ಅನಂಗ: ಮಹಿಳಾ ಜಾಗೃತಿ ಕಾರ್ಯಕ್ರಮ
Team Udayavani, Jul 5, 2017, 3:20 AM IST
ಬಂಟ್ವಾಳ: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾ.ಪಂ. ವ್ಯಾಪ್ತಿಯ ಅನಂಗ ಅಂಗನವಾಡಿ ವಠಾರದಲ್ಲಿ ಮಹಿಳೆಯರ ಅಭಿವೃದ್ಧಿ ಮತ್ತು ರಕ್ಷಣೆಗೆ ಇರುವ ವಿಶೇಷ ಕಾನೂನು ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಜರಗಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಈ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸೆ, ಕಿರುಕುಳ, ದೌರ್ಜನ್ಯಗಳನ್ನು ತಡೆಯುವ ಮಾರ್ಗೋಪಾಯ ಬಾಲ್ಯವಿವಾಹ, ತ್ಯಾಜ್ಯ ಮುಕ್ತ ಸ್ವಚ್ಛ ಮನೆ, ನೆಲ ಜಲ ಸಂರಕ್ಷಣೆ, ದುಡಿಯುವ ಕೈಗಳಿಗೆ ಕೆಲಸ ಖಾತರಿ ನೀಡುವ ಮಹಾತ್ಮಾ ಗಾಂಧಿ ನರೇಗಾದ ಕುರಿತು ಅನುಭವ ವಿನಿಮಯ ಸಂವಾದ ನಡೆಯಿತು. ನರೇಗಾದಡಿ ಪೌಷ್ಟಿಕ ಆಹಾರ ತೋಟ ನಿರ್ಮಾಣಕ್ಕೆ 11 ಅರ್ಹ ಕುಟುಂಬಗಳನ್ನು ಗುರುತಿಸಲಾಯಿತು.
ಮಹಾತ್ಮಾ ಗಾಂಧಿ ನರೇಗಾದ ಮಾಜಿ ಒಂಬುಡ್ಸ್ಮನ್ ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣ ಮೂಲ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್, ನರೇಗಾ ತಾಂತ್ರಿಕ ಅಧಿಕಾರಿ ಪ್ರಿಯಾಂಕಾ, ಕೊಣಾಜೆ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸ್ಟೆಬಲ್ ಉಷಾ, ಪೊಲೀಸರಾದ ನಾಗರಾಜ್, ಪ್ರಸಾದ್, ಪಂಚಾಯತ್ ಸದಸ್ಯೆಯರಾದ ಹರಿಣಾಕ್ಷಿ, ಪ್ರಭಾವತಿ, ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ, ಪ್ರೇರಕಿ ಜಯಾ, ಸಂಯೋಜಕಿ ದೀಪಿಕಾ ಸಂವಾದದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ಪಂಚಾಯತ್ ಸಿಬಂದಿ ಸದಾನಂದ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.