ಹಗಲಲ್ಲೇ ನಾಡಿಗಿಳಿದ ಕಾಡಾನೆಗಳು
Team Udayavani, Feb 9, 2018, 1:14 PM IST
ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನತ್ತೂರು ನೆಯ್ಯಂಗಯಕ್ಕೆ ಆನೆಗಳ ಹಿಂಡು ದಾಳಿಯಿಟ್ಟಿದ್ದು, ಪರಿಸರದಲ್ಲಿ ಬೀಡುಬಿಟ್ಟಿದೆ. ಈ ತನಕ ರಾತ್ರಿ ಹೊತ್ತಿನಲ್ಲಷ್ಟೇ ಇಲ್ಲಿನ ಜನರ ನಿದ್ದೆಗೆಡಿಸುತ್ತಿದ್ದ ಆನೆಗಳು ಸಂಜೆ ಹೊತ್ತಿನಲ್ಲೇ ನಾಡಿಗಿಳಿದು ಭಾರೀ ಆತಂಕ ಸೃಷ್ಟಿಸಿವೆ.
2 ಮರಿಯಾನೆಗಳು, 6 ದೊಡ್ಡ ಆನೆಗಳು ಹಿಂಡಿನಲ್ಲಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪಯಸ್ವಿನಿ ನದಿಯ ನೆಯ್ಯಂಗಯದಲ್ಲಿ ಆನೆಗಳ ಹಿಂಡು ನೀರು ಕುಡಿದು, ಸ್ನಾನ ಮಾಡುತ್ತಿರುವುದನ್ನು ಸ್ಥಳೀಯರು ವೀಕ್ಷಿಸಿದ್ದಾರೆ.
ಒಳಿಯತ್ತಡ್ಕ, ಕಾನತ್ತೂರು, ಕುಂಡುಚ್ಚಿ ಮೊದಲಾದ ಪ್ರದೇಶಗಳಲ್ಲಿ ಮತ್ತೆ ಆನೆಗಳ ಹಿಂಡು ವ್ಯಾಪಕ ಕೃಷಿ ನಾಶ ಮಾಡಿದೆ. ಬುಧವಾರ ರಾತ್ರಿ ಎರಿಂಜಿಪುಯ ಮುರಳೀಧರನ್ ಅವರ ತೋಟಕ್ಕಿಳಿದ ಆನೆಗಳು ಅಡಿಕೆ ಮರಗಳು, ಬಾಳೆ ಕೃಷಿ ನಾಶ ಮಾಡಿವೆ. ಬೆಂಕಿ ಹಾಕಿ ಆನೆಗಳನ್ನು ಓಡಿಸಲು ಯತ್ನಿಸಿದರೂ ಆನೆಗಳು ಹಿಂಜರಿಯುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Team India: ಹೊಸ ಕೋಚ್ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್ ನಲ್ಲಿ ಪೀಟರ್ಸನ್
Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!
ಮಾದರಿ ಸಂಘವಾಗಿ ಗುರುತಿಸಿಕೊಂಡ ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ
Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ
Udupi: ಎರಡೇ ದಿನದಲ್ಲಿ ಬರಲಿದೆ, ವಾರಾಹಿ ನೀರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.