ಮೂರು ಗ್ರಾಮಗಳಲ್ಲಿ ಅಣೆಕಟ್ಟು ರಚನೆಗೆ ಶ್ರಮದಾನ


Team Udayavani, Jan 19, 2018, 3:22 PM IST

19-Jan-16.jpg

ಬೆಳ್ತಂಗಡಿ: ಜಲಸಾಕ್ಷರತೆಗೆ ಪಣತೊಟ್ಟ ಮಡಂತ್ಯಾರಿನ ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಮೂರು ಗ್ರಾಮಗಳಲ್ಲಿ ಅಲ್ಲಲ್ಲಿ ಶ್ರಮದಾನದ ಮೂಲಕ ಅಣೆಕಟ್ಟು ರಚಿಸಿ ಜಲಸಾಕ್ಷರತೆಯಲ್ಲಿ ತೊಡಗಿಕೊಂಡಿದ್ದಾರೆ. ಮಡಂತ್ಯಾರು ಹಾಗೂ ಮಾಲಾಡಿ ಗ್ರಾ.ಪಂ. ವ್ಯಾಪ್ತಿಯ ಮಾಲಾಡಿ, ಸೋಣಂದೂರು, ಪಾರೆಂಕಿ ಗ್ರಾಮಗಳಲ್ಲಿ ಅಣೆಕಟ್ಟು ನಿರ್ಮಿಸಿ ಸಾವಿರಾರು ಕುಟುಂಬಗಳಿಗೆ ನೀರಿಗೆ ನೆರವಾಗಿದ್ದಾರೆ.

ಮುಡಾಯೂರಿನಲ್ಲಿ
ಮಾಲಾಡಿ ಗ್ರಾಮದ ಮುಡಾಯೂರಿನಲ್ಲಿ ಡಾ| ಎನ್‌.ಎಂ. ಜೋಸೆಫ್‌ ಅವರ ಮಾರ್ಗದರ್ಶನದಲ್ಲಿ ರವಿಶಂಕರ ಶೆಟ್ಟಿ, ಮೆಲ್ವಿನ್‌, ಸೇಸಪ್ಪ ಅವರ ಸಹಕಾರದಲ್ಲಿ ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ಎನ್ನೆಸ್ಸೆಸ್‌ನ ಜಲಕ್ರಾಂತಿ ತಂಡ, ಬೆಳ್ತಂಗಡಿ ಸೈಂಟ್‌ ಥಾಮಸ್‌ ಕಾಲೇಜಿನ ಎನ್ನೆಸ್ಸೆಸ್‌ ವಿದ್ಯಾರ್ಥಿಗಳ ತಂಡ 60 ಅಡಿ ಅಗಲದ ಹೊಳೆಗೆ 7 ಅಡಿ ಅಗಲದ 6 ಕಿಂಡಿ, 10 ಅಡಿ ಆಳದ ತಡೆಗೋಡೆ ರಚಿಸಿದರು. ಹೊಳೆಯಿಂದ ಮರಳು ತೆಗೆದು ಗೋಣಿ ಚೀಲದಲ್ಲಿ ತುಂಬಿಸಿ ಹಲಗೆ ಜತೆಗಿಟ್ಟು ಅಣೆಕಟ್ಟು ನಿರ್ಮಿಸಿ ರಜಾದಿನವನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು.

ಅರ್ತಿಲದಲ್ಲಿ
ಸುಮಾರು 25 ವರ್ಷಗಳಿಂದ ಕಟ್ಟ ನೀರಿನ ಹರಿವು ದೊರೆಯುವಂತೆ ಮಾಡಿದ್ದು ಈ ವಿದ್ಯಾರ್ಥಿಗಳ ಯಶೋಗಾಥೆ. ಸರಕಾರಿ ಲೆಕ್ಕದಲ್ಲಾದರೆ 30 ಸಾ. ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಅಣೆಕಟ್ಟ ವಿದ್ಯಾರ್ಥಿಗಳ ಶ್ರಮದಾನದಿಂದ ತಯಾರಾಗಿ ಈಗ ಸಮೃದ್ಧ ನೀರು ಸಂಗ್ರಹವಾಗಿದೆ.

ನಮ್ಮ ಮನೆ ಬಾವಿಯಲ್ಲಿ ನೀರಿದೆ, ನಮಗೆ ಬೋರಿದೆ ಎನ್ನುತ್ತಿದ್ದವರು ಕೂಡಾ ಜಲಾಘಾತ ಅನುಭವಿಸಿ ಕೊಳವೆ ಬಾವಿ ಖಾಲಿಯಾಗಿ, ಬಾವಿ ಬರಿದಾಗಿ ನೀರಿನ ಕಷ್ಟ ಅನುಭವಿಸಿದ್ದರು. ಈಗ ಈ ಅಣೆಕಟ್ಟುಗಳಿಂದಾಗಿ ಬಾವಿ- ಕೊಳವೆ ಬಾವಿಗಳಲ್ಲಿ ನೀರಿನ ಒರತೆ ಇಣುಕಿ, ಖುಷಿಯಲ್ಲಿದ್ದಾರೆ. ಅಣೆಕಟ್ಟುಗಳಿಂದ ಆಗುವ ಲಾಭದ ಸ್ವಾನುಭವ ಕಥನ ವಿವರಿಸಲು ಸಜ್ಜಾಗಿದ್ದಾರೆ.

ಮಚ್ಚಿನ ಗ್ರಾಮದ ಬಳ್ಳಮಂಜ ದೇವಸ್ಥಾನ ಸಮೀಪದಿಂದ ಹರಿಯುವ ಹೊಳೆಗೆ ಪಾರೆಂಕಿ, ಮಾಲಾಡಿ, ಸೋಣಂದೂರು ಗ್ರಾಮಗಳ ಮುಡಾಯೂರಿನಲ್ಲಿ 2, ಅರ್ತಿಲದಲ್ಲಿ 2, ಮಾಲಾಡಿಯಲ್ಲಿ 1, ಸೋಣಂದೂರಿನಲ್ಲಿ 1 – ಹೀಗೆ 3 ಗ್ರಾಮಗಳಲ್ಲಿ ಒಟ್ಟು 6 ಕಡೆ ವಿದ್ಯಾರ್ಥಿಗಳ ಸ್ವಯಂಪ್ರೇರಣೆಯಿಂದ ಅಣೆಕಟ್ಟು ನಿರ್ಮಿಸಲಾಗಿದೆ. ಕುಕ್ಕಳದಲ್ಲಿ ಸರಕಾರದ 13 ಅಣೆಕಟ್ಟುಗಳಿದ್ದರೂ ಸುಸ್ಥಿತಿಯಲ್ಲಿರುವುದು ಕೇವಲ 5. ವಾರ್ಷಿಕವಾಗಿ ಕಟ್ಟ ಹಾಕುವ ಕಾರ್ಯ ನಡೆಯದ ಕಾರಣ ಅವು ಪಾಳುಬಿದ್ದಿವೆ. ಆಡಳಿತಗಾರರಿಗೆ ಬೇಡ, ಸ್ಥಳೀಯರಿಗೆ ಕಷ್ಟ ಎಂಬ ಸ್ಥಿತಿ.

ಸಂಗ್ರಹವಾದ ನೀರಿನಲ್ಲಿ ಏಡಿ ಹಿಡಿಯುತ್ತಿದ್ದ ಹಿರಿಯರಾದ ಬಾಸಿಲ್‌ ಫೆರ್ನಾಂಡಿಸ್‌ ಅವರನ್ನು ಮಾತಿಗೆಳೆದಾಗ, ಅನೇಕ ವರ್ಷಗಳಿಂದ ಕಟ್ಟ ಹಾಕುವುದು ನಿಂತು ಹೋಗಿತ್ತು. ಎಲ್ಲರೂ ಅವರವರ ನೀರಿನ ಮೂಲಗಳನ್ನು ಆಶ್ರಯಿಸಿದ್ದರು. ಆದರೆ ಅವೆಲ್ಲ ಬರಿದಾಗುತ್ತವೆ. ಇಂತಹ ಕಟ್ಟಗಳಿಂದ ನೀರು ಸಂಗ್ರಹ
ವಾಗಿ ಜಲಮರುಪೂರಣವಾದಂತಾಗಿದೆ. ನಾವು ವಿದ್ಯಾರ್ಥಿಗಳ ಜತೆಗೆ ಅಣೆಕಟ್ಟು ಮಾಡುತ್ತಿದ್ದಾಗ ಕೈಕಟ್ಟಿ ನಿಂತು ನೋಡಿದವರು ಈಗ ಸಂಗ್ರಹವಾದ ನೀರನ್ನು ಕೃಷಿಗೆ ಬಿಡುವ ಮೂಲಕ ಲಾಭ ಪಡೆಯುತ್ತಿದ್ದಾರೆ. ಹಿರಿಯರಿಗಿಂತ ವಿದ್ಯಾರ್ಥಿಗಳಿಗೆ ಇರುವ ಕಾಳಜಿಯನ್ನು ಕಾಲೇಜಿನ ಚಟುವಟಿಕೆ ಅಲ್ಲದಿದ್ದರೂ ಸೈಂಟ್‌ ಥಾಮಸ್‌ ಹಾಗೂ ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂಪ್ರೇರಣೆ ಶ್ರಮದಾನದ ಮೂಲಕ ತೋರಿಸಿಕೊಟ್ಟಿದ್ದಾರೆ ಎನ್ನುತ್ತಾರೆ.

ಉಪನ್ಯಾಸಕರಿಂದ ಪ್ರೇರಣೆ
ಉಪನ್ಯಾಸಕ ಡಾ| ಎನ್‌.ಎಂ. ಜೋಸೆಫ್‌ ಅವರು ಜಲಸಾಕ್ಷರತೆ ಕುರಿತೇ ಸಂಶೋಧನ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದಿದ್ದಾರೆ. ತಮ್ಮ ಮನೆಯಲ್ಲಿಯೇ ಲಕ್ಷಾಂತರ ರೂ. ವೆಚ್ಚದಲ್ಲಿ ಜಲ ಮರುಪೂರಣ ಮಾಡಿ ಮಾದರಿಯಾಗಿದ್ದಾರೆ. ಸೇಕ್ರೆಡ್‌ ಹಾರ್ಟ್‌ ಚರ್ಚ್‌ ವಠಾರದಲ್ಲಿ, ಕಕ್ಕೆಕಾಡು ಪರಿಸರದಲ್ಲಿ ಸ್ವಂತ ಖರ್ಚಿನಲ್ಲಿ ಇಂಗುಗುಂಡಿ ನಿರ್ಮಿಸಿ ನೀರಿಂಗಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಊರೂರು ತಿರುಗಿ ಚೆಕ್‌ ಡ್ಯಾಂ, ವೆಂಟೆಡ್‌ ಡ್ಯಾಂ ಕುರಿತು ಅಧ್ಯಯನ ಮಾಡಿ ಸ್ಥಳೀಯರ ಮನವೊಲಿಸಿ ನೀರು ಸಂಗ್ರಹಿಸಿ ಎಂದು ಮನವಿ ಮಾಡುತ್ತಿದ್ದಾರೆ. ಈ ಉಪನ್ಯಾಸಕರೇ ಎನ್ನೆಸೆಸ್‌ ಅಧಿಕಾರಿಯಾಗಿ ಮಕ್ಕಳಿಗೆ ಪ್ರೇರಣೆಯಾಗಿದ್ದಾರೆ. ವಿದ್ಯಾರ್ಥಿಗಳು ರಜಾದಿವಸ ಸ್ವಪ್ರೇರಣೆಯಿಂದ ಜಲಕ್ರಾಂತಿ ತಂಡ ರಚಿಸಿ ಅಲ್ಲಲ್ಲಿ ಶ್ರಮದಾನ ನಿರತರಾಗುತ್ತಿದ್ದಾರೆ.

ನಮ್ಮ ಜಾಗದ ಬದಿ ಅಣೆಕಟ್ಟೆಯಿಂದ ಪರಿಸರದ ಎಲ್ಲ ಕೃಷಿಕರಿಗೆ ಕುಡಿಯುವ ನೀರಿನ ಆಶ್ರಯಕ್ಕೂ ಪ್ರಯೋಜನವಾಗಿದೆ. ಕೆರೆ-ಬಾವಿ ತುಂಬಿದ್ದು, ಎಪ್ರಿಲ್‌ವರೆಗೆ ತೋಟದ ನೀರಿಗಾಗಿ ಪಂಪ್‌ ಚಾಲೂ ಮಾಡಬೇಕಿಲ್ಲ. 
– ಮೆಲ್ವಿನ್‌ ಫೆರ್ನಾಂಡಿಸ್‌ ಪಾರೆಂಕಿ ಗ್ರಾಮ

ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಅಣೆಕಟ್ಟು ರಚನೆಯಲ್ಲಿ ತೊಡಗಿದ್ದಾರೆ. ಇದು ಇನ್ನಷ್ಟು ಮಂದಿಗೆ ಪ್ರೇರಣೆಯಾಗಬೇಕು.
ಡಾ| ಎನ್‌.ಎಂ. ಜೋಸೆಫ್‌
   ಉಪನ್ಯಾಸಕರು

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

Hospitalised: ಚಂದ್ರಬಾಬು ನಾಯ್ಡು ಸಹೋದರನ ಆರೋಗ್ಯ ಸ್ಥಿತಿ ಗಂಭೀರ… ಆಸ್ಪತ್ರೆಗೆ ದಾಖಲು

Hospitalised: ಚಂದ್ರಬಾಬು ನಾಯ್ಡು ಅವರ ಸಹೋದರನ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.