ಆಟೋ ಚಾಲಕರಿಂದ ಶ್ರಮದಾನ
Team Udayavani, Aug 22, 2017, 7:00 AM IST
ಮಡಂತ್ಯಾರು: ಮಡಂತ್ಯಾರು-ರಕ್ತೇಶ್ವರಿ ಪದವು ರಸ್ತೆ ಸಂಪೂರ್ಣ ಹದಗೆಟ್ಟು ವರ್ಷಗಳೇ ಕಳೆದಿವೆ. ಈ ಬಾರಿಯ ಮಳೆಗೆ ಮತ್ತಷ್ಟು ಹೊಂಡಗಳು ನಿರ್ಮಾಣವಾಗಿದ್ದು ವಾಹನ ಸಂಚಾರರಿಗೆ ನಿತ್ಯ ಸಂಕಟ ಪಡುವಂತಾಗಿದೆ. ಜಿ.ಪಂ. ರಸ್ತೆಯಾಗಿದ್ದು ಅನುದಾನದ ಕೊರತೆಯಿಂದ ರಸ್ತೆ ದುರಸ್ಥಿ ಸ್ಥಗಿತಗೊಂಡಿದೆ. ಬೆಳ್ತಂಗಡಿ ಶಾಸಕ ವಸಂತ ಬಂಗೇರ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಡಾಮರು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈ ರಸ್ತೆ ನಡೆದಾಡಲೂ ಕೂಡ ಆಗದ ಸ್ಥಿತಿಗೆ ತಲುಪಿದ್ದು ಸೋಮವಾರ ಮಡಂತ್ಯಾರು ಆಟೋರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಶ್ರಮದಾನದ ಮೂಲಕ ಹೊಂಡ ಮುಚ್ಚುವ ಕೆಲಸ ಮಾಡಲಾಯಿತು.
ಕಂಡೆಂತ್ಯಾರು ಅರ್ಥ್ ಮೂವರ್ ಮಾಲಕ ಪ್ರಶಾಂತ್ ಲಾರಿ ಮತ್ತು ಜೆಸಿಬಿ ನೀಡಿ ಸಹಕರಿಸಿದರು. ಆಟೋರಿಕ್ಷಾÒ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮಹಮ್ಮದ್ ಕೊಲ್ಪೆದಬೈಲು, ರಾಜೇಶ್, ವಸಂತ ಅಪ್ಪಾಲು, ಕರುಣಾಕರ, ಚಂದ್ರ ಕೊಡೆಂ ಚೋಡಿ, ಜಯಾನಂದ ರಕ್ತೇಶ್ವರಿ ಪದವು, ಸುರೇಶ್ ಮರಂತೇಲು, ಕುಸಲಪ್ಪ ಗೌಡ ಪಾರೆಂಕಿ, ರೂಪೇಶ್ ಆಚಾರ್ಯ, ಹರೀಶ್ ಕುಲಾಲ್, ಉಮೇಶ್ ಕೋಟೆ, ಜಯರಾಮ್, ನೆಲ್ಸನ್, ಗಿಯಪ್ಪ ಪೂಜಾರಿ ಕೋಡ್ಲಕ್ಕೆ, ಕೇಶವ ಬಡಕಬೈಲು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.