ವಾಟ್ಸ್‌ ಆ್ಯಪ್‌ ಮೂಲಕ ಗ್ರಾ.ಪಂ. ಅಧ್ಯಕ್ಷರಿಗೆ ಕಾರ್ಯಕ್ರಮಕ್ಕೆ ಆಹ್ವಾನ


Team Udayavani, Jul 16, 2019, 5:10 AM IST

whats-app

ಮಂಡೆಕೋಲು: ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಸರಕಾರಿ ಶಾಲೆ ಪೇರಾಲು ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿ ಸದೆ ಅವಮಾನಿಸಲಾಗಿದೆ ಎಂದು ಮಂಡೆ ಕೋಲು ಗ್ರಾಮಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಮಂಡೆಕೋಲು ಗ್ರಾ.ಪಂ. ಪ್ರಥಮ ಹಂತದ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ಅವರ ಅಧ್ಯಕ್ಷತೆಯಲ್ಲಿ ಪೇರಾಲು ಶ್ರೀರಾಮ ಭಜನ ಮಂದಿರದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿ ಗಳನ್ನು ಅಹ್ವಾನಿಸದೆ ಅವಗಣಿಸಿದ್ದನ್ನು ಪ್ರಸ್ತಾವಿಸಿದ ಜಯರಾಜ್‌ ಕುಕ್ಕೇಟಿ, ಗ್ರಾ.ಪಂ. ಅಧ್ಯಕ್ಷರು ಗ್ರಾಮದ ಪ್ರಥಮ ಪ್ರಜೆ. ಅವರಿಗೆ ವಾಟ್ಸ್‌ ಆ್ಯಪ್‌ ಮೂಲಕ ಸಂಬಂಧಪಟ್ಟವರು ಕಾರ್ಯಕ್ರಮಕ್ಕೆ ಅಹ್ವಾನಿಸಿ¨ªಾರೆ. ಇದು ಶಿಷ್ಟಾಚಾರದ ಉಲ್ಲಂಘನೆ, ಉಳಿದ ಗ್ರಾ.ಪಂ. ಸದಸ್ಯರಿಗೆ ಆಹ್ವಾನವೇ ಇಲ್ಲ. ಇದಕ್ಕೆ ಸಂಬಂಧಪಟ್ಟವರು ಉತ್ತರಿಸಬೇಕೆಂದು ಪಟ್ಟುಹಿಡಿದರು. ಪದ್ಮನಾಭ ಚೌಟಾಜೆ ಅವರೊಂದಿಗೆ ಧ್ವನಿಗೂಡಿಸಿದರು.

ಶಾಲೆಯ ಮುಖ್ಯೋಪಾದ್ಯಾಯರು ಗೈರಾಗಿದ್ದರಿಂದ ಎಸ್‌ಡಿಎಂಸಿ ಅಧ್ಯಕ್ಷ ನವೀನ್‌ ಉತ್ತರಿಸಿ, ನಾನು ಮುಖ್ಯೋಪಾಧ್ಯಾಯರಲ್ಲಿ ಹೇಳಿದ್ದೇನೆ. ಅದಕ್ಕೆ ಇಲಾಖೆಯವರೇ ಕಾರ್ಯಕ್ರಮ ಮಾಡಿದ್ದು ನನಗೆ ಸಂಬಂಧಪಟ್ಟ ವಿಷಯವಲ್ಲ ಎಂದಿ¨ªಾರೆ ಎಂದು ಹೇಳಿದರು. ಸಭೆಯಲ್ಲಿ ಉಪಸ್ಥಿತರಿದ್ದ ಶಿಕ್ಷಕರೊಬ್ಬರು ನನಗೆ ವಿಷಯವೇ ಗೊತ್ತಿಲ್ಲ ಎಂದಿದ್ದು ನಗೆಪಾಟಲಿಗೀಡಾಯಿತು. ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದು ಕಾರಣ ಕೇಳಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸ್ಪಂದಿಸದ ಲೈನ್‌ಮನ್‌
ಜಾಲೂÕರು-ಅಡಾRರು ಅಂಬ್ರೋಟಿ ಭಾಗದಲ್ಲಿ ಲೈನ್‌ಮನ್‌ಗಳು ಎಷ್ಟು ಜನರಿ¨ªಾರೆ? ಲೈನಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡು ಅವರ ಗಮನಕ್ಕೆ ತಂದರೆ ಸ್ಪಂದನೆ ಇಲ್ಲ. ಫೋನ್‌ ರಿಸೀವ್‌ ಮಾಡುತ್ತಿಲ್ಲ ಯಾಕೆ? ಎಂದು ಜಯರಾಜ್‌ ಕುಕ್ಕೇಟಿ ಪ್ರಶ್ನಿಸಿದರು. ಉತ್ತರಿಸಿದ ಜೆಇ ಜಯಪ್ರಕಾಶ್‌ ಈ ಬಗ್ಗೆ ಪರಿಶೀಲಿಸುವೆ. ಅವರಿಗೆ ಹೇಳುತ್ತೇನೆ ಎಂದರು.

ನೆಟ್‌ವರ್ಕ್‌ ಸಮಸ್ಯೆ ಬಗೆಹರಿಸಿ
ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ಪ್ರಧಾನ ಮಂತ್ರಿ ಕಾರ್ಯಾಲಯಕ್ಕೂ ಪತ್ರ ಬರೆಯಲಾಗಿದೆ. ಖಾಸಗಿ ಸಂಸ್ಥೆ ಸಿಮ್‌ಗಳಾದರೂ ಆಗಬಹುದು ನೆಟ್‌ವರ್ಕ್‌ ಸಿಗುವಂತೆ ಮಾಡಿ. ಪಂಚಾಯತ್‌ ಇದರ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ತಡೆಗೋಡೆ ನಿರ್ಮಾಣ ಎನಾಯಿತು?
ಕಲ್ಲಪ್ಪಣೆ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣದ ಕುರಿತು ಕಳೆದ ಗ್ರಾಮಸಭೆಯಲ್ಲಿ ಪ್ರಸ್ತಾವಿಸಲಾಗಿತ್ತು. ಏನಾಯಿತು ಎಂದು ನಾರಾಯಣ ಆಳಂಕಲ್ಯ ಪ್ರಶ್ನಿಸಿದರು. ಉತ್ತರಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಸರಕಾರ ದಿಂದ ಅನುದಾನ ಬಂದಿದೆ. ಶೀಘ್ರ ವಾಗಿ ಮಾಡಿಕೊಡಲಾಗುವುದು ಎಂದರು.

ಉದ್ದನಡ್ಕ ರಸ್ತೆ ಕಾಂಕ್ರೀಟ್‌ ಮಾಡಿ
ಉದ್ದನಡ್ಕ ರಸ್ತೆ ಸರಿಯಿಲ್ಲ. ಮಕ್ಕಳು ಬೈಕಲ್ಲಿ ಹೋಗುವಾಗ ಬೀಳುತ್ತಾರೆ. ಈ ರಸ್ತೆಗೆ ಕಾಂಕ್ರೀಟ್‌ ಹಾಕಿ ಎಂದು ವೆಂಕಟರಮಣ ಕಣಜಾಲು ಹೇಳಿದರು. ಉತ್ತರಿಸಿದ ಗ್ರಾ.ಪಂ. ಸದಸ್ಯ ಚಂದ್ರಶೇಖರ್‌ ಆಲಂಕಲ್ಯ, ಮಳೆಗಾಲ ಕಳೆದ ಮೇಲೆ ಡಾಮರು ಹಾಕಲಾಗುವುದು ಎಂದರು.

ಸಾರ್ವಜನಿಕ ಶೌಚಾಲಯವಿಲ್ಲ
ಪೇರಾಲು ಭಾಗದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ಒಂದು ಶೌಚಾಲಯ ಆಗಬೇಕು ಎಂದು ನಾರಾಯಣ ಆಲಂಕಲ್ಯ ಆಗ್ರಹಿಸಿದರು. ಉತ್ತರಿಸಿದ ಗ್ರಾ.ಪಂ. ಸದಸ್ಯ ಚಂದ್ರಶೇಖರ್‌ ಆಳಂಕಲ್ಯ ಶೌಚಾಲಯ ಕ್ಲೀನ್‌ ಮಾಡಲು ಜನ ಸಿಗುವುದಿಲ್ಲ ಎಂದರು.

ಕುಡಿಯಲು ನೀರಿಲ್ಲ
ಐತಪ್ಪ ಜೇಡಿಗುಂಡಿ ಕುಟುಂಬಕ್ಕೆ ಕುಡಿಯಲು ನೀರಿಲ್ಲ. ಆದಷ್ಟು ಬೇಗ ಇದಕ್ಕೊಂದು ವ್ಯವಸ್ಥೆ ಮಾಡಬೇಕು ಎಂದು ಮಾಧವ ಅವರು ಆಗ್ರಹಿಸಿದರು. ಉತ್ತರಿಸಿದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಾವಿ ತೋಡಿಕೊಳ್ಳಿ ಎಂದರು. ಹತ್ತು ಲೆಂತ್‌ ಪೈಪ್‌ ಇದ್ರೆ ಮಾಡಬಹುದು ಎಂದು ಮಾಧವ ಹೇಳಿದರು. ಗ್ರಾ.ಪಂ. ಸದಸ್ಯ ಸುಂದರ ಉತ್ತರಿಸಿ ಕುಂಟಿಕಾನ ಜೇಡಿಗುಂಡಿ ಭಾಗಕ್ಕೆ ಪೈಪ್‌ಲೈನ್‌ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದರು.

ಆನೆ ಹಾವಳಿ ತಡೆ: ಸಭೆ
ಮಂಡೆಕೋಲು ಭಾಗದಲ್ಲಿ ಆನೆ ಹಾವಳಿಯಿಂದ ಕೃಷಿಕರಿಗೆ ತೊಂದರೆಯಾಗುತ್ತಿದೆ. ಕೃಷಿ ಬೆಳೆಗಳನ್ನು ಆನೆಗಳು ದಾಳಿ ನಡೆಸಿ ಹಾಳು ಮಾಡುತ್ತಿವೆ. ಕಲ್ಲಡ್ಕ, ಅಕ್ಕಪ್ಪಾಡಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಇದರ ಹಾವಳಿ ವಿಪರೀತವಿದೆ. ಇದಕ್ಕೆ ಇಲಾಖೆಯವರು ಏನು ಕ್ರಮ ಕೈಗೊಳ್ಳುತ್ತೀರಿ? ಎಂದು ಉದಯ ಕುಮಾರ್‌ ಆಚಾರ್‌ ಪ್ರಶ್ನಿಸಿದರು. ಉತ್ತರಿಸಿದ ಅರಣ್ಯಾಧಿಕಾರಿ ಆನೆಕಂದಕ, ತಡಬೇಲಿಗಳನ್ನು ಮಾಡಿದ್ದರೂ ಆನೆಗಳು ಬರುತ್ತಿವೆ. ಆನೆಗಳ ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ ಮಂಗಳೂರಿನಲ್ಲಿ ಕಾಸರಗೋಡು ಮತ್ತು ದ.ಕ. ಜಿÇÉಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

ದೇಲಂಪಾಡಿಯಲ್ಲಿಯೂ ಸಭೆ ನಡೆದಿದೆ. ಇನ್ನು ಮುಂದೆ ಮಂಡೆಕೋಲಿನಲ್ಲಿ ಸಭೆ ನಡೆಸಿ ಜನರ ಅಭಿಪ್ರಾಯ ಸಂಗ್ರಸಲಿದ್ದೇವೆ. ಸಭೆಗೆ ಗ್ರಾಮಸ್ಥರು ಬಂದು ಸಲಹೆ ನೀಡಬೇಕೆಂದು ಹೇಳಿದರು.

ಪಂ. ಎಂಜಿನಿಯರಿಂಗ್‌ ಉಪ ವಿಭಾಗ ಸುಳ್ಯ ಇಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರ ಹನುಮಂತರಾಯಪ್ಪ ಜಿ. ನೋಡಲ್‌ ಅಧಿಕಾರಿಯಾಗಿದ್ದರು. ಜಯಪ್ರಕಾಶ್‌ ಜೆ.ಇ. ಜಾಲೂÕರು, ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ಗ್ರಾ.ಪಂ. ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಪ್ರಕಾಶ್‌, ಪಿಡಿಒ ಗ್ರಾಮ ಮಟ್ಟದ ಅಧಿಕಾರಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ಆಯುಷ್ಮಾನ್‌ ಭಾರತ್‌
ಅಯುಷ್ಮಾನ್‌ ಭಾರತ್‌ ಬಗ್ಗೆ ಮಾಹಿತಿ ನೀಡಿ ಎಂದು ರಾಮಕೃಷ್ಣ ರೈ ಪೇರಾಲು ವಿನಂತಿಸಿದರು. ಉತ್ತರಿಸಿದ ಅಧಿಕಾರಿ ಪ್ರಮೀಳಾ ಟಿ., ದಿನದಲ್ಲಿ ಐವತ್ತು ಟೋಕನ್‌ ಕೊಡುತ್ತೇವೆ. ಕುಟುಂಬದ ಒಬ್ಬ ಸದಸ್ಯ ಟೋಕನ್‌ ಪಡೆಯಲು ಬಂದರೆ ಸಾಕು. ಕಾರ್ಡ್‌ ಮಾಡಿಸುವಾಗ ಕುಟುಂಬ ಸಮೇತ ಬರಬೇಕಾಗುತ್ತದೆ. ಆಧಾರ್‌ ಕಾರ್ಡ್‌ ಹಾಗೂ ಪಡಿತರ ಚೀಟಿ ಇರಬೇಕು. ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ಇಲ್ಲದಿದ್ದರೆ ಮಾತ್ರ ಬೇರೆ ಕಡೆಗೆ ವರ್ಗಾಯಿಸಲಾಗುವುದು ಎಂದರು.

ಕ್ಷಯ ರೋಗ ಪತ್ತೆ ಆಂದೋಲನ
ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ. ಮಾತನಾಡಿ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು. ಈ ತಿಂಗಳು ಜುಲೈ 15ರಿಂದ 27ರ ವರೆಗೆ ಕ್ಷಯ ರೋಗ ಪತ್ತೆ ಆಂದೋಲನ ನಡೆಯಲಿದೆ. ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಕಫ‌ದ ಮಾದರಿ ಪರಿಶೀಲಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿ¨ªಾರೆ ಎಂದರು.

ಸಂಚಾರಿ ಆರೋಗ್ಯ ಘಟಕ: ಅಭಿನಂದನೆ
ಮಂಡೆಕೋಲಿನಲ್ಲಿ ಸಂಚಾರಿ ಆರೋಗ್ಯ ಘಟಕ ಆರಂಭಿಸಿರುವುದಕ್ಕೆ ಆರೋಗ್ಯ ಇಲಾಖೆಗೆ ಸಭೆಯಲ್ಲಿ ಅಭಿನಂದಿಸಲಾಯಿತು. ರಾಮಕೃಷ್ಣ ರೈ ಪೇರಾಲು ಮಾತನಾಡಿ, ಹಿಂದಿನ ಗ್ರಾಮ ಸಭೆಯಲ್ಲಿ ಮಂಡೆಕೋಲು ಗ್ರಾಮಕ್ಕೆ ಸಂಚಾರಿ ಆರೋಗ್ಯ ಘಟಕ ಆರಂಭಿಸಬೇಕೆಂದು ಮನವಿ ಮಾಡಿದ್ದೆವು. ಶೀಘ್ರವಾಗಿ ಪ್ರಾರಂಭಿಸಿದ್ದೀರಿ ಅಭಿನಂದನೆಗಳು ಎಂದು ಹೇಳಿದರು.

ಟಾಪ್ ನ್ಯೂಸ್

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ

CM-teach

Suvarna Soudha: ಅನುಭವ ಮಂಟಪದ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ

ಏಲಕ್ಕಿ ನಾಡಿಗಿಂತ ಸಕ್ಕರೆ ನಾಡು ಸಮ್ಮೇಳನ ಭಿನ್ನ: ಡಾ| ಮಹೇಶ್‌ ಜೋಶಿ

ಏಲಕ್ಕಿ ನಾಡಿಗಿಂತ ಸಕ್ಕರೆ ನಾಡು ಸಮ್ಮೇಳನ ಭಿನ್ನ: ಡಾ| ಮಹೇಶ್‌ ಜೋಶಿ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

High-Court

Punjalakatte: ಜೀವನಾಂಶ ರದ್ದುಗೊಳಿಸಿದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-teach

Suvarna Soudha: ಅನುಭವ ಮಂಟಪದ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ

High-Court

Punjalakatte: ಜೀವನಾಂಶ ರದ್ದುಗೊಳಿಸಿದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

Bus-Steering

Uppinangady: ಮದ್ಯ ಸೇವಿಸಿ ಯದ್ವಾತದ್ವ ಬಸ್‌ ಚಲಾಯಿಸಿದ ಚಾಲಕ!

Bus-problem

Service Variation: ಸರಕಾರಿ ಬಸ್‌ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ

Suside-Boy

Belthangady: ಕಾರು-ದ್ವಿಚಕ್ರ ವಾಹನ ಅಪಘಾತ: ಗಾಯಾಳಾಗಿದ್ದ ವ್ಯಕ್ತಿ ಸಾವು

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ

CM-teach

Suvarna Soudha: ಅನುಭವ ಮಂಟಪದ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ

ಏಲಕ್ಕಿ ನಾಡಿಗಿಂತ ಸಕ್ಕರೆ ನಾಡು ಸಮ್ಮೇಳನ ಭಿನ್ನ: ಡಾ| ಮಹೇಶ್‌ ಜೋಶಿ

ಏಲಕ್ಕಿ ನಾಡಿಗಿಂತ ಸಕ್ಕರೆ ನಾಡು ಸಮ್ಮೇಳನ ಭಿನ್ನ: ಡಾ| ಮಹೇಶ್‌ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.