ಜಿಲ್ಲೆಯ 2ನೇ ಅತಿ ದೊಡ್ಡ ಮಹಿಳಾ ಕಾಲೇಜಿನ ಸ್ವಂತ ಕಟ್ಟಡಕ್ಕೆ ವಿಘ್ನ?

 ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ 717 ವಿದ್ಯಾರ್ಥಿಗಳು

Team Udayavani, Oct 13, 2019, 5:17 AM IST

e-25

ಪುತ್ತೂರು: ಜಿಲ್ಲೆಯ ಎರಡನೇ ಸ.ಪ್ರ.ದ. ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆಯಿರುವ ಮತ್ತು ಬರೋಬ್ಬರಿ 717 ವಿದ್ಯಾರ್ಥಿಗಳನ್ನು ಹೊಂದಿರುವ ಪುತ್ತೂರು ಸ.ಪ್ರ.ದ. ಮಹಿಳಾ ಕಾಲೇಜಿಗೆ ಪ್ರಥಮ ಮೂಲ ಸೌಕರ್ಯವೆನಿಸಿರುವ ಸಮರ್ಪಕ ಕಟ್ಟಡ ಭಾಗ್ಯ ಇನ್ನೂ ಸಿಕ್ಕಿಲ್ಲ!

2014ರ ಜುಲೈ ತಿಂಗಳಲ್ಲಿ ಆರಂಭಗೊಂಡ ಕಾಲೇಜು ಪುತ್ತೂರು ನಗರದ ಹಲವು ಖಾಲಿ ಕಟ್ಟಡಗಳಿಗೆ ಸುತ್ತಿ ಕೆಲವು ವರ್ಷಗಳಿಂದ ಹಳೆಯ ಜೈಲಿನ ಕಟ್ಟಡ ಹಾಗೂ ಹಳೆಯ ತಾಲೂಕು ಕಚೇರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕಟ್ಟಡಗಳಲ್ಲಿ ಅನುಕೂಲತೆಗಳಿಲ್ಲದೆ ಉತ್ತಮ ಶಿಕ್ಷಣ ಪಡೆದು ಭವಿಷ್ಯದ ಸಂಪನ್ಮೂಲಗಳಾಗಿ ಬೆಳೆಯುವ ಮಕ್ಕಳು ಇಲ್ಲಿ ನರಕಸದೃಶರಾಗಿ ಪಾಠ ಕೇಳುವ ಸ್ಥಿತಿ ಇದೆ.

ಜಾಗ, ಅನುದಾನ ಸಿಕ್ಕಿತು
ಮಹಿಳಾ ಕಾಲೇಜು ಕಟ್ಟಡಕ್ಕೆ ಸ್ವಂತ ಕಟ್ಟಡ ಆಗಬೇಕೆನ್ನುವ ಉದ್ದೇಶದಿಂದ ನಡೆಸಿದ ಪ್ರಯತ್ನದ ಫಲವಾಗಿ ನಗರದಿಂದ ಬೊಳುವಾರು – ಉಪ್ಪಿನಂಗಡಿ ರಸ್ತೆಯ ಬನ್ನೂರು ಆನೆಮಜಲಿನಲ್ಲಿ 4.70 ಎಕ್ರೆ ಜಮೀನು ಸಿಕ್ಕಿದೆ. ಅದರ ಖಾತೆ ಬದಲಾವಣೆ ನಡೆದು ಇಲಾಖೆಯ ಆಯುಕ್ತರ ಹೆಸರಿಗೆ ಪಹಣಿಯೂ ಆಗಿದೆ. ಜತೆಗೆ ಸೌಕರ್ಯಗಳಿಗಾಗಿ ಸರಕಾರಕ್ಕೆ 8 ಕೊಟಿ ರೂ. ಪ್ರಸ್ತಾವನೆ ಸಲ್ಲಿಸಿ, ಅದರಲ್ಲಿ ಸದ್ಯಕ್ಕೆ 4.30 ಕೋಟಿ ರೂ. ಅನುದಾನ ಮಂಜೂರಾತಿಯೂ ಆಗಿದೆ. ಅದರಲ್ಲಿ 25 ಕೊಠಡಿಗಳು, ಪ್ರಾಂಶುಪಾಲರ ಕೊಠಡಿ, ಉಪನ್ಯಾಸಕರ ಕೊಠಡಿ, ವಿಶ್ರಾಂತಿ ಕೊಠಡಿ, ಗ್ರಂಥಾಲಯ, ಶೌಚಾಲಯ, 200 ಮೀ. ಆಟದ ಮೈದಾನ ನಿರ್ಮಾಣದ ಉದ್ದೇಶ ಇಟ್ಟುಕೊಳ್ಳಲಾಗಿದೆ. ಕಟ್ಟಡ ನಿರ್ಮಾಣದ ರೇಖಾ ನಕ್ಷೆಗೆ ಅನುಮೋದನೆಯೂ ಸಿಕ್ಕಿದೆ.

ಮತ್ತೇನು ಸಮಸ್ಯೆ?
ಇಲಾಖೆಯ ಹೆಸರಿಗೆ ಜಾಗದ ಪಹಣಿ ಆಗಿದ್ದರೂ ಆ ಜಾಗದ ಕುಮ್ಕಿ ಹಕ್ಕುದಾರರೊಬ್ಬರು ರಾಜ್ಯ ಮೇಲ್ಮನವಿ ಪ್ರಾಧಿಕಾರದಿಂದ ತಡೆಯಾಜ್ಞೆ ತಂದಿದ್ದಾರೆ. ಕುಮ್ಕಿ ವಿರಹಿತಗೊಳಿಸಿ ಜಿಲ್ಲಾಧಿಕಾರಿಯವರು ಜಾಗ ನೀಡಿದ ವಿಧಿ ವಿಧಾನ ಸರಿಯಾಗಿಲ್ಲ ಎಂಬ ದೂರು ಅವರದು. ಕಟ್ಟಡ ಕಟ್ಟಲು ತಡೆಯಾಜ್ಞೆ ಇರುವುದರಿಂದ ಇಷ್ಟರವರೆಗೆ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡ ಭಾಗ್ಯ ಮರೀಚಿಕೆಯಾಗಿದೆ.

ಜೈಲಿನ ಕಟ್ಟಡ
ದೂರದೂರುಗಳಿಂದ ಕಾಲೇಜಿಗೆ ಸೇರಿರುವ ಬಡ ವಿದ್ಯಾರ್ಥಿನಿಯರಿಗೆ ಅನಾನುಕೂಲಕರ ಸ್ಥಿತಿಯಲ್ಲಿ ಪಾಠ ಪ್ರವಚನ ಕೇಳಬೇಕಾದ ಸ್ಥಿತಿ ಇದೆ. ಸ್ವಲ್ಪ ಸಮಯಕ್ಕೆ ಹಿಂದಿನ ಪುರಸಭಾ ಕಟ್ಟಡಕ್ಕೆ ತರಗತಿಗಳನ್ನು ಸ್ಥಳಾಂತರ ಮಾಡಿದ್ದರೂ ಅನಿವಾರ್ಯತೆಗೆ ಸಿಲುಕಿ ಮತ್ತೆ ಜೈಲಿನ ಕಟ್ಟಡಕ್ಕೆ ಸ್ಥಳಾಂತರವಾಗಿದ್ದಾರೆ. ಹಳೆಯ ಮತ್ತು ಇಕ್ಕಟ್ಟಾದ ಕೊಠಡಿ, ಜತೆಗೆ ಸೌಕರ್ಯಗಳ ಕೊರತೆ ವಿದ್ಯಾರ್ಥಿಗಳನ್ನು, ಉಪನ್ಯಾಸಕರನ್ನು ಕಾಡುತ್ತಿದೆ.

ವಿದ್ಯಾರ್ಥಿ ಸಂಖ್ಯೆಯಲ್ಲಿ ಪ್ರಗತಿ
2014-15ನೇ ಸಾಲಿನಲ್ಲಿ ನೆಲ್ಲಿಕಟ್ಟೆ ದ.ಪ್ರಾ. ಶಾಲೆಯಲ್ಲಿ ಕಾಲೇಜು ಆರಂಭಗೊಂಡಾಗ 2015-16ನೇ ಸಾಲಿನಲ್ಲಿ ಜೈಲಿನ ಕಟ್ಟಡಕ್ಕೆ ಸ್ಥಳಾಂತಗೊಂಡಾಗ ಮೊದಲ ಶೈಕ್ಷಣಿಕ ವರ್ಷದಲ್ಲಿ 120, ಎರಡನೇ ವರ್ಷ 354, ಮೂರನೇ ವರ್ಷ 540, ನಾಲ್ಕನೇ ವರ್ಷ 620, ಐದನೇ ವರ್ಷ 717ಕ್ಕೆ ಏರಿಕೆಯಾಗಿದೆ. ಬಿಎ ಹಾಗೂ ಬಿಕಾಂ ಎರಡೂ ವಿಭಾಗದಲ್ಲೂ ಎ ಹಾಗೂ ಬಿ ತರಗತಿಗಳನ್ನು ವಿಭಾಗಿಸಲಾಗಿದೆ.

 ಪ್ರಗತಿಗೆ ತೊಡಕು
ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿ ನಿಯರ ಸಂಖ್ಯೆ ಹೆಚ್ಚಾಗುತ್ತಿರುವುದು ನಮಗೆ ಖುಷಿಯಾಗುತ್ತಿದೆ. ಅದರಲ್ಲೂ ಕಲಾ ವಿಭಾಗಕ್ಕೆ ನಮ್ಮಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿನಿಯರು ಸೇರ್ಪಡೆಯಾಗುತ್ತಿದ್ದಾರೆ. ಆದರೆ ಕಟ್ಟಡದ ಕೊರತೆ ಕಾಲೇಜಿನ ಇನ್ನಷ್ಟು ಪ್ರಗತಿಗೆ ತೊಡಕಾಗುತ್ತಿದೆ. ಆನೆಮಜಲಿನ ಜಾಗದ ಸಮಸ್ಯೆ ಬಗೆಹರಿದರೆ ಹೆದ್ದಾರಿಯ ಬದಿಯಲ್ಲಿ ಅತ್ಯಂತ ಅನುಕೂಲದ ಪರಿಸರದಲ್ಲಿ ಕಾಲೇಜು ಕಾರ್ಯನಿರ್ವಹಿಸಲಿದೆ.
– ಪ್ರೊ| ಝೇವಿಯರ್‌ ಡಿ’ಸೋಜಾ, ಕಾಲೇಜು ಪ್ರಾಂಶುಪಾಲರು

 ಶೀಘ್ರ ಕಟ್ಟಡ ನಿರ್ಮಾಣ
ಕುಮ್ಕಿ ಹಕ್ಕುದಾರರು ಮೇಲ್ಮನವಿ ಪ್ರಾಧಿಕಾರದಿಂದ ತಡೆಯಾಜ್ಞೆ ತಂದಿರುವುದರಿಂದ ಅನುದಾನವಿದ್ದರೂ ಕಾಲೇಜು ಕಟ್ಟಡ ನಿರ್ಮಾಣಕ್ಕೆ ತೊಂದರೆ ಯಾಗಿದೆ. ತಡೆಯಾಜ್ಞೆಯನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಮತ್ತು ಶೀಘ್ರದಲ್ಲಿ ಕಟ್ಟಡ ನಿರ್ಮಾಣವಾಗಲಿದೆ.
– ಸಂಜೀವ ಮಠಂದೂರು , ಶಾಸಕರು, ಪುತ್ತೂರು

- ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

JAYA-Bhattacharya

Appoint: ಲಾಕ್‌ಡೌನ್‌ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ

Flight

Hoax Call: ಈ ವರ್ಷದಲ್ಲಿ 994 ವಿಮಾನಕ್ಕೆ ಹುಸಿ ಬಾಂಬ್‌ ಕರೆ ಬಂದಿದೆ: ಸರಕಾರ

Dansuh-aiswarya

Chennai: ಐಶ್ವರ್ಯ ರಜನಿಕಾಂತ್‌, ಧನುಷ್‌ಗೆ ವಿಚ್ಛೇದನ ನೀಡಿದ ಕೋರ್ಟ್‌

IT-Appoint

information Technology Appointment: ಬೆಂಗಳೂರ‌ಲ್ಲೇ ಹೆಚ್ಚಿನ ಉದ್ಯೋಗ ನಿರೀಕ್ಷೆ

PAKist

Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!

Pro-kka

Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Sullia: ತಾಲೂಕು ಕಚೇರಿಯಲ್ಲಿ ವೃದ್ಧ ಸಾವು

Sullia: ತಾಲೂಕು ಕಚೇರಿಯಲ್ಲಿ ವೃದ್ಧ ಸಾವು

Kabaka: ಮನೆಯಿಂದ ಮಾದಕ ವಸ್ತು ವಶ?

Kabaka: ಮನೆಯಿಂದ ಮಾದಕ ವಸ್ತು ವಶ?

Sri Kukke Subrahmanya Temple: ಚಂಪಾಷಷ್ಠಿ ಮಹೋತ್ಸವ ಆರಂಭ

Sri Kukke Subrahmanya Temple: ಚಂಪಾಷಷ್ಠಿ ಮಹೋತ್ಸವ ಆರಂಭ

Dharmasthala: ಡಾ| ಹೆಗ್ಗಡೆಯನ್ನು ಭೇಟಿಯಾದ ಯುನಿಸೆಫ್‌ ತಂಡ

Dharmasthala: ಡಾ| ಹೆಗ್ಗಡೆಯನ್ನು ಭೇಟಿಯಾದ ಯುನಿಸೆಫ್‌ ತಂಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

JAYA-Bhattacharya

Appoint: ಲಾಕ್‌ಡೌನ್‌ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ

Flight

Hoax Call: ಈ ವರ್ಷದಲ್ಲಿ 994 ವಿಮಾನಕ್ಕೆ ಹುಸಿ ಬಾಂಬ್‌ ಕರೆ ಬಂದಿದೆ: ಸರಕಾರ

Dansuh-aiswarya

Chennai: ಐಶ್ವರ್ಯ ರಜನಿಕಾಂತ್‌, ಧನುಷ್‌ಗೆ ವಿಚ್ಛೇದನ ನೀಡಿದ ಕೋರ್ಟ್‌

IT-Appoint

information Technology Appointment: ಬೆಂಗಳೂರ‌ಲ್ಲೇ ಹೆಚ್ಚಿನ ಉದ್ಯೋಗ ನಿರೀಕ್ಷೆ

PAKist

Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.