ಒಪಿಡಿ ವಿಭಾಗದ ಶೌಚಾಲಯದಲ್ಲಿ ಅವ್ಯವಸ್ಥಿತ ಫ್ಲಶ್ ಔಟ್;
Team Udayavani, Dec 1, 2018, 11:37 AM IST
ಮಹಾನಗರ: ಬಡವರ ಆರೋಗ್ಯ ಸೇವೆಗಾಗಿ ಇರುವ ಸರಕಾರಿ ಆಸ್ಪತ್ರೆಗಳಲ್ಲಿ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವುದೂ ಮುಖ್ಯ. ಆದರೆ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಹೊರ ರೋಗಿ ವಿಭಾಗದ ಶೌಚಾಲಯ ಇರುವ ಜಾಗಕ್ಕೆ ಹೋದರೆ ಅವ್ಯವಸ್ಥೆಯೇ ಎದ್ದು ಕಾಣುತ್ತಿದೆ.
ಆಸ್ಪತ್ರೆಯ ಒಪಿಡಿ ವಿಭಾಗದ ಶೌಚಾಲಯದಲ್ಲಿ ಸಮಸ್ಯೆ ಇರುವ ಬಗ್ಗೆ ಓದುಗರೊಬ್ಬರು ನೀಡಿದ ದೂರನ್ನಾಧರಿಸಿ ಆಸ್ಪತ್ರೆಗೆ ತೆರಳಿದ ‘ಸುದಿನ’ ತಂಡವು ಸೌಲಭ್ಯಗಳನ್ನು ಪರಿಶೀಲಿಸಿತು. ಈ ವೇಳೆ ಮುರಿದ ಟ್ಯಾಪ್, ಫ್ಲಶ್ ಔಟ್ ಇಲ್ಲದ ಶೌಚಾಲಯ ಕಂಡು ಬಂತು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ತಲಾ ನಾಲ್ಕು ಶೌಚಾಲಯಗಳಿದ್ದು, ಈ ಪೈಕಿ ಎರಡೂ ಕಡೆಯೂ ತಲಾ ಒಂದು ಶೌಚಾಲಯಕ್ಕೆ ಬೀಗ ಹಾಕಿಡಲಾಗಿದೆ. ವೆನ್ಲಾಕ್ ಆಸ್ಪತ್ರೆಯು ರಾಜ್ಯದ ಅತ್ಯುತ್ತಮ ಸರಕಾರಿ ಆಸ್ಪತ್ರೆ ಎಂಬ ಖ್ಯಾತಿ ಗಳಿಸಿದೆ. ಆದರೆ ಸೇವೆಯ ಜತೆಗೆ ಮೂಲ ಸೌಕರ್ಯಗಳೂ ಸರಿಯಾಗಿರಬೇಕು.
ಆದರೆ ಆಸ್ಪತ್ರೆಯ ಒಪಿಡಿ ವಿಭಾಗದ ಶೌಚಾಲಯದಲ್ಲಿ ಸರಿಯಾದ ಸೌಲಭ್ಯವಿಲ್ಲದೆ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ಶೌಚಾಲಯದೊಳಗೆ ಫ್ಲಶ್ ಔಟ್ ಸಿಸ್ಟಮ್ ಜೋಡಿಸಲಾಗಿದೆ. ಆದರೆ ಫ್ಲಶ್ ಔಟ್‌ನ ಪೈಪ್ ತುಂಡಾಗಿದ್ದು, ಕಬ್ಬಿಣದ ರಾಡ್ ಮಾತ್ರ ಉಳಿದುಕೊಂಡಿದೆ. ಅಲ್ಲದೆ, ಪುರುಷರ ಶೌಚಾಲಯದ ಫ್ಲಶ್ ಔಟ್ ಸಿಸ್ಟಮ್‌ನ ಮೇಲ್ಭಾಗ ಸಂಪೂರ್ಣ ತೆರೆದುಕೊಂಡಿದೆ. ಟ್ಯಾಪ್‌ನಲ್ಲಿ ಕೆಲವೊಮ್ಮೆ ನೀರೂ ಅಲಭ್ಯವಾಗುವುದರಿಂದ ಫ್ಲಶ್ ಔಟ್ ಅಗತ್ಯವಾಗಿ ಬೇಕಾಗುತ್ತದೆ. ಆದರೆ ಪೈಪ್ ಸಂಪರ್ಕ ಇಲ್ಲದೆ, ಇದರಲ್ಲಿ ನೀರೇ ಬರುತ್ತಿಲ್ಲ ಎನ್ನುತ್ತಾರೆ ರೋಗಿಗಳ ಜತೆಗೆ ಬಂದ ಸಂಬಂಧಿಕರು.
ತುಂಡಾದ ಬೇಸಿನ್ ಟ್ಯಾಪ್
ಇನ್ನು ಪುರುಷರ ಮತ್ತು ಮಹಿಳೆಯರ ಶೌಚಾಲಯದ ಹೊರಭಾಗದಲ್ಲಿ ರೋಗಿಗಳು ಅಥವಾ ಅವರ ಸಂಬಂಧಿಕರಿಗೆ ಮುಖ, ಕೈ ತೊಳೆಯುವುದಕ್ಕೆ ಬೇಸಿನ್ ಗಳನ್ನು ಹಾಕಲಾಗಿದೆ. ಆದರೆ ವಿಚಿತ್ರವೆಂದರೆ ಮಹಿಳೆಯರ ಹಾಗೂ ಪುರುಷರ ಶೌಚಾಲಯದಲ್ಲಿ ಅಳವಡಿಸಲಾದ ಎಲ್ಲ ಬೇಸಿನ್‌ಗಳ ಟ್ಯಾಪ್ ಮುರಿದಿದ್ದು, ತಿರುಗಿಸುವಾಗ ಅಲ್ಲಾಡುತ್ತಿದೆ. ಅಲ್ಲದೆ, ಈ ಮೂರೂ ಬೇಸಿನ್‌ಗಳಲ್ಲಿ ನೀರು ಬಾರದೇ, ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ರೋಗಿಗಳ ಸಂಬಂಧಿಕರು ಹೇಳುವ ಪ್ರಕಾರ, ಒಮ್ಮೊಮ್ಮೆ ಬೇಸಿನ್ ಟ್ಯಾಪ್‌ನಲ್ಲಿ ನೀರು ಬರುತ್ತದೆ. ಆದರೆ ನೀರು ಅಲಭ್ಯವಾದ ಸಂದರ್ಭದಲ್ಲಿ ಶೌಚಾಲಯದ ಟ್ಯಾಪ್ ನಿಂದ ನೀರು ತುಂಬಿಸಿ ತಂದು ಮುಖ, ಕೈಗಳನ್ನು ಶುಚಿಗೊಳಿಸಬೇಕಾಗುತ್ತದೆ ಎನ್ನುತ್ತಾರೆ.
ಸಚಿವರಿಗೂ ಪತ್ರ ಬರೆಯಲಾಗಿದೆ
ಹಲವಾರು ಸಮಯಗಳಿಂದ ಶೌಚಾಲಯದಲ್ಲಿ ಈ ರೀತಿಯ ಸಮಸ್ಯೆ ಇದೆ. ಈ ಬಗ್ಗೆ ವೆನ್ಲಾಕ್‌ನ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗೆ ಹಾಗೂ ಹಿಂದಿನ ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರಿಗೆ ಪತ್ರ ಮುಖೇನ ತಿಳಿಸಲಾಗಿದೆ. ಆದಾಗ್ಯೂ ಅವ್ಯವಸ್ಥೆ ಮುಂದುವರಿದಿದೆ ಎಂದು ನಗರದ ನಿವಾಸಿ ಜಾಧವ್ ಮುಂಡೋಡು ತಿಳಿಸಿದ್ದಾರೆ.
ಶನಿವಾರವೇ ರಿಪೇರಿ
ಆಸ್ಪತ್ರೆಯಲ್ಲಿ ನೀರಿನ ವ್ಯವಸ್ಥೆ ಸರಿಯಾಗಿದೆ. ಯಾವುದೇ ಸಮಸ್ಯೆ ಇಲ್ಲ. ಟ್ಯಾಪ್ ಮುರಿದು ಹೋಗಿರುವ ಹಿನ್ನೆಲೆಯಲ್ಲಿ ಒಂದು ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಫ್ಲಶ್ ಔಟ್ ಇಲ್ಲದ ಶೌಚಾಲಯಗಳಲ್ಲಿ ತತ್‌ಕ್ಷಣವೇ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ರಿಪೇರಿ ಮಾಡುವವರು ರಜೆಯಲ್ಲಿದ್ದು, ಶನಿವಾರ ಬೆಳಗ್ಗೆ ವೇಳೆಗೆ ಎಲ್ಲವನ್ನು ರಿಪೇರಿ ಮಾಡಿಸಲಾಗುವುದು.
– ಡಾ| ರಾಜೇಶ್ವರಿ ದೇವಿ,
ವೈದ್ಯಕೀಯ ಅಧೀಕ್ಷಕಿ, ವೆನ್ಲಾಕ್‌ಆಸ್ಪತ್ರೆ
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.