ಊರೂರು ಅಲೆಯುತ್ತಿದ್ದ ಮಹಿಳೆ ಮತ್ತೆ ಮನೆ ಸೇರಿದಾಗ !
10 ವರ್ಷಗಳ ಬಳಿಕ ಮರುಕಳಿಸಿತು ನೆನಪು!
Team Udayavani, Jul 29, 2019, 12:36 PM IST
ಮಂಗಳೂರು,: ಮಾನಸಿಕ ಸ್ಥಿಮಿತ ಕಳೆದು ಕೊಂಡು ಕಳೆದ 10 ವರ್ಷಗಳಿಂದ ನಗರದ ಆಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದ ಆಂಧ್ರಪ್ರದೇಶದ ಮಹಿಳೆಗೆ ಇದ್ದಕ್ಕಿದ್ದಂತೆ ತನ್ನ ಕುಟುಂಬದವರ ನೆನಪಾಗಿದೆ. ಆ ಮೂಲಕ ಸತ್ತೇ ಹೋಗಿದ್ದಾಳೆ ಅಂದುಕೊಂಡಿದ್ದ ಕುಟುಂಬಸ್ಥರಿಗೆ ಆಕೆಯನ್ನು ಮರಳಿ ಪಡೆಯುವ ಭಾಗ್ಯ ಲಭಿಸಿದೆ.
2009ರ ಜನವರಿ 10ರಂದು ರೈಲು ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಆಕೆಯನ್ನು ಪಾಂಡೇಶ್ವರ ಪೊಲೀಸರು ಮರೋಳಿ ಬಳಿಯ ವೈಟ್ ಡೌಸ್ ಮನೋರೋಗ ಚಿಕಿತ್ಸಾಲಯ ಮತ್ತು ನಿರ್ಗತಿಕರ ಆಶ್ರಮಕ್ಕೆ ಸೇರಿಸಿದರು. ಆಗ ಆಕೆ ತನ್ನ ಬಗ್ಗೆ ಯಾವುದೇ ಮಾಹಿತಿ ನೀಡಲು ಅಸಮರ್ಥಳಾಗಿದ್ದಳು. 10 ವರ್ಷಗಳ ವರೆಗೂ ಆಕೆಯ ವೈಯಕ್ತಿಕ ಮಾಹಿತಿ ಕಲೆಹಾಕಲು ಸಾಧ್ಯವಾಗಿರಲಿಲ್ಲ. ತಿಂಗಳ ಹಿಂದೆ ಆಶ್ರಮದಲ್ಲಿದ್ದ ನಿರ್ಗತಿಕರಲ್ಲಿ ಕೆಲವರು ತಮ್ಮ ಮನೆಗೆ ಮರಳುವಾಗ ಇದ್ದಕ್ಕಿದ್ದಂತೆ ಈ ಮಹಿಳೆಗೂ ತನ್ನ ಮನೆಯ ನೆನಪಾಗಿದೆ. ತನ್ನ ಹೆಸರು ಶಿವಲೀಲಾ, ಊರು ಆಂಧ್ರ ಪ್ರದೇಶದ ಮರಿಪಾಲ್ ಎಂದು ಹೇಳಿದ್ದಾಳೆ.
ಇದನ್ನೇ ಆಧರಿಸಿ ಆಶ್ರಮದ ಸ್ಥಾಪಕಿ ಕೊರಿನ್ ರಸ್ಕೀನ್ಹ ಮತ್ತು ಮ್ಯಾನೇಜರ್ ಜರಾಲ್ಡ್ ಫೆರ್ನಾಂಡಿಸ್ ಆಂಧ್ರದ ನಾಗೂಲಂಕಾ ಪೊಲೀಸರಿಗೆ ಮಾಹಿತಿ ನೀಡಿದರು. ಅವರು ಶಿವಲೀಲಾಳ ಕುಟುಂಬಿಕರನ್ನು ಸಂಪರ್ಕಿಸಿ ಅಕೆ ಮಂಗಳೂರಿನಲ್ಲಿರುವ ವಿಷಯ ತಿಳಿಸಿದರು. ಕುಟುಂಬಿಕರು ಮಂಗಳೂರಿಗೆ ಬಂದು ರವಿವಾರ ಆಕೆಯೊಂದಿಗೆ ಮರಳಿದ್ದಾರೆ.
ಕುಟುಂಬದವರನ್ನು ನೋಡಬೇಕು ನೆನಪು ಮರುಕಳಿಸಿದ ಬಳಿಕ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಶಿವಲೀಲಾ, “ವೈಟ್‌ಡೌಸ್’ ಸಿಬಂದಿ ಚೆನ್ನಾಗಿ ಉಪಚರಿಸಿದ್ದಾರೆ. ಇತ್ತೀಚೆಗೆ ನನ್ನ ನೆನಪುಗಳು ಮರುಕಳಿಸಿವೆ. ನಾನು ಏಳನೇ ತರಗತಿ ಕಲಿತಿದ್ದು, ತಂಗಿ ಇದ್ದಾಳೆ. ತಂದೆ ಚಾಲಕ, ತಾಯಿ ಕೂಲಿ ಮಾಡುತ್ತಿದ್ದು ನಮ್ಮದು ಬಡ ಕುಟುಂಬ. ನಾನು ಅಪ್ಪ-ಅಮ್ಮ ಇರುವಲ್ಲಿಗೆ ಹೋಗಬೇಕು’ ಎಂದಿದ್ದರು.
ಶಿವಲೀಲಾ ಅವರ ಕುಟುಂಬಸ್ಥರನ್ನು ಮಾತನಾಡಿಸಿದಾಗ “ಆಕೆಯ ತಂದೆ-ತಾಯಿ ಕಾಯಿಲೆಯಿಂದಾಗಿ 10 ವರ್ಷ ಹಿಂದೆಯೇ ನಿಧನ ಹೊಂದಿದ್ದಾರೆ. ಬಳಿಕ ಅಕೆ ಮಾನಸಿಕ ಅಸ್ವಸ್ಥೆಯಾಗಿದ್ದಳು. ಅದೇ ಕಾರಣಕ್ಕೆ ಯಾರ ಬಳಿಯೂ ಹೇಳದೆ ಮಂಗಳೂರು ರೈಲು ಹತ್ತಿರಬಹುದು’ ಎಂದಿದ್ದಾರೆ.
ಶಿವಲೀಲಾ “ಕುಸುಮಾ’ ಆದ ಕತೆ
ಶಿವಲೀಲಾ ವೈಟ್‌ಡೌಸ್ ಆಶ್ರಮಕ್ಕೆ ದಾಖಲಾದ ಕೆಲವು ದಿನಗಳ ಬಳಿಕ ಹೆಸರೇನೆಂದು ಕೇಳಿದರೆ ತೆಲುಗಿನಲ್ಲಿ ಅಸ್ಪಷ್ಟವಾಗಿ ಹೇಳುತ್ತಿದ್ದಳು. ಅಂದಾಜಿನಂತೆ “ಕುಸುಮಾ’ ಎಂದು ಹೆಸರಿಟ್ಟಿದ್ದರು. ಆಶ್ರಮವಾಸಿಗಳು, ಉಸ್ತುವಾರಿ ನೋಡಿಕೊಳ್ಳುತ್ತಿದ್ದವರಿಗೆ ಈಗ ನಿಜ ನಾಮಧೇಯ ಗೊತ್ತಾದರೂ ಕುಸುಮಾ ಎಂದೇ ಕರೆಯುತ್ತಿದ್ದಾರೆ!
“ಕುಸುಮಾ’ ವೈಟ್‌ಡೌಸ್ ಸೇರಿದ ಬಳಿಕ ಮನೋರೋಗದ ಚಿಕಿತ್ಸೆ ನೀಡಲಾಗಿದೆ. ಇತ್ತೀಚಿನ ವರೆಗೂ ವಿಶೇಷ ಚೇತರಿಕೆ ಇರಲಿಲ್ಲ. ತನ್ನ ಪಾಡಿಗೆ ಇರುತ್ತಿದ್ದಳು. ಕೆಲವು ದಿನಗಳಿಂದೀಚೆಗೆ ಎಲ್ಲರೊಡನೆ ಬೆರೆಯುತ್ತಿದ್ದಳು. ಸ್ವತ್ಛತೆ, ಅಡುಗೆ ಕೆಲಸದಲ್ಲೂ ಸಹಾಯ ಮಾಡುತ್ತಿದ್ದಳು ಎನ್ನುತ್ತಾರೆ ಆಶ್ರಮದ ಅಧಿಕಾರಿಗಳು.
ಕುಟುಂಬದವರನ್ನು ನೋಡಿ ಅಚ್ಚರಿ
ಶಿವಲೀಲಾ ರವಿವಾರ ಬೆಳಗ್ಗೆ ತಾಯ್ನಾಡಾದ ಆಂಧ್ರದ ನಗೋಲಂಕಾಕ್ಕೆ ತೆರಳಿದ್ದಾರೆ. ಶನಿವಾರ ರಾತ್ರಿಯೇ ಸಂಬಂಧಿಕರು ವೈಟ್‌ಡೌಸ್‌ಗೆ
ಬಂದಿದ್ದರೂ ಬೆಳಗ್ಗಿನ ವರೆಗೆ ಶಿವಲೀಲಾಗೆ ತಿಳಿದಿರಲಿಲ್ಲ. ಬೆಳಗ್ಗೆ ಕುಟುಂಬದವರನ್ನು ನೋಡಿ ಆಕೆಗಾದ ಸಂತಸಕ್ಕೆ ಪಾರವೇ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇವೆಯಲ್ಲಿ ತೃಪ್ತಿ
ಮಾನಸಿಕ ಅಸ್ವಸ್ಥ ಅನಾಥರನ್ನು ಉಪಚರಿಸಿ, ಗುಣಮುಖರಾದ ಬಳಿಕ ಕುಟುಂಬದವರೊಂದಿಗೆ ಸೇರಿಸುವಾಗ ಮಾಡಿದ ಸೇವೆಗೆ ತೃಪ್ತಿ ಸಿಗುತ್ತದೆ. ಈಗಾಗಲೇ ಆಶ್ರಮದಲ್ಲಿದ್ದ ಅನೇಕ ಮಂದಿ ಗುಣಮುಖರಾಗಿ ಕುಟುಂಬ ಸೇರಿದ್ದಾರೆ.
– ಕೊರಿನ್ ರಸ್ಕೀನ್ಹ , ವೈಟ್‌ಡೌಸ್ ಸ್ಥಾಪಕಿ
ವರ್ಷಗಟ್ಟಲೆ ಸ್ಮರಣ ಶಕ್ತಿ ಇಲ್ಲದೇ ಬಳಿಕ ಮರುಕಳಿಸುವ ಸಾಧ್ಯತೆಗಳಿವೆ. ಈ ಪ್ರಕರಣದಲ್ಲೂ ಅದೇ ರೀತಿ ಆಗಿದೆ. ಆಶ್ರಮದ ಸಹವಾಸಿಗಳು ತಮ್ಮ ಮನೆಯವರೊಂದಿಗೆ ತೆರಳುವಾಗ “ಕುಸುಮಾ’ಳಿಗೂ ತನ್ನ ಮನೆಯ ನೆನಪು ಮರುಕಳಿಸಿದೆ.
– ರವೀಶ್ ತುಂಗಾ, ಮನಃಶಾಸ್ತ್ರಜ್ಞ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Relationships: ಸಂಬಂಧಗಳಲ್ಲಿ ಮಾಯವಾದ ಸಹಿಷ್ಣುತೆ : ಸಹಿಷ್ಣು ಗುಣದಿಂದಲೇ ಬಾಂಧವ್ಯದ ಪ್ರಗತಿ
Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ
Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು
Udupi: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಹಗುರವಾಗಿ ಪರಿಗಣಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಪತ್ನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.