ತೆಂಗಿನ ಮರಗಳಿಗೆ ಬಿಳಿ ಹಾರು ನೊಣದ ಉಪಟಳ
Team Udayavani, Oct 31, 2017, 11:19 AM IST
ಸುರತ್ಕಲ್: ಸುರತ್ಕಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೆಂಗಿನ ಮರಗಳನ್ನು ಕಾಡುವ ಬಿಳಿ ಹಾರು ನೊಣದ ಉಪಟಳ ವಿಪರೀತವಾಗಿದೆ. ತೆಂಗಿನ ಕೃಷಿಕರು ಆತಂಕಗೊಂಡಿದ್ದು, ಇದಕ್ಕೆ ಸೂಕ್ತ ಪರಿಹಾರ ಮಾರ್ಗಗಳನ್ನು ತೋರಿಸಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ.
ತಮಿಳುನಾಡಿನ ಸೀಯಾಳ ಕಾರಣ?
ಬಿಳಿ ನೊಣದ ಹಾವಳಿ ತಮಿಳು ನಾಡಿನಲ್ಲಿ ವಿಪರೀತವಾಗಿದ್ದು, ಅಲ್ಲಿಂದ ಬರುವ ಸೀಯಾಳಗಳ ಜತೆಯಲ್ಲಿ ಇವುಗಳ ಮೊಟ್ಟೆಗಳು ನಮ್ಮೂರಿಗೂ ಬಂದು ಇಲ್ಲಿನ ತೆಂಗಿನಮರಗಳನ್ನೂ ಬಾಧಿಸುತ್ತಿದೆ ಎಂದು ಶಂಕಿಸಲಾಗಿದೆ.
ಬಾಳೆ ಗಿಡಗಳಿಗೂ ರೋಗ
ತೆಂಗಿನ ಮರದ ಬುಡದಲ್ಲಿರುವ ಬಾಳೆ ಗಿಡಗಳೂ ಕಪ್ಪು ವರ್ಣಕ್ಕೆ ತಿರುಗಿದ್ದು, ಎಲೆ ಅಡಿ ಭಾಗದಲ್ಲಿ ಬಿಳೆ ಮಚ್ಚೆಗಳು ಬಿದ್ದು ಎಲೆ ಕೊಳೆತು ಹೋಗುತ್ತಿದೆ. ಬಾಳೆ ದಿಂಡು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಕೃಷಿಕ ಚಂದು ಬಂಜನ್ ಉದಯವಾಣಿ ಸುದಿನ ಜತೆ ಮಾತನಾಡಿ, ನಾಲ್ಕಾರು ತಿಂಗಳಿನಿಂದ ತೆಂಗಿನ ಮರಗಳು ಈ ರೋಗಕ್ಕೆ ತುತ್ತಾಗಿವೆ. ಗೆಂದಾಳಿಯ ಸೀಯಾಳ ಒಡೆದು ಬೀಳುತ್ತಿದೆ. ಗರಿಗಳು ಒಣಗಿ, ಬಾಗಿ, ಕಪ್ಪು ಬಣ್ಣಕ್ಕೆ ತಿರುಗಿವೆ ಎಂದು ಹೇಳಿದರು.
ರೋಗದ ಲಕ್ಷಣ
ತೆಂಗಿನ ಗರಿಗಳು ಪೂರ್ಣ ಒಣಗಿದಂತೆ ಕಾಣುತ್ತಿದ್ದು, ಕಪ್ಪು ನೀರು ಸುರಿಯುತ್ತಿದೆ. ತೊಟ್ಟಿನ ಹೊರ ಭಾಗ ಕೊಳೆತು ಕಾಯಿಗಳು ಉದುರಿ ಬೀಳುತ್ತಿವೆ ಮಾತ್ರವಲ್ಲದೆ ಗಾತ್ರವೂ ಕುಂಠಿತವಾಗುತ್ತದೆ. ಈ ಹಾವಳಿ ವಿಪರೀತವಾದರೆ ಮುಂದಿನ ದಿನಗಳಲ್ಲಿ ತೆಂಗಿನ ಕೃಷಿಯ ಮೇಲೆ ಅಡ್ಡ ಪರಿಣಾಮ ಬೀಳುವ ಅಪಾಯವಿದೆ.
ರೋಗ ತಡೆಗೆ ಅಗತ್ಯ ಕ್ರಮ
ಬಿಳಿ ನೊಣ ಉಪಟಳದ ಬಗ್ಗೆ ರೈತರಿಂದಲೂ ದೂರು ಬಂದಿದ್ದು, ಇಲಾಖೆ ವತಿಯಿಂದ ಸ್ಥಳ ಸಮೀಕ್ಷೆ ಕೈಗೊಂಡಿದ್ದೇವೆ. ತಮಿಳುನಾಡಿನಲ್ಲಿ ಈ ಸಮಸ್ಯೆ ಅತಿಯಾಗಿದ್ದು, ಅಲ್ಲಿಂದ ಆಮದಾಗುವ ಸೀಯಾಳದಲ್ಲಿ ಈ ಬಿಳಿ ನೊಣಗಳ ಮೊಟ್ಟೆಗಳು ಇಲ್ಲಿಗೆ ತಲುಪಿರುವ ಸಾಧ್ಯತೆಗಳಿವೆ. ಇದರ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಕೃಷಿಕರು, ಅ ಧಿಕಾರಿಗಳು ಮತ್ತು ತಜ್ಞರ ಸಭೆ ನಡೆಯಲಿದೆ.
– ಪ್ರದೀಪ್ ಡಿ’ಸೋಜಾ, ತಾಲೂಕು ತೋಟಗಾರಿಕಾ ಅಧಿಕಾರಿ
ತೆಂಗು ಕೃಷಿ ಅಪಾಯದಲ್ಲಿ
ತಡಂಬೈಲ್ ಭಾಗದಲ್ಲಿ ತೆಂಗಿನ ಮರಗಳು ನುಸಿ ರೋಗದಿಂದ ಬಾಧಿತವಾಗಿವೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಲಾಗಿದೆ. ರೋಗ ವೇಗವಾಗಿ ಹರಡುವುದರಿಂದ ಸುತ್ತಮುತ್ತಲಿನ ಮರಗಳು ಹಾಳಾಗುವ ಅಪಾಯವಿದೆ.
- ಅಶೋಕ್ ತಡಂಬೈಲ್, ಸ್ಥಳೀಯ ಕಾರ್ಪೊರೇಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.