“ಮಹಿಳೆ, ಮಕ್ಕಳ ಸುರಕ್ಷತೆ ಉದ್ದೇಶ’
ರಾಣಿ ಅಬ್ಬಕ್ಕ ವಿಶೇಷ ಮಹಿಳಾ ಪಡೆ ಅಸ್ತಿತ್ವಕ್ಕೆ
Team Udayavani, May 7, 2019, 6:00 AM IST
ಬಂಟ್ವಾಳ: ಮಹಿಳೆ ಮತ್ತು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಮಹಿಳಾ ಪೊಲೀಸರನ್ನೊಳಗೊಂಡ ರಾಣಿ ಅಬ್ಬಕ್ಕ ಪಡೆ ರಚನೆಯಾಗಿದೆ. ರಾಜ್ಯ ಡಿಜಿ, ಐಜಿಪಿ ಅವರ ಸೂಚನೆ ಮೇರೆಗೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ವಿಶೇಷ ಮಹಿಳಾ ಪಡೆ ರಚಿಸಲಾಗಿದ್ದು, ಪ್ರತೀ ಠಾಣೆಗಳಲ್ಲಿ ಇಂತಹ ಪಡೆಗಳನ್ನು ರಚಿಸುವ ಮೂಲಕ ವ್ಯವಸ್ಥೆಯನ್ನು ಸದೃಢಗೊಳಿಸ ಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಹೇಳಿದರು.
ಅವರು ಮೇ 6ರಂದು ಬಿ.ಸಿ.ರೋಡ್ ಜಂಕ್ಷನ್ನಲ್ಲಿ ಪಡೆಯ ಸಿಬಂದಿಗೆ ಹಸ್ತಲಾಘವ ನೀಡಿ, ಹಸುರು ನಿಶಾನೆ ತೋರಿಸಿ ಪಡೆಯನ್ನು ಉದ್ಘಾಟಿಸಿದರು. ಎಸ್ಐ ದರ್ಜೆಯ ಮಹಿಳಾ ಅಧಿಕಾರಿಯಿಂದ ನಿರ್ವಹಣೆ ಈ ಪಡೆಯನ್ನು ಎಸ್ಐ ದರ್ಜೆಯ ಓರ್ವ ಮಹಿಳಾ ಅಧಿಕಾರಿ ನಿರ್ವಹಣೆ ಮಾಡಲಿದ್ದಾರೆ. ನಗರದಲ್ಲಿರುವ ಜನನಿಬಿಡ ಪ್ರದೇಶಗಳಾದ ಕಾಲೇಜುಗಳು, ಪಾರ್ಕ್ ಗಳು, ರೈಲ್ವೆ ನಿಲ್ದಾಣ, ಮಾರ್ಕೆಟ್ ಸೇರಿದಂತೆ ಕೆಲವು ಪ್ರದೇಶದಲ್ಲಿ ಈ ಪಡೆಯ ಸಿಬಂದಿ ನಿಯೋಜಿಸಲಾಗುವುದು. ಬಂಟ್ವಾಳ ವೃತ್ತ ನಿರೀಕ್ಷಕರ ನೇರ ಸುಪರ್ದಿಯಲ್ಲಿ ಬಂಟ್ವಾಳ ತಾಲೂಕಿನ ಅಬ್ಬಕ್ಕ ಪಡೆ ಕಾರ್ಯಾಚರಿಸುವುದು ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಡಿಷನಲ್ ಎಸ್ಪಿ ಡಾ| ವಿಕ್ರಂ ವಿ. ಅಮ್ಟೆ, ಬಂಟ್ವಾಳ ಉಪವಿಭಾಗ ಎಎಸ್ಪಿ ಸೈದುಲ್ ಅಡಾವತ್, ಬಂಟ್ವಾಳ ವೃತ್ತ ನೀರೀಕ್ಷಕ ಶರಣಗೌಡ, ಸುಳ್ಯ ಸಿಪಿಐ ಸತೀಶ್ ಕುಮಾರ್, ಬೆಳ್ತಂಗಡಿ ಸಿಪಿಐ ಸಂದೇಶ್, ಬಂಟ್ವಾಳ ಎಸ್ಐಗಳಾದ ಪ್ರಸನ್ನ, ಸುಧಾಕರ ತೋಮ್ಟೆ, ಮಂಜುನಾಥ, ನಾರಾಯಣ ರೈ, ಸಿಬಂದಿ ಯೋಗೀಶ್, ಬೀಟ್ ಪೊಲೀಸ್ ಸಿಬಂದಿ ವಸಂತಿ ಗಂಗಾಧರ, ಜೆಸಿಂತಾ ಉಪಸ್ಥಿತರಿದ್ದರು.
6 ಸಿಬಂದಿಯ ತಂಡ
ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ 50 ಮಂದಿ ಮಹಿಳಾ ಪೊಲೀಸರಿದ್ದು, ಒಂದೊಂದು ಪಾಯಿಂಟ್ಗಳಲ್ಲಿ 3ರಿಂದ 5ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಅಪರಾಧ ಸಂಬಂಧಿ ಪ್ರಕರಣಗಳು ನಡೆದಾಗ ಆಯಾಯ ಪೊಲೀಸ್ ಠಾಣಾ ವ್ಯಾಪ್ತಿಗೆ ಈ ಪ್ರಕರಣಗಳು ಬರಲಿವೆ. ಒಂದು ಠಾಣೆಯ ವ್ಯಾಪ್ತಿಯಲ್ಲಿ ಆರು ಮಂದಿ ಸಿಬಂದಿಯ ತಂಡ ಕಾರ್ಯಾಚರಿಸುವುದು ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಅವರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.