ಮಹಿಳಾ ಕಾರ್ಮಿಕರ ಹಕ್ಕುಗಳು, ಮಾನಸಿಕ ಆರೋಗ್ಯ ಮಾಹಿತಿ ಶಿಬಿರ
Team Udayavani, Jan 5, 2018, 10:14 AM IST
ಮಹಾನಗರ: ಕೆಲಸದ ವೇಳೆಯಲ್ಲಿ ಅನೇಕ ಸಂಸ್ಥೆಗಳಲ್ಲಿ ಮಹಿಳೆಯರನ್ನು ದ್ವಿತೀಯ ದರ್ಜೆಯ ನೌಕರರನ್ನಾಗಿ ಕಾಣುತ್ತಿದ್ದು, ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದೆ ಎಂದು ಭಾರತೀಯ ಜಾಗೃತ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ರೂಪಾ ಡಿ. ಬಂಗೇರ ಹೇಳಿದರು.
ಭಾರತೀಯ ಜನಸೇವಾ ಟ್ರಸ್ಟ್ ಪ್ರವರ್ತಿತ ಭಾರತೀಯ ಜಾಗೃತ ಮಹಿಳಾ ವೇದಿಕೆಯ ಆಶ್ರಯದಲ್ಲಿ ಇತ್ತೀಚೆಗೆ ನಗರದಲ್ಲಿ ನಡೆದ ‘ಮಹಿಳಾ ಕಾರ್ಮಿಕರ ಹಕ್ಕುಗಳು ಮತ್ತು ಮಾನಸಿಕ ಆರೋಗ್ಯ’ ಎಂಬ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ವೇದಿಕೆಯು ಜಿಲ್ಲೆಯಾದ್ಯಂತ ತನ್ನ ಚಟುವಟಿಕೆಯನ್ನು ವಿಸ್ತರಿಸಲಿದೆ ಎಂದರು.
ಮಹಿಳೆಯರ ಪರವಾಗಿರಲಿ
ಸಭೆಯ ಅಧ್ಯಕ್ಷತೆ ವಹಿಸಿದ್ದ ಭಾರತೀಯ ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ವಸಂತ ಯೆಯ್ನಾಡಿ ಮಾತನಾಡಿ, ಮಹಿಳಾ ಸಂಘಟನೆಗಳು ಕೇವಲ ಸಾಂಸ್ಕೃತಿಕ, ಮನೋರಂಜನ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ, ನಿರಂತರವಾಗಿ ಮಹಿಳೆಯರ ಪರವಾಗಿ ಮಾತ್ರ ಕೆಲಸ ಮಾಡಬೇಕು ಈ ಉದ್ದೇದಿಂದ ವೇದಿಕೆಯನ್ನು ಹುಟ್ಟುಹಾಕಲಾಗಿದೆ ಎಂದು ಹೇಳಿದರು.
ಟ್ರಸ್ಟ್‌ನ ಕಾನೂನು ಘಟಕದ ಮುಖ್ಯಸ್ಥ ಎಸ್.ಎನ್. ಭಟ್ ಅವರು ಮಹಿಳಾ ಕಾರ್ಮಿಕರ ಮಾನಸಿಕ ಆರೋಗ್ಯ ಕಾಪಾಡಿ ಕೊಳ್ಳುವ ಬಗ್ಗೆ ಉಪನ್ಯಾಸ ನೀಡಿದರು. ಉಪಾಧ್ಯಕ್ಷ ದಿನೇಶ್ ಬಂಗೇರ, ಟ್ರಸ್ಟಿ ಅಜಿತ್ ಕುಮಾರ್ ಉಪಸ್ಥಿತರಿದ್ದರು. ಕೀರ್ತನ ಪ್ರವೀಣ್ ಸ್ವಾಗತಿಸಿ,ಶಿಲ್ಪ ನವೀನ್ ವಂದಿಸಿದರು. ನಿಖೀಲ್ ಮತ್ತು ತುಷಾರ್ ಪ್ರಾರ್ಥನೆಗೈದರು. ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳ ಆಯ್ಕೆ
ಜಿಲ್ಲಾಧ್ಯಕ್ಷರಾಗಿ ರೂಪಾ ಡಿ. ಬಂಗೇರ, ಕಾರ್ಯಾಧ್ಯಕ್ಷರಾಗಿ ವಿಜಯಶ್ರೀ ಗಟ್ಟಿ, ಮಂಗಳೂರು ವಿಭಾಗದ ಕಾರ್ಯದರ್ಶಿಯಾಗಿ ಪವಿತ್ರ ರಾಜನ್, ಸಮಿತಿ ಸದಸ್ಯೆಯರಾಗಿ ಸುಚಿತ್ರಾ ಉದಯನಗರ, ವೀಣಾ ಗುಂಡಳಿಕೆ, ಗಾಯತ್ರಿ ಲೋಕೇಶ್, ಕೀರ್ತನಾ ಪ್ರವೀಣ್, ಲಕ್ಷ್ಮೀ ಸುನೀಲ್, ಜಯಪ್ರದಾ ಹರಿಣಾಕ್ಷ, ಹೇಮಲತಾ ಮುರಳಿ, ಗೀತಾ ರಾಜೇಶ್ ಅವರನ್ನು ಆರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.