ಬದುಕು ಇನ್ನೊಬ್ಬರಿಗೆ ಪ್ರೇರಣೆಯಾದಾಗ ಸಾರ್ಥಕ್ಯ: ಎ. ಸದಾನಂದ ಶೆಟ್ಟಿ
Team Udayavani, Jul 14, 2019, 5:08 AM IST
ಮಹಾನಗರ: ಮನುಷ್ಯನ ಸಾಧನೆ, ಕೊಡುಗೆಗಳು ಇನ್ನೊಬ್ಬರ ಬದುಕಿನ ಉನ್ನತಿಗೆ ಪೂರಕವಾದರೆ ಜೀವನ ಸಾರ್ಥಕ್ಯವನ್ನು ಪಡೆಯುತ್ತದೆ ಎಂದು ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಹೇಳಿದರು.
ಟ್ರಸ್ಟ್‌ನ ವತಿಯಿಂದ ಆಯೋಜಿಸಿದ್ದ ಮಾಜಿ ಮೇಯರ್ ಕುಳಾಯಿ ದೇವಣ್ಣ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿಯ ಬದುಕನ್ನು ಅಳವಡಿಸಿಕೊಂಡಿದ್ದ ದೇವಣ್ಣ ಶೆಟ್ಟಿ ಅವರು ಮೇಯರ್ ಆಗಿ, ಗ್ರಾ.ಪಂ. ಅಧ್ಯಕ್ಷರಾಗಿ ಮಾಡಿರುವ ಜನಪರ ಕೆಲಸ ಜನಮನದಲ್ಲಿ ಇಂದು ಶಾಶ್ವತವಾಗಿ ಉಳಿದಿದೆ ಎಂದರು.
ಮಿನದನ ಅಂತಿಮ ಸಿದ್ಧತೆ
ಜು. 14ರಂದು ಪಡು ಚಿತ್ತರಂಜನ್ ರೈ ನೇತೃತ್ವದಲ್ಲಿ ಪಡು ಬೊಂಡಂತಿಲದಲ್ಲಿ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಮರಿಯಲದ ಮಿನದನ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ಆಯೋಜಿಸಲಾಗುವ ವಿವಿಧ ಕಾರ್ಯಕ್ರಮಗಳ ಅಂತಿಮ ಸಿದ್ಧತೆ ಬಗ್ಗೆ ಚರ್ಚಿಸಲಾಯಿತು.
ಕದ್ರಿ ನವನೀತ ಶೆಟ್ಟಿ, ಕಮಲಾಕ್ಷ ಶೆಟ್ಟಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಸಿತಾರಾಮ ಶೆಟ್ಟಿ, ಆನಂದ ಶೆಟ್ಟಿ, ರೂಪಶ್ರೀ ಶೆಟ್ಟಿ, ಸೌಮ್ಯಾ ಶೆಟ್ಟಿ, ಸುನೀತಾ ಶೆಟ್ಟಿ, ವತ್ಸಲಾ ಮಲ್ಲಿ, ಆರತಿ ಆಳ್ವ, ಶಿವರಾಮ ಶೆಟ್ಟಿ, ರಾಕೇಶ್ ಪೂಂಜ, ಸುನೀಲ್ ಶೆಟ್ಟಿ, ರಾಮಚಂದ್ರ ಆಳ್ವ, ಹರೀಶ್ ಶೆಟ್ಟಿ, ದೇವಿಪ್ರಸಾದ್ ಅಜಿಲ, ನಾಗೇಶ್ ಶೆಟ್ಟಿ, ಜೀತೇಂದ್ರ ಶೆಟ್ಟಿ, ಎಂ.ಸಿ. ಶೆಟ್ಟಿ, ಪ್ರಸಾದ್ ರೈ ಕಲ್ಲಿಮಾರ್, ಶ್ರೀನಾಥ್ ರೈ, ರತನ್ ಶೆಟ್ಟಿ, ನಿತಿಶ್ ಎಕ್ಕಾರ್, ಸತ್ಯ ಪ್ರಕಾಶ್ ಶೆಟ್ಟಿ, ಮೂಲ್ಕಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. ಸಂಘಟನ ಕಾರ್ಯದರ್ಶಿ ರಾಜ ಗೋಪಾಲ ರೈ ಅವರು ಸ್ವಾಗತಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯ ಲಕ್ಷ್ಮೀ ಬಿ. ಶೆಟ್ಟಿ ಅವರು ವಂದಿಸಿದರು. ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ ಅವರು ಕಾರ್ಯ ಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.