ಮಹಿಳಾ, ಮಕ್ಕಳ ವಿಶೇಷ ಚಿಕಿತ್ಸಾ ಘಟಕ


Team Udayavani, Oct 27, 2017, 2:40 PM IST

27Mng-11.jpg

ಮಹಾನಗರ: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸಮಗ್ರ ರೀತಿಯ ನೆರವು ಕಲ್ಪಿಸುವ ಸಲುವಾಗಿ ಆರಂಭಿಸಲಾದ ಮಹಿಳಾ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕದಲ್ಲಿ 3 ವರ್ಷಗಳಲ್ಲಿ 306 ಮಂದಿ ಚಿಕಿತ್ಸೆ ಪಡೆದಿದ್ದು, ಈ ಪೈಕಿ 136 ಮಂದಿ 18 ವರ್ಷಕ್ಕಿಂತ ಕೆಳಗಿನವರು.

2014 ನವೆಂಬರ್‌ 1ರಂದು ಜಿಲ್ಲಾ ಸರಕಾರಿ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗಿದೆ. ಸಂತ್ರಸ್ತರಿಗೆ ಕೌನ್ಸೆಲಿಂಗ್‌, ಚಿಕಿತ್ಸೆಗಾಗಿ ಕರ್ತವ್ಯನಿರತ ವೈದ್ಯರಲ್ಲದೆ, ಮೂವರು ಸಾಮಾಜಿಕ ಕಾರ್ಯಕರ್ತರು, ಓರ್ವ ಆಪ್ತ ಸಮಾಲೋಚಕರು, ಓರ್ವ ಮಹಿಳಾ ಪೊಲೀಸ್‌ ಅಧಿಕಾರಿ, ಕಾನೂನು ಸಲಹೆಗಾಗಿ ಇಬ್ಬರು ವಕೀಲರನ್ನೂ ಇಲ್ಲಿ ನೇಮಿಸಲಾಗಿದೆ. ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಹೆಲ್ಪ್ ಡೆಸ್ಕ್ ಇದೆ. ಕೌಟುಂಬಿಕ ದೌರ್ಜನ್ಯ, ಆ್ಯಸಿಡ್‌ ದಾಳಿ, ಮಹಿಳೆಯರ ಸಾಗಾಣಿಕೆ, ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ ಮುಂತಾದ ಪ್ರಕರಣಗಳಿಗೂ ಇಲ್ಲಿ ನೆರವು ನೀಡಲಾಗುತ್ತದೆ.

ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಪ್ರಕರಣಗಳಿಗೆ ಸಂಬಂಧಿಸಿ ಇಲ್ಲಿ ನೆರವು, ಚಿಕಿತ್ಸೆ ಲಭ್ಯವಿದ್ದು, ಆರೈಕೆ, ರಕ್ಷಣೆ,
ಪುನರ್ವಸತಿ, ಕಾನೂನು ಸಲಹೆ, ಆಪ್ತ ಸಮಾಲೋಚನೆ ಒದಗಿಸಲಾಗುತ್ತಿದೆ. 

ನೆರವಿಗೆ ಅಲೆದಾಡಬೇಕಿಲ್ಲ
ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳನ್ನು ನೀಡುವುದರಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರು ಚಿಕಿತ್ಸೆ, ಆರೈಕೆ, ರಕ್ಷಣೆಗಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗುವುದು, ಮುಜುಗರ ಅನುಭವಿಸುವುದು ತಪ್ಪುತ್ತದೆ. ಸಾಕ್ಷ್ಯಗಳು ನಾಶವಾಗುವ ಸಂಭವವೂ ಇಲ್ಲದಾಗಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಸಹಕಾರಿಯಾಗುತ್ತದೆ. ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ, ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ದಾಖಲಿಸುವ ಕೆಲಸಕ್ಕೂ ಈ ಘಟಕ ನೆರವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬಂದಿ ಹೇಳುತ್ತಾರೆ.

ಮಾಹಿತಿ ಗೌಪ್ಯ
ದೌರ್ಜನ್ಯಕ್ಕೆ ಒಳಗಾದವರು ಇಲ್ಲಿ ಚಿಕಿತ್ಸೆ, ಸಮಾಲೋಚನೆಗೆ ದಾಖಲಾದರೆ ಇಚ್ಛಿತ ವ್ಯಕ್ತಿಗಳ ಪ್ರವೇಶ ಹಾಗೂ ಭೇಟಿಗೆ ಮಾತ್ರ ಅಮುಮತಿ ನೀಡಲಾಗುತ್ತದೆ. ಎಲ್ಲ ಮಾಹಿತಿಗಳು ಗೌಪ್ಯವಾಗಿರುತ್ತವೆ. 24×7 ಉಚಿತ ಮಹಿಳಾ ಸಹಾಯವಾಣಿ 181ಕ್ಕೆ ಕರೆ ಮಾಡಿ ಸಂತ್ರಸ್ತ ಮಹಿಳೆಯರು ಮಾತನಾಡಲು ಅವಕಾಶವಿದೆ.

306 ಮಂದಿಗೆ ಚಿಕಿತ್ಸೆ
ಮಹಿಳಾ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕವು 2014ರ ನವೆಂಬರ್‌ 1ರಂದು ಆರಂಭವಾಗಿದ್ದು, ಮೂರು ವರ್ಷಗಳಲ್ಲಿ ಒಟ್ಟು 306 ಮಂದಿ ಇಲ್ಲಿ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್‌ ಪಡೆದುಕೊಂಡಿದ್ದಾರೆ. ಈ ಪೈಕಿ 136 ಮಂದಿ 18 ವರ್ಷದೊಳಗಿನ ಮಕ್ಕಳು. 2014-15ರಲ್ಲಿ 17 ಮಕ್ಕಳ ಸಹಿತ ಒಟ್ಟು 55 ಮಂದಿ ಚಿಕಿತ್ಸೆ ಪಡೆದರೆ, 2015-16ರಲ್ಲಿ 52 ಮಕ್ಕಳ ಸಹಿತ ಒಟ್ಟು 123 ಮಂದಿ ಹಾಗೂ 2016-17ನೇ ಸಾಲಿನಲ್ಲಿ 67 ಮಕ್ಕಳು ಸಹಿತ ಒಟ್ಟು 128 ಮಂದಿ ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೂರು ವರ್ಷಗಳ ಪೈಕಿ ಈ ವರ್ಷ 2017ರ ಸೆಪ್ಟಂಬರ್‌ವರೆಗೆ 128 ಮಂದಿ ಚಿಕಿತ್ಸೆ ಪಡೆಯುವ ಮೂಲಕ ಅತಿ ಹೆಚ್ಚು ಮಂದಿ ದಾಖಲಾಗಿರುವುದು ಗಮನಾರ್ಹ.

ಎಲ್ಲ ರೀತಿಯ ನೆರವು
ಮೂರು ವರ್ಷಗಳ ಹಿಂದೆ ಆರಂಭವಾದ ಈ ವಿಶೇಷ ಚಿಕಿತ್ಸಾ ಘಟಕದಲ್ಲಿ ಹಲವಾರು ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಲೇಡಿಗೋಶನ್‌ ಆಸ್ಪತ್ರೆಯ ವೈದ್ಯರೇ ಚಿಕಿತ್ಸೆಗೆ ಲಭ್ಯರಿರುತ್ತಾರೆ. ಮಹಿಳೆ ಮತ್ತು ಮಕ್ಕಳಿಗೆಂದೇ ಸ್ಥಾಪಿಸಲಾಗಿರುವ ಈ ಘಟಕದಲ್ಲಿ ಎಲ್ಲ ರೀತಿಯ ನೆರವು ಅವರಿಗೆ ಸಿಗುತ್ತದೆ.
ಸುಂದರ ಪೂಜಾರಿ, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Hindalga Jail: Inmate assaulted by four undertrials

Hindalga Jail: ಕೈದಿ ಮೇಲೆ ನಾಲ್ವರು ವಿಚಾರಣಾಧೀನ ಕೈದಿಗಳಿಂದ ಹಲ್ಲೆ

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2(1)

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2(1)

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

8-shirva

ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್‌

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.