Mangaluru ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಳವು
Team Udayavani, Aug 8, 2023, 12:31 AM IST
ಮಂಗಳೂರು: ಮಂಗಳೂರಿನಿಂದ ಮುಂಬಯಿಗೆ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಸೇರಿದ ಬ್ಯಾಗನ್ನು ಎಗರಿಸಿ ಅದರಲ್ಲಿದ್ದ ಹಣ ಮತ್ತು ದಾಖಲೆಪತ್ರಗಳನ್ನು ಕಳವುಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೂಲತಃ ಮುಂಬಯಿ ಪ್ರಸ್ತುತ ಮಂಗಳೂರಿನ ಶಕ್ತಿನಗರದಲ್ಲಿ ವಾಸವಾಗಿದ್ದ ಎಲಿಜಬೆತ್ಗೆ ಸೇರಿದ ಬ್ಯಾಗ್ ಇದಾಗಿದ್ದು, ಇದರಲ್ಲಿ 15 ಸಾವಿರ ರೂ., ಎಟಿಎಂ, ಆಧಾರ್, ಪಾನ್ಕಾರ್ಡ್ ಮತ್ತಿತರ ದಾಖಲೆ ಪತ್ರಗಳಿದ್ದವು. ಆರೋಪಿಗಳು ಇವೆಲ್ಲವನ್ನು ತೆಗೆದು ಬ್ಯಾಗ್ ಎಸೆದು ಪರಾರಿಯಾಗಿದ್ದಾರೆ.
ಕಂಕನಾಡಿಯಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಮುಂಬಯಿಗೆ ತೆರಳುವ ರೈಲಿಗೆ ಆ. 4ರಂದು ಸಂಜೆ 5.30ಕ್ಕೆ ಎಲಿಜೆಬೆತ್ ಮತ್ತವರ ಸಹೋದರರು ಹತ್ತಿದ್ದರು. ರಾತ್ರಿ ಸುಮಾರು 10ಕ್ಕೆ ಇಬ್ಬರು ನಿದ್ದೆಗೆ ಜಾರಿದ್ದು, ಬೆಳಗ್ಗೆ ಎದ್ದು ನೋಡಿದಾಗ ಬ್ಯಾಗ್ ಕಳವಾಗಿತ್ತು. ಹುಡುಕಾಡಿದಾಗ ಬ್ಯಾಗ್ ರೈಲಿನ ಬೋಗಿಯೊಂದರ ಟಾಯ್ಲೆಟ್ನಲ್ಲಿ ಕಂಡುಬಂದಿತ್ತು. ಮಹಿಳೆ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.