ನೆರಿಯ: ಮುಂದುವರಿದ ಕಾಡಾನೆ ದಾಂಧಲೆ; ಆನೆ ಅಟ್ಟಲು ನಾಗರಹೊಳೆಯ ತಂಡ

Team Udayavani, Dec 14, 2022, 12:15 AM IST

ನೆರಿಯ: ಮುಂದುವರಿದ ಕಾಡಾನೆ ದಾಂಧಲೆ; ಆನೆ ಅಟ್ಟಲು ನಾಗರಹೊಳೆಯ ತಂಡ

ಬೆಳ್ತಂಗಡಿ: ತಾಲೂಕಿನ ನೆರಿಯ ಸುತ್ತಮುತ್ತ ಬೀಡು ಬಿಟ್ಟಿರುವ ಕಾಡಾನೆಗಳು ಸೋಮವಾರ ರಾತ್ರಿ ಕಡಿರುದ್ಯಾವರ ಗ್ರಾಮದ ಭಂಡಾಜೆ ಆಸುಪಾಸು ತೋಟಗಳಿಗೆ ದಾಳಿ ಇಟ್ಟು ಬಾಳೆ ಕೃಷಿಯನ್ನು ನಾಶಪಡಿಸಿವೆ.

ತೋಟತ್ತಾಡಿಯಲ್ಲಿ ಸೋಮವಾರ ರಾತ್ರಿಯೂ ಇಲಾಖೆಯ ಸಿಬಂದಿಯ ಕಾರ್ಯಾಚರಣೆಯ ವೇಳೆ ಮತ್ತೆ ಒಂಟಿ ಸಲಗ ಕಂಡುಬಂದಿದೆ. ಆದ್ದರಿಂದ ನೆರಿಯ ಅಣಿಯೂರಿನಲ್ಲಿ ಸೋಮವಾರ ಬೆಳಗ್ಗೆ ಕಂಡು ಬಂದ ಒಂಟಿ ಸಲಗವೂ ಇಲ್ಲಿರುವ ಸಲಗವೂ ಬೇರೆ ಬೇರೆ ಎಂಬ ಅನುಮಾನ ವ್ಯಕ್ತವಾಗಿದೆ. ರವಿವಾರ ನೆರಿಯದ ರಾಮಕುಮಾರ್‌ ಅವರ ತೋಟಕ್ಕೆ ದಾಳಿ ನಡೆಸಿರುವ ಒಂಟಿ ಸಲಗ ಅಡಿಕೆ ಗಿಡಗಳಿಗೆ ಹಾನಿ ಮಾಡಿದೆ. ಕಡಿರುದ್ಯಾವರ ಗ್ರಾಮದ ಭಂಡಾಜೆ ಬಳಿಯೂ ಆನೆಗಳು ದಾಳಿ ನಡೆದಿರುವುದರಿಂದ ಈ ಗ್ರಾಮಗಳಲ್ಲಿ ಬೇರೆ ಬೇರೆ ಹಿಂಡು ಇರುವುದು ಸ್ಪಷ್ಟವಾಗಿದೆ.

ಎಸಿಎಫ್‌ ಭೇಟಿ
ತೋಟತ್ತಾಡಿ, ಚಿಬಿದ್ರೆ ಗ್ರಾಮಗಳಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್‌ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಆನೆಗಳನ್ನು ಕಾಡಿಗಟ್ಟುವ ತಂಡ ಗಳಿಂದ ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಹೆಚ್ಚಿನ ಸಲಹೆ ಸೂಚನೆಗಳನ್ನು ನೀಡಿದರು.

ಬೆಳ್ತಂಗಡಿ ವಲಯ ಅರಣ್ಯಧಿಕಾರಿ ತ್ಯಾಗರಾಜ್‌, ಉಪ ವಲಯ ಅರಣ್ಯಾಧಿಕಾರಿ ಭವಾನಿ ಶಂಕರ, ಗಸ್ತು ಅರಣ್ಯ ಪಾಲಕ ಪಾಂಡುರಂಗ ಕಮತಿ, ವಾಸಣ್ಣ ಹಾಗೂ ಸ್ಥಳೀಯರು ಇದ್ದರು.

ಆನೆ ಅಟ್ಟಲು ನಾಗರಹೊಳೆಯ ತಂಡ
ಕಾಡಾನೆಗಳ ಉಪಟಳವನ್ನು ತಡೆಗಟ್ಟಲು ನಾಗರಹೊಳೆಯಿಂದ ನುರಿತ ಕಾವಾಡಿಗರನ್ನು ತರಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕುರಿತು ಕ್ರಮ ಕೈಗೊಳ್ಳಲಾಗುವುದು ಈ ಬಗ್ಗೆ ಸಂಬಂಧಪಟ್ಟವರಲ್ಲಿ ಮಾತುಕತೆ ನಡೆಸಿದ್ದು ಮುಂದಿನ ಒಂದೆರಡು ದಿನದಲ್ಲಿ ತಂಡ ಆಗಮಿಸುವ ನಿರೀಕ್ಷೆ ಇದೆ ಎಂದು ಡಿಎಫ್‌ಒ ಡಾ| ದಿನೇಶ್‌ ಕುಮಾರ್‌ ತಿಳಿಸಿದ್ದಾರೆ.

ಈ ಹಿಂದೆ ಮುಂಡಾಜೆಯ ಧುಂಬೆಟ್ಟು ಪ್ರದೇಶಕ್ಕೂ ನಾಗರಹೊಳೆಯಿಂದ ಕಾವಾಡಿಗರು ಆಗಮಿಸಿದ್ದರು. ಆದರೆ ಆಗ ಆನೆಗಳ ಸುಳಿವು ಪತ್ತೆಯಾಗಿರಲಿಲ್ಲ. ತಂಡ ವಾಪಸಾದ ಒಂದೆರಡು ದಿನಗಳಲ್ಲೇ ಮತ್ತೆ ಉಪಟಳ ಆರಂಭಿಸಿದ್ದವು.

ಇದನ್ನೂ ಓದಿ: ಗುಂಡ್ಲುಪೇಟೆ: ಲಾರಿ ಢಿಕ್ಕಿ ಹೊಡೆದು ಹೆಣ್ಣಾನೆ ಸಾವು, ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

ಟಾಪ್ ನ್ಯೂಸ್

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ

siddaramaiah

MUDA ಹಗರಣ: ನ.23ಕ್ಕೆ ಸಿಎಂ ಮೇಲ್ಮನವಿ ವಿಚಾರಣೆ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

ud

Puttur: ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ಕಳವು

2

Sullia: 10 ವರ್ಷದ ಬಳಿಕ ಚಿಂಗಾಣಿ ಗುಡ್ಡೆ ಟ್ಯಾಂಕ್‌ಗೆ ಕೊನೆಗೂ ನೀರು ಬಂತು!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ

siddaramaiah

MUDA ಹಗರಣ: ನ.23ಕ್ಕೆ ಸಿಎಂ ಮೇಲ್ಮನವಿ ವಿಚಾರಣೆ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.