ಕುಡಿಯುವ ನೀರು ನಿರ್ವಹಣೆಗೆ ಮುಂದಾದ ತೋಕೂರು ಗ್ರಾಮಸ್ಥರು

ವಿಶ್ವಬ್ಯಾಂಕ್‌ ಯೋಜನೆ ನೀರು ಸರಬರಾಜು ವ್ಯವಸ್ಥೆ

Team Udayavani, Apr 30, 2019, 6:00 AM IST

2904HALE-1A

ತೋಕೂರು: ಬಹುತೇಕ ಗ್ರಾಮೀಣ ಭಾಗದಲ್ಲಿ ಇಂದು ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದರೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಪಡುಪಣಂಬೂರು ಗ್ರಾಮ ಪಂಚಾಯತ್‌ನ ತೋಕೂರು ಗ್ರಾಮದ ವಿಶ್ವಬ್ಯಾಂಕ್‌ ಯೋಜನೆಯ ಕುಡಿಯುವ ನೀರಿನ ಸರಬರಾಜ ವ್ಯವಸ್ಥೆಯನ್ನು ಗ್ರಾಮಸ್ಥರೇ ಸಮಿತಿಯ ರೂಪದಲ್ಲಿ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆ.

ತೋಕೂರು
ವಿಶ್ವಬ್ಯಾಂಕ್‌ ಯೋಜನೆ
1996- 97ರಲ್ಲಿ ತೋಕೂರಿನಲ್ಲಿ ವಿಶ್ವಬ್ಯಾಂಕ್‌ ನೆರವಿನ ಸಮಗ್ರ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಯೋಜನೆಯಲ್ಲಿ ಗ್ರಾಮಸ್ಥರ ಪಾಲು ಬಂಡವಾಳದೊಂದಿಗೆ ಮನೆ ಮನೆಗೆ ನೀರು ಸಂಪರ್ಕ ಪಡೆದುಕೊಂಡು ತೋಕೂರಿನ ಕ್ಲಸ್ಟರ್‌ 1 ಮತ್ತು 2 ಎಂಬ ಎರಡು ಸಮಿತಿಯನ್ನು ರಚಿಸಿಕೊಂಡು, ನಿರ್ವಹಣೆ, ಲಾಭ, ನಷ್ಟ ಎಲ್ಲವೂ ಸಹ ಸಮಿತಿಯ ಜವಬ್ದಾರಿಯೇ ಹೊರತು ಯಾವುದೇ ಸರಕಾರಿ ಸಂಸ್ಥೆಗಳಾಗಲಿ (ಗ್ರಾಮ ಪಂಚಾಯತ್‌ ಸಹಿತ) ಹೊಣೆಗಾರಿಕೆಯಿಂದ ನಡೆಸುತ್ತಿಲ್ಲ.

ಪ್ರಸ್ತುತ ತಿಂಗಳಿಗೆ ಅಂದಾಜು 19 ಲಕ್ಷ ಲೀ. ನೀರು ಸರಬರಾಜು ಆಗುತ್ತಿದೆ. ನೀರಿನ ಸರಬರಾಜಿನಲ್ಲಿ ಸಮಸ್ಯೆ ಕಂಡು ಬಂದ ತತ್‌ಕ್ಷಣ ಒಂದೇ ದಿನದೊಳಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಸಮಿತಿಗೆ ಇದೆ.

ನೀರಿನ ಒಳ ಹರಿವಿಗೆ
ಕಿಂಡಿ ಅಣೆಕಟ್ಟು
ಕೊಳವೆ ಬಾವಿಗಳಿಗೆ ನಿರಂತರವಾಗಿ ನೀರು ಮರು ಪೂರಣಗೊಳಿಸಲು ಪ್ರತ್ಯೇಕವಾಗಿ ಎರಡು ಕಿಂಡಿ ಅಣೆಕಟ್ಟನ್ನು ವರ್ಷದ ಹಿಂದೆ ನಿರ್ಮಿಸಲಾಗಿದೆ. ನರೇಗಾ ಹಾಗೂ ತೋಕೂರು ಯುವಕ ಸಂಘದ ಸಂಯೋಜನೆಯಲ್ಲಿ ನಿರ್ಮಿಸಿದ್ದು, ಇದರಿಂದ ಈ ವರ್ಷ ಇದರ ಸಂಪೂರ್ಣ ಲಾಭ ಪಡೆಯು ವಂತಾಗಿದೆ. ಫೆಬ್ರವರಿ ಅಥವ ಮಾರ್ಚ್‌ ಅನಂತರ ದಿನ ಪೂರ್ತಿ ನೀರು ಬಿಡದೇ, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಾತ್ರ ಬಿಡಲಾಗುತ್ತದೆ. ಕಾರಣ ನೀರು ಇದ್ದರೂ ಅದನ್ನು ಹಿತಮಿತವಾಗಿ ಬಳಸಬೇಕು ಎಂಬ ಉದ್ದೇಶವನ್ನು ಹೊಂದಿದೆ.

ತಿಂಗಳ ನಿರ್ವಹಣೆ
ಪ್ರತೀ ತಿಂಗಳು 75 ರೂ. (ಕನಿಷ್ಠ 15 ಸಾವಿರ ಲೀ.) ಹೆಚ್ಚುವರಿಯಾದರೇ ಪ್ರತ್ಯೇಕ ದರ. 7.5 ಎಚ್‌.ಪಿ. ಸಾಮರ್ಥ್ಯದ ಪಂಪ್‌ ಸಮಿತಿಗೆ 18 ಸಾವಿರ (ಮೆಸ್ಕಾಂ ಬಿಲ್ಲು 12 ಸಾವಿರ ರೂ. ನಿರ್ವಹಣೆ, ಪಂಪ್‌ ಆಪರೇಟರ್‌, ಬಿಲ್ಲು ಕಲೆಕ್ಟರ್‌ ಮತ್ತು ಇತರ ) ಖರ್ಚು. ಸುಮಾರು 23 ಸಾವಿರ ರೂ. 175 ಮನೆಗಳ ಸಂಪರ್ಕದಿಂದ ಸಂಗ್ರಹ. ಎಲ್ಲ ನಿರ್ವಹಣೆಯನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣ.

ಹಿತಮಿತವಾಗಿ ಬಳಸಬೇಕಿದೆ
ಕುಡಿಯುವ ನೀರು ಗ್ರಾಮಸ್ಥರು ಬಳಸುವಾಗ ಹಿತಮಿತವಾಗಿ ಬಳಸಲು ಕ್ರಮ ಕೈಗೊಂಡಿದ್ದೇವೆ. ಮಳೆಗಾಲ ಆರಂಭವಾಗುವವರೆಗೂ ನೀರು ನಿರ್ವಹಣೆಯಲ್ಲಿ ಬಹಳ ಎಚ್ಚರಿಕೆಯನ್ನು ಅನುಸರಿಸುತ್ತಿದ್ದೇವೆ. ಸಮಿತಿ ಪಾರದರ್ಶಕತೆಯ ವಿಶ್ವಾಸವನ್ನು ಹೊಂದಿದೆ.
 - ವಿನೋದ್‌ಕುಮಾರ್‌,
ಅಧ್ಯಕ್ಷರು, ವಿಶ್ವಬ್ಯಾಂಕ್‌ ನೆರವಿನ ಸಮಗ್ರ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಯೋಜನೆ

ಕಿಂಡಿ ಅಣೆಕಟ್ಟು ಹೆಚ್ಚಲಿದೆ
ತೋಕೂರಿನ ಎರಡು ವಿಶ್ವಬ್ಯಾಂಕ್‌ ಸಮಿತಿಗಳೇ ನೀರಿನ ನಿರ್ವಹಣೆ ನಡೆಸುತ್ತಿರುವುದರಿಂದ ಗ್ರಾಮ ಪಂಚಾಯತ್‌ಗೂ ನೆಮ್ಮದಿ, 22 ವರ್ಷದಿಂದಲೂ ನಡೆಸುತ್ತಿರುವ ಸಮಿತಿಯ ನಿರ್ವಹಣೆಯನ್ನು ಮೆಚ್ಚಲೇ ಬೇಕು. ಗ್ರಾಮ ಪಂಚಾಯತ್‌ಗೂ ಹೆಸರು ಜತೆಗೆ ನೆಮ್ಮದಿಯೂ ಇದೆ. ಮತ್ತೂಂದು ಕಿಂಡಿ ಅಣೆಕಟ್ಟನ್ನು ಈ ಬಾರಿ ಕಂಬಳಬೆಟ್ಟುವಿನಲ್ಲಿ ನಿರ್ಮಿಸುವ ಯೋಜನೆ ಇದೆ.
 - ಮೋಹನ್‌ದಾಸ್‌,
ಅಧ್ಯಕ್ಷರು,ಪಡುಪಣಂಬೂರು ಗ್ರಾ.ಪಂ.

-ನರೇಂದ್ರ ಕೆರೆಕಾಡು

ಟಾಪ್ ನ್ಯೂಸ್

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ

5(1

Mangaluru: 7 ಕೆರೆ, ಪಾರ್ಕ್‌ ಅಭಿವೃದ್ಧಿಗೆ ಅಮೃತ 2.0

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.