ಕೊಪ್ಪರಿಗೆ ಏರುವುದರೊಂದಿಗೆ ಚಂಪಾಷಷ್ಠಿ ಆರಂಭ
Team Udayavani, Nov 16, 2017, 3:19 PM IST
ಸುಬ್ರಹ್ಮಣ್ಯ: ಕಾರ್ತಿಕ ಬಹುಳ ದ್ವಾದಶಿ ಬುಧವಾರ ಪೂರ್ವ ಶಿಷ್ಟ ಸಂಪ್ರದಾಯದಂತೆ ಕುಕ್ಕೆ ದೇಗುಲದಲ್ಲಿ ಕೊಪ್ಪರಿಗೆ ಏರುವ ಕಾರ್ಯ ನಡೆಯಿತು. ಬೆಳಗ್ಗೆ 8.55ರ ಧನುರ್ ಲಗ್ನ ಸುಮೂಹೂರ್ತದಲ್ಲಿ ದೇಗುಲದ ಪ್ರಧಾನ ಅರ್ಚಕ ವೇ| ಮೂ| ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ರಾಮಲಕ್ಷ್ಮಣ ಎಂಬ ಹೆಸರಿನ ಜೋಡಿ ಅನ್ನದ ಕೊಪ್ಪರಿಗೆಗೆ ವಿಶೇಷ ಪೂಜೆ ಸಲ್ಲಿಸಿ, ದೇಗುಲದ ಒಳಾಂಗಣದಲ್ಲಿ ದೊಡ್ಡದಾದ ಎರಡು ಒಲೆಗಳ ಮೇಲೆ ಏರಿಸಲಾಯಿತು. ಕೊಪ್ಪರಿಗೆಗಳಲ್ಲಿ ಅನ್ನ ಬೆಂದ ಬಳಿಕ ಅದಕ್ಕೆ ಪೂಜೆ ಸಲ್ಲಿಸಲಾಯಿತು. ಅನ್ನದಾನ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ಕುಕ್ಕೆಯಲ್ಲಿ ಜಾತ್ರೆಯ ಸಂದರ್ಭ ವಿಶೇಷ ಅನ್ನದಾನ ನಿರಂತರವಾಗಿ ನಡೆಯುವುದು. ಬುಧವಾರದಿಂದ ಜಾತ್ರೆ ಮುಗಿಯುವ ವರೆಗೆ ಪ್ರತಿದಿನ ವಿಶೇಷ ಕೊಪ್ಪರಿಗೆಯ ಅನ್ನವನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಇದು ಶ್ರೀ ದೇವರ ಅತ್ಯಮೂಲ್ಯ ಪ್ರಸಾದಗಳಲ್ಲಿ ಒಂದು. ಕೊಪ್ಪರಿಗೆ ಏರುವುದರೊಂದಿಗೆ ಸಂಭ್ರಮದ ವಾರ್ಷಿಕ ಜಾತ್ರೆ ಕೂಡ ಆರಂಭಗೊಂಡಿದೆ. ನ. 17ರಂದು ಶ್ರೀ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ನಡೆಯಲಿದೆ.
ದೇಗುಲದ ಕಾರ್ಯ ನಿರ್ವಾಹಣಾಧಿಕಾರಿ ರವೀಂದ್ರ ಎಚ್. ಎಂ., ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಹೇಶ್ ಕುಮಾರ್ ಕೆ.ಎಸ್. ಕರಿಕ್ಕಳ, ಬಾಲಕೃಷ್ಣ ಬಲ್ಲೇರಿ, ದಮಯಂತಿ ಕೂಜುಗೋಡು, ಮಾಧವ ಡಿ. ಮತ್ತು ಹೊರೆಕಾಣಿಕೆ ನೀಡಿದ ಶ್ರೀ ಲಕ್ಷ್ಮೀ ಜನಾರ್ದನ ದೇಗುಲದ ಮಹಾವೀರ ಜೈನ್, ಹರಿಶ್ಚಂದ್ರ ಗೌಡ ಕನ್ವಾರೆ, ಗಂಗಾಧರ, ಕೆ.ಎಂ. ಜಯಪ್ರಕಾಶ್ ಶಾಂತಿಗುರಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಪ್ರಥಮ ಬಾರಿಗೆ ಹೊರೆಕಾಣಿಕೆ
ಪ್ರಥಮ ಬಾರಿಗೆ ಚಂಪಾಷಷ್ಠಿಗೆ ಹೊರೆ ಕಾಣಿಕೆ ಸಂಗ್ರಹವಾಗಿದೆ. ದೇಗುಲದ ಆಡಳಿತ ಮಂಡಳಿ ಈ ಬಾರಿ ಹೊರೆ ಕಾಣಿಕೆ ಸಂಗ್ರಹಕ್ಕೆ ನಿರ್ಧರಿಸಿತ್ತು. ಅದರಂತೆ ಕ್ಷೇತ್ರ ಹಾಗೂ ಇತರೆಡೆಗಳಿಂದ ಭಕ್ತರು ಸೀಯಾಳ, ಬಾಳೆಗೊನೆ, ಅಕ್ಕಿ, ಅಡಿಕೆ ಗೊನೆ ತರಕಾರಿ ಇತ್ಯಾದಿ ಹೊರೆ ಕಾಣಿಕೆಗಳನ್ನು ತಂದು ಬುಧವಾರ ದೇಗುಲಕ್ಕೆ ಅರ್ಪಿಸಿದರು. ಕುರಿಯಾಲ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ದನ ದೇಗುಲದಿಂದ ಬಂದ ಹೊರೆ ಕಾಣಿಕೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.