ಝರಿಯಲ್ಲಿ ಸಿಲುಕಿದ ಮರದ ದಿಮ್ಮಿ
Team Udayavani, Aug 19, 2018, 10:33 AM IST
ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಜೋಡಿಸುವ ಬಿಸಿಲೆ ಘಾಟ್ ರಸ್ತೆಗೆ ಅಲ್ಲಲ್ಲಿ ಬೃಹತ್ ಗಾತ್ರದ ಮರಗಳು ಬಿದ್ದು ಸಂಚಾರ ಕಡಿತಗೊಂಡಿದೆ. ಈ ರಸ್ತೆಯ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ಗುಡಿಗೆ ಸ್ವಲ್ಪ ಮಟ್ಟಿನ ಹಾನಿ ಉಂಟಾಗಿದೆ. ಗುಡಿ ಪಕ್ಕ ರಸ್ತೆ ಬದಿ ಇರುವ ನೀರಿನ ಝರಿಯಲ್ಲಿ ಬೃಹತ್ ಗಾತ್ರದ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದು ಅಪಾರ ಪ್ರಮಾಣದಲ್ಲಿ ಸಿಕ್ಕಿಹಾಕಿಕೊಂಡಿದೆ. ಇದರ ತೆರವು ಕಾರ್ಯದಲ್ಲಿ ಸುಬ್ರಹ್ಮಣ್ಯ ಪರಿಸರದ ನಾಗರಿಕರು ತೊಡಗಿಕೊಂಡಿದ್ದಾರೆ.
ಚೌಡಮ್ಮನ ಗುಡಿ ಪಕ್ಕದ ಝರಿಯಲ್ಲಿ ಇಷ್ಟೊಂದು ಪ್ರಮಾಣದ ಮರದ ದಿಮ್ಮಿಗಳು ಸಂಗ್ರವಾಗಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಕೆಲವರು ಝರಿಯ ಮೂಲ ಹುಡುಕುತ್ತ ಗುಡ್ಡ ಹತ್ತಿ ಸುಮಾರು ಏಳೆಂಟು ಕಿ.ಮೀ. ದೂರ ಕ್ರಮಿಸಿದ್ದು, ಈ ವೇಳೆ ಅರಣ್ಯದ ಮೇಲಿನ ಗುಡ್ಡದಲ್ಲಿ ಬೃಹತ್ ಗಾತ್ರದ ನೀರಿನ ಒರತೆ ಸೃಷ್ಟಿಯಾಗಿ ನೀರು ಉಕ್ಕಿ ಹರಿಯುತ್ತಿರುವುದು ಗೋಚರಿಸಿದೆ. ಇದರ ಪಕ್ಕದಲ್ಲಿ ಗುಡ್ಡ ಜರಿದಿರುವುದು ಮತ್ತು ಮರಗಳು ಧರಾಶಾಯಿಯಾಗಿರುವುದು ಗೋಚರಿಸಿದೆ. ಸ್ಥಳಕ್ಕೆ ತೆರಳಿದ್ದ ವೇಳೆ ಕೂಡ ಅಲ್ಲಿ ಗುಡ್ಡ ಜರಿಯುತ್ತಿತ್ತು ಎಂದು ಸ್ಥಳಕ್ಕೆ ತೆರಳಿದವರು ತಿಳಿಸಿದ್ದಾರೆ. ಸುಮಾರು ಎರಡು ಎಕರೆ ಪ್ರದೇಶದಷ್ಟು ವಿಸ್ತಾರದಲ್ಲಿ ಭೂಕುಸಿತ ಆಗಿರಬಹುದು ಎಂದವರು ಹೇಳಿದ್ದಾರೆ. ದೇವಿ ಗುಡಿ ಪಕ್ಕ ಬಿಸಿಲೆ ರಸ್ತೆಯಲ್ಲಿ ಇತ್ತೀಚೆಗೆ ಕಾಮಗಾರಿ ನಡೆಸಿದ ಸೇತುವೆಯಲ್ಲಿ ಕೂಡ ದಿಮ್ಮಿಗಳು ಸಿಕ್ಕಿ ಹಾಕಿಕೊಂಡಿದೆ. ಇದರಿಂದ ಸೇತುವೆಗೂ ಹಾನಿಯಾಗಿವೆ.
ಗುಡ್ಡದಿಂದ ರಸ್ತೆ ಮೇಲೆ ಗುಡ್ಡದ ಮಣ್ಣು ಮತ್ತು ಮರಗಳ ತೆರವು ಕಾರ್ಯ ಶನಿವಾರ ನಡೆದಿದೆ. ಸಂಗ್ರಹಗೊಂಡ ಮರದ ದಿಮ್ಮಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.