ಏರಲಿದ್ದು, ಬಳಿಕ ಸೆಕೆ ಹೆಚ್ಚಾಗಲಿದೆ. ಸಂಜೆ ವೇಳೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಮತದಾರರು ಸಂಜೆಯವರೆಗೆ ಕಾಯದೆ ಆದಷ್ಟು ಬೇಗ ತಮ್ಮ ಹಕ್ಕು ಚಲಾಯಿಸಬೇಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.