ಕುಕ್ಕೆ ಪೇಟೆಯಲ್ಲಿ ಕಾಡಾನೆ ಸವಾರಿ; ಕಾಶಿಕಟ್ಟೆ ಗಣಪತಿ ದೇವಸ್ಥಾನ ಬಳಿ ಗಜರಾಜ ಪ್ರತ್ಯಕ್ಷ
Team Udayavani, Feb 20, 2020, 9:29 AM IST
ಸುಬ್ರಹ್ಮಣ್ಯ; ಪುರಾಣ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಜನಸಂಚಾರ ಪೇಟೆಯಲ್ಲಿ ಒಂಟಿ ಸಲಗವೊಂದು ಗುರುವಾರ ಬೆಳಗ್ಗಿನ ಜಾವ ರಾಜಾರೋಷವಾಗಿ ಸಂಚರಿಸಿ ಭೀತಿ ಹುಟ್ಟಿಸಿದೆ.
ಇಂದು ಬೆಳಗ್ಗೆ ಸುಮಾರು 5:46ರ ಸಮಯಕ್ಕೆ ಮುಖ್ಯ ಪೇಟೆಯ ಕಾಶಿಕಟ್ಟೆ ಗಣಪತಿ ದೇವಸ್ಥಾನದ ಪಕ್ಕದ ಮಯೂರ ವಸತಿಗ್ರಹದ ಬಳಿಯಿಂದ ಕಾಶಿಕಟ್ಟೆ ಮುಖ್ಯ ಮಾರ್ಗವಾಗಿ ನೂಚಿಲ ಕಡೆಗೆ ಆನೆ ರಸ್ತೆಯಲ್ಲೇ ಸಂಚರಿಸಿದೆ.
ವಾಹನ ಸಂಚಾರವಿರುವಾಗಲೇ ರಾಜ ಗಾಂಭೀರ್ಯದಿಂದ ಈ ಗಜರಾಜ ಹೆಜ್ಜೆ ಹಾಕಿದೆ. ಮೊದಲು ಕ್ಷೇತ್ರಕ್ಕಾಗಮಿಸಿದ ಭಕ್ತರು ಇದು ದೇಗುಲದ ಆನೆ ಆಗಿರಬಹುದು ಎಂದೆ ನಂಬಿದ್ದರು. ಆದರೆ ಇದು ಕಾಡಾನೆ ವಾಸ್ತವದಲ್ಲಿ ಎಂದು ನಂತರ ತಿಳಿದುಬಂದಿದೆ.
ಕೆಲ ದಿನಗಳ ಹಿಂದೆಯಷ್ಟೆ ಬೆಳಗಿನ ಜಾವ ಸುಬ್ರಹ್ಮಣ್ಯ- ಮಂಜೇಶ್ವರ ರಸ್ತೆಯಲ್ಲಿ ಸ್ಕೂಟಿಯಲ್ಲಿ ತೆರಳುತಿದ್ದ ಕಾಲೇಜು ಸಿಬಂದಿಯೋರ್ವರಿಗೆ ಅರಂಪಾಡಿ ಬಳಿ ಆನೆ ರಸ್ತೆ ದಾಟುತ್ತಿರುವುದು ಕಂಡು ಬಂದಿತ್ತು. ಹರಿಹರ ಪಳ್ಳತ್ತಡ್ಕ ಮುಖ್ಯ ಪೇಟೆಯಲ್ಲಿ ಆನೆ ಇತ್ತೀಚೆಗೆ ಸಂಚಾರ ನಡೆಸಿ ಭೀತಿ ಹುಟ್ಟಿಸಿತ್ತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.