ಮಹಿಳಾ ಮಂಡಳಿ: ವಾರ್ಷಿಕ ಮಹಾಸಭೆ,ಪುಸ್ತಕ ವಿತರಣೆ
Team Udayavani, May 16, 2019, 6:40 AM IST
ಕುರ್ನಾಡು: ಮುಡಿಪು ವಿಶ್ವಕರ್ಮ ಸಂಘ ಮತ್ತು ಸಿಂಧೂರ ಮಹಿಳಾ ಮಂಡಳಿ ಇದರ ವಾರ್ಷಿಕ ಮಹಾ ಸಭೆ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮವು ಸಂಘದ ಅಧ್ಯಕ್ಷ ಇರಾ ಯೋಗೀಶ್ ಆಚಾರ್ಯ ಮುಡಿಪು ಇವರ ಅಧ್ಯಕ್ಷತೆಯಲ್ಲಿ ಸಂಘದ ಕಟ್ಟಡದಲ್ಲಿ ಜರಗಿತು.
ಗೌರವಾರ್ಪಣೆ
ಮುಖ್ಯ ಅತಿಥಿಗಳಾಗಿ ವಿಶ್ವಕರ್ಮ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ, ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ .ಕೇಶವ ಆಚಾರ್ಯ ಮಂಗಳೂರು, ಸಂಘದ ಗೌರವ ಸಲಹೆಗಾರರಾದ ಕೆ.ಕೆ ಆಚಾರ್ಯ, ಬೈಕಾಡಿ ಜನಾರ್ದನ ಆಚಾರ್ಯ, ಎಸ್ .ವಿ. ಆಚಾರ್ಯ, ಯೋಗೀಶ್ ಆಚಾರ್ಯ, ಕಾನೂನು ಸಲಹೆಗಾರರಾದ ಪ್ರಭಾಕರ ಆಚಾರ್ಯ, ಸ್ಥಳದಾನಿಗಳಾದ ನೇತ್ರಾವತಿ ಪದ್ಮನಾಭ ಆಚಾರ್ಯ ಮುಡಿಪು ಇವರಿಗೆ ಗೌರವಾರ್ಪಣೆ ಮಾಡಲಾಯಿತು.
ಬಳಿಕ ಪ್ರಾಥವಿುಕ ಶಾಲಾ ಹಂತದಿಂದ ಕಾಲೇಜು ವರೆಗಿನ ಸುಮಾರು 127 ವಿದ್ಯಾರ್ಥಿಗಳಿಗೆ ಸಾರ್ವಜನಿಕವಾಗಿ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
ಸಂಘದ ಗೌರವಾಧ್ಯಕ್ಷರಾದ ವಿಠಲ ಆಚಾರ್ಯ ಮಿತ್ತಕೊಡಿ, ಕಟ್ಟಡ ಸಮಿತಿಯ ಕಾರ್ಯಾ ಧ್ಯಕ್ಷರಾದ ಹರೀಶ್ ಆಚಾರ್ಯ ಹರೇಕಳ, ಸಿಂಧೂರ ಮಹಿಳಾ ಮಂಡಳಿ ಅಧ್ಯಕ್ಷೆ ಮಾಧವಿ ವಿಠಲ ಆಚಾರ್ಯ ಉಪಸ್ಥಿತರಿದ್ದರು.
2018-19 ಸಾಲಿನ ವರದಿಯನ್ನು ಕಾರ್ಯದರ್ಶಿ ಪ್ರವೀಣ್ ಆಚಾರ್ಯ ವಾಚಿಸಿದರು.
ಕೋಶಾಧಿಕಾರಿಗಳಾದ ದಾಮೋದರ ಆಚಾರ್ಯ,ಪ್ರಮೀಳ ಹರೀಶ್ ಆಚಾರ್ಯ, ಜಗದೀಶ್ ಆಚಾರ್ಯ,ಲೆಕ್ಕಪತ್ರ ಮಂಡಿಸಿ ಸಮಾಜ ಬಾಂಧವರ ಅನುಮೋದನೆ ಪಡೆಯಲಾಯಿತು.
ಅಧ್ಯಕ್ಷರಾದ ಇರಾ ಯೋಗೀಶ್ ಆಚಾರ್ಯ ಸ್ವಾಗತಿಸಿ, ನವೀನ್ ಆಚಾರ್ಯ ಮುಡಿಪು ವಂದಿಸಿದರು. ಜಗದೀಶ್ ಆಚಾರ್ಯ ಮುಡಿಪು ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.