ಮಹಿಳಾ ಮತ್ತು ಮಕ್ಕಳ ಕೇಂದ್ರ ಅದ್ಭುತ ಪರಿಕಲ್ಪನೆ
ಕೆಎಂಸಿ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಮಕ್ಕಳ ವಿಸ್ತೃತ ಸೇವೆಗಳ ಕೇಂದ್ರ ಅನಾವರಣಗೊಳಿಸಿ ಶಿಲ್ಪಾ ಶೆಟ್ಟಿ
Team Udayavani, Sep 27, 2019, 1:42 AM IST
ಬಾಲಿವುಡ್ ಅಭಿನೇತ್ರಿ ಶಿಲ್ಪಾಶೆಟ್ಟಿ ಕುಂದ್ರಾ ಅವರು ಮಹಿಳಾ ಮತ್ತು ಮಕ್ಕಳ ಕೇಂದ್ರಕ್ಕೆ ಚಾಲನೆ ನೀಡಿದರು.
ಮಂಗಳೂರು: ತಾಯ್ತನದ ಕಾಳಜಿ ಮತ್ತು ಆರೈಕೆಗಾಗಿ ಕೆಎಂಸಿ ಆಸ್ಪತ್ರೆ ಆರಂಭಿಸಿರುವ ವಿನೂತನ ಮಹಿಳಾ ಮತ್ತು ಮಕ್ಕಳ ಕೇಂದ್ರ ಒಂದು ಅದ್ಭುತ ಪರಿಕಲ್ಪನೆ ಎಂದು ಬಾಲಿವುಡ್ ಅಭಿನೇತ್ರಿ ಶಿಲ್ಪಾ ಶೆಟ್ಟಿ ಕುಂದ್ರಾ ಹೇಳಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯಲ್ಲಿ ಆರಂಭಿಸಿರುವ “ಮಹಿಳಾ ಮತ್ತು ಮಕ್ಕಳ ಕೇಂದ್ರ’ಕ್ಕೆ ಗುರುವಾರ ಅವರು ಚಾಲನೆ ನೀಡಿದರು. ಬಳಿಕ ಡಾ| ಟಿಎಂಎ
ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಜರಗಿದ ಸಮಾರಂಭದಲ್ಲಿ “ವಾವ್ ಮಾಮ್- 2019′ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಈ ಅದ್ಭುತ ಉಪಕ್ರಮಕ್ಕಾಗಿ ಕೆಎಂಸಿಯನ್ನು ಅಭಿನಂದಿಸುತ್ತೇನೆ ಎಂದರು. ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಗೀರ್ ಸಿದ್ಧಿಕಿ ಅವರು ಮಾತನಾಡಿ, ಕೇಂದ್ರದಲ್ಲಿರುವ ವಿವಿಧ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಕೆಎಂಸಿ ವೈದ್ಯಕೀಯ ಸೇವೆಗಳ
ಮುಖ್ಯಸ್ಥ ಆನಂದ್ ವೇಣು ಗೋಪಾಲ್, ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾರ್ತಿಕ್‌ರಾಜ್‌ಗೊàಪಾಲ್, ವೈದ್ಯಕೀಯ ಸೇವೆ ಗಳ ಮುಖ್ಯಸ್ಥೆ ಡಾ| ವಸುಧಾ ಶೆಟ್ಟಿ, ಇಂದಿರಾ ಬಲ್ಲಾಳ್ ಉಪಸ್ಥಿತರಿದ್ದರು.
ಮೊದಲ ಬಾರಿ ನಾನು ಸಮಸ್ಯೆ ಎದುರಿಸಿದ್ದೆ
ಚೊಚ್ಚಲ ಗರ್ಭ ಧರಿಸಿದ್ದಾಗ ನಾನು ಕೂಡ ಆರೋಗ್ಯ ಸಮಸ್ಯೆ ಎದುರಿಸಿದ್ದೆ. ಇದು ನಾನು ಎರಡನೇ ಬಾರಿ ಗರ್ಭವತಿಯಾದಾಗ ಹೆಚ್ಚು ಎಚ್ಚರ ಮತ್ತು ಕಾಳಜಿ ವಹಿಸುವಂತೆ ಮಾಡಿತ್ತು. ಇದರ ಫಲವಾಗಿ ಎರಡನೇ ಹೆರಿಗೆ ವೇಳೆ ಸಮಸ್ಯೆ ಅಥವಾ ಆತಂಕ ಎದುರಾಗಿರಲಿಲ್ಲ ಎಂದು ತಾಯ್ತನದ ಅನುಭವವನ್ನು ತೆರೆದಿಟ್ಟರು. ನಾನು ಈ ಊರಿನ ಮಗಳು. ಅಳಿಯಕಟ್ಟು ಸಂತಾನ ಈ ನಾಡಿನ ಪರಂಪರೆ. ಇದರಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದೆ. ಮಹಿಳೆಯನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ ಎಂದು ತುಳುನಾಡಿನ ಹಿರಿಮೆ, ಸಂಬಂಧವನ್ನು ಮೆಲುಕು ಹಾಕಿದರು.
ಸಮಗ್ರ ಕ್ಲಿನಿಕ್ : ಡಾ| ಎಚ್.ಎಸ್. ಬಲ್ಲಾಳ್
ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ಈ ಸಮಗ್ರ ಕ್ಲಿನಿಕ್ ಮಹಿಳೆಯರಿಗೆ ಅತ್ಯದ್ಭುತ ರೀತಿಯಲ್ಲಿ ಪ್ರಯೋಜನಕಾರಿಯಾಗಲಿದೆ. ಕೆಎಂಸಿ ವಿನೂತನ ಪರಿಕಲ್ಪನೆ ಮತ್ತು ಉನ್ನತ ಆರೋಗ್ಯ ಸೇವೆಯೊಂದಿಗೆ ಟ್ರೆಂಡ್ ಸೆಟ್ಟರ್ ಆಗಿದೆ. ಜಿಲ್ಲೆಯಲ್ಲಿ ಇಂಥ ಸಮಗ್ರ ಕೇಂದ್ರ ಪ್ರಥಮ ಎಂದರು.
ನಫೀಸಾ, ಮೋನಿಸಾಗೆ “ವಾವ್ ಮಾಮ್’ ಕಿರೀಟ
ಕೆಎಂಸಿ ಆಸ್ಪತ್ರೆ ಮಂಗಳೂರು ವತಿಯಿಂದ ಆಯೋಜಿಸಿದ್ದ ಗರ್ಭಿಣಿಯರ “ವಾವ್ ಮಾಮ್’ ಸ್ಪರ್ಧೆಯಲ್ಲಿ ನಫೀಸಾ ಮಲಿಕ್ ಪ್ರಥಮ ಪ್ರಶಸ್ತಿ ಮತ್ತು ಮೋನಿಸಾ ಡಿ’ಸೋಜಾ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಕುಂದ್ರಾ ವಿಜೇತರಿಗೆ ಪ್ರಶಸ್ತಿ ಕಿರೀಟ ತೊಡಿಸಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.