ನಗರಗಳು ನಾಡಿನ ಪ್ರಗತಿಯ ಬಾಗಿಲಾಗಲಿ

ಇಂದು ವಿಶ್ವ ನಗರಗಳ ದಿನ

Team Udayavani, Oct 31, 2019, 5:47 AM IST

e-22

ಅ. 30ನ್ನು ವಿಶ್ವ ನಗರಗಳ ದಿನ ಎಂದು ಆಚರಿಸಲಾಗುತ್ತದೆ. ನಗರಗಳ ಭವಿಷ್ಯದ ಬಗ್ಗೆ ಈ ದಿನದಂದು ಚಿಂತಿಸಲಾಗುತ್ತದೆ. ದೇಶದ ಅಭಿವೃದ್ಧಿಯಲ್ಲಿ ಇಂದು ಹೆಚ್ಚು ನಗರಗಳ ಕೊಡುಗೆ ಅಪಾರ. ಉದ್ಯೋಗಗಳಿಗಾಗಿ ಹೆಚ್ಚು ಜನ ನಗರವನ್ನೇ ಆಶ್ರಯಿಸಿದ್ದಾರೆ. ಹಾಗಾಗಿ ಇಂದು ನಗರಗಳು ವೇಗವಾಗಿ ಬೆಳೆಯುತಿರುವ ಜತೆಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದೂ ಅಷ್ಟೇ ಯೋಚಿಸಬೇಕಾದುದು. ಈ ಹಿನ್ನೆಲೆಯಲ್ಲಿ ವಿಶ್ವ ನಗರಗಳ ದಿನ ಆಚರಣೆ ಅರ್ಥಪೂರ್ಣ.

ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ “ಗಾಡ್‌ ಮೇಡ್‌ ದಿ ವಿಲೇಜಸ್‌ ಆ್ಯಂಡ್‌ ಮ್ಯಾನ್‌ ಮೇಡ್‌ ದ ಸಿಟೀಸ್‌’. ಗ್ರಾಮೀಣ ಭಾಗವನ್ನು ಮಾನವ ನಗರಗಳಾಗಿ ತನ್ನ ಇಚ್ಛೆಗೆ ಅನುಸಾರವಾಗಿ ಬದಲಾಯಿಸಿಕೊಂಡಿದ್ದಾನೆ. ಇದರ ಪರಿಣಾಮ ಆಧುನಿಕ ಶೈಲಿಯಲ್ಲಿ ಅತ್ಯಾಕರ್ಷಕ, ಸುಂದರ ನಗರಗಳು ತಲೆ ಎತ್ತಿದೆ. ಇವೆಲ್ಲವನ್ನು ಮತ್ತೂ ಸುಂದರವನ್ನಾಗಿಸಿ, ಪರಿಣಾಮಕಾರಿಯಾಗಿ ರೂಪಿಸುವ ನಿಟ್ಟಿನಲ್ಲಿ ಇಂದು ಜಗತ್ತಿನಾದ್ಯಂತ ನಗರಗಳ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಅಕ್ಟೋಬರ್‌ 31ನ್ನು ಅಂತಾರಾಷ್ಟ್ರೀಯ ನಗರಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಈ ದಿನದ ಮೂಲಕ ಅಂತಾರಾಷ್ಟ್ರೀಯ ಸಮುದಾಯವನ್ನು ಜಾಗತಿಕವಾಗಿ ನಗರೀಕರಣದ ಕುರಿತು ಶಿಕ್ಷಿತರನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ. ನಗರಗಳ ಅಭಿವೃದ್ಧಿಯನ್ನು ಉತ್ತೇಜಿಸಿ, ಅಲ್ಲಿನ ಸವಾಲುಗಳನ್ನು ನೆರೆಯ ರಾಷ್ಟ್ರಗಳ ಸಹಕಾರದೊಂದಿಗೆ ಎದುರಿಸುವುದು ಇದರ ಉದ್ದೇಶವಾಗಿದೆ. ನಗರಗಳನ್ನು ಮತ್ತು ಜನರ ನಡುವೆ ಬಾಂಧವ್ಯದ ಬೆಸುಗೆಗಳನ್ನು ಬಲಪಡಿಸುವುದರ ಮೂಲಕ ಜಗತ್ತಿನಾದ್ಯಂತ ಸುಸ್ಥಿರ ನಗರ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದಾಗಿದೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ 2013ರ ಬಳಿಕ ಈ ದಿನವನ್ನು ಆಚರಿಸುತ್ತಾ ಬಂದಿದೆ. ಪ್ರತಿ ವರ್ಷ ಹೊಸ ಥೀಮ್‌ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.

ಈ ವರ್ಷದ ಘೋಷವಾಕ್ಯ
“ಜಗತ್ತನ್ನು ಬದಲಾಯಿಸು: ಆವಿಷ್ಕಾರಗಳ ಮೂಲಕ ಭವಿಷ್ಯದ ಪೀಳಿಗೆಗೆ ಉತ್ತಮ ಜೀವನವನ್ನು ಕಟ್ಟಿಕೊಡುವುದು’ ಈ ಬಾರಿಯ ಥೀಮ್‌. “ಉತ್ತಮ ನಗರ, ಉತ್ತಮ ಜೀವನ’ ಎನ್ನುವುದು ವಿಶ್ವ ನಗರ ದಿನದ ಸಾಮಾನ್ಯ ಘೋಷವಾಕ್ಯವಾಗಿದೆ.

ಈಗಾಗಲೇ ಜಗತ್ತಿನ ಒಟ್ಟು ಜನಸಂಖ್ಯೆ ಸುಮಾರು ಅರ್ಧದಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. 2050ಕ್ಕೆ ಈಗಿರುವ ಜನಸಂಖ್ಯೆಯ ಎರಡು ಪಟ್ಟು ಜನ ನಗರಗಳಲ್ಲಿ ವಾಸಿಸಲಿದ್ದಾರೆ. ಇಂದು ನಗರಗಳಲ್ಲಿನ ಜೀವನ ಎನ್ನುವುದು ಒಂದು ಟ್ರೆಂಡ್‌ ರೂಪ ತಳೆದಿದ್ದು, ಯುವ ಜನರು ನಗರಳನ್ನು ತಮ್ಮ ನಾಳೆಗಳಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ನಗರಗಳನ್ನು ಸಿದ್ಧಗೊಳಿಸುವುದು ಈ ದಿನದ ಉದ್ದೇಶ.

ನಗರಗಳ ಸುಸ್ಥಿರ ಅಭಿವೃದ್ಧಿ ಹೇಗೆ?
ಒಂದು ರಾಜ್ಯದಲ್ಲಿ ಹಲವು ನಗರಗಳು ತಲೆ ಎತ್ತಿತು ಎಂದಾದರೆ ಅಲ್ಲಿ ಉದ್ಯೋಗಾವಕಾಶಗಳು ಹೆಚ್ಚಿತು ಎಂದರ್ಥ. ನಗರಗಳನ್ನು ಯೋಜನೆ ಅಥವಾ ” ನೀಲ ನಕಾಶೆ’ಯಲ್ಲಿ ತೋರಿಸುವ ಸಂದರ್ಭ ಅವುಗಳು ಯಾವುದನ್ನೆಲ್ಲ ಒಳಗೊಳ್ಳಲಿದೆ ಎಂಬುದನ್ನು ನಿರೂಪಿಸಬೇಕು. ನಗರಗಳ ರಚನೆ, ವಿನ್ಯಾಸ, ಆರ್ಥಿಕ ಹೊಂದಾಣಿಕೆ, ಆಡಳಿತ ಮೊದಲಾದವುಗಳನ್ನು ಸ್ಪಷ್ಟವಾಗಿ ಸಂಯೋಜಿಸಬೇಕಾಗುತ್ತದೆ.

ಮೂಲ ಸೌಕರ್ಯ ಮತ್ತು ಲಭ್ಯತೆಯ ಆಧಾರದಲ್ಲಿ ಕಾರ್ಖಾನೆಗಳು, ನೂರಾರು ಸಂಸ್ಥೆಗಳು, ಉದ್ಯಮಗಳು ಸ್ಥಾಪನೆಯಾಗುತ್ತದೆ. ಇಂತಹವುಗಳು ಉದ್ಯೋಗಾವಕಾಶಗಳ ಬಾಗಿಲನ್ನು ಮುಕ್ತವಾಗಿರಿಸುತ್ತದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಅಥವ ಪದವಿ ಪಡೆದ ವಿದ್ಯಾರ್ಥಿಗಳು, ಬೇರೆ ಊರಿನ ಉದ್ಯಮಿಗಳು ನಗರತ್ತ ಬಂದು ತಮ್ಮ ಜೀವನನ್ನು ಕಂಡುಕೊಳ್ಳುತ್ತಾರೆ. ಇದರಿಂದ ಆ ನಿರ್ದಿಷ್ಟ ನಗರಗಳ ಅಭಿವೃದ್ಧಿಯ ಜತೆಗೆ ಕುಟುಂಬಗಳ ಅಭಿವೃದ್ಧಿಯೂ ನೆರವೇರುತ್ತದೆ.

ವಿಶ್ವದ 10 ಅತ್ಯುತ್ತಮ ಮುಂದುವರಿದ ನಗರಗಳು
ಸ್ವಿಜರ್‌ಲ್ಯಾಂಡ್‌: ಸ್ವಿಜರ್‌ಲ್ಯಾಂಡ್‌ ಸಣ್ಣ ರಾಷ್ಟ್ರ. ಮಾದರಿ ರಾಷ್ಟ್ರಗಳ ಪಟ್ಟಿಯನ್ನು ಅದು ಮೊದಲ ಸ್ಥಾನವನ್ನು ಪಡೆದಿದೆ. ಆಧುನಿಕ ಸ್ಪರ್ಶದ ಜತೆ ಇಲ್ಲಿ ಸ್ವತ್ಛತೆ ಮತ್ತು ಹಸುರನ್ನು ಕಾಪಾಡಿಕೊಂಡ ಕಾರಣ ಮಾದರಿ ನಗರ ಎಂದೆನಿಸಿದೆ.

ಟೋಕಿಯೋ: ಜಪಾನ್‌ನ ಈ ನಗರ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿದ ನಗರವಾಗಿದೆ. ಇಲ್ಲಿ ಕಡಿಮೆ ಅಪರಾಧ ಜಾಗತಿಕ ದರ್ಜೆಯ ಮೂಲ ಸೌಕರ್ಯಕ್ಕೆ ಹೆಸರುವಾಸಿಯಾಗಿದ್ದು, ಒಳ್ಳೆಯ ಜೀವನ ಮಟ್ಟವನ್ನು ದಾಖಲಿಸಿಕೊಂಡಿದೆ.

ಸಿಲಿಕಾನ್‌ ವ್ಯಾಲಿ: ಅಮೆರಿಕದ ಈ ನಗರ ಜಗತ್ತಿಗೆ ನೂರಾರು ಬಗೆಯ ಸಂಶೋಧನೆಯನ್ನು ಧಾರೆ ಎರೆದ ನಗರವಾಗಿದೆ. ಗೂಗಲ್‌, ಆ್ಯಪಲ್‌, ಫೇಸ್‌ಬುಕ್‌ ಸಹಿತ ಅನೇಕ ಐಟಿ ಕಂಪೆನಿಗಳು ಈ ನಗರದಲ್ಲಿವೆ.

ಸಿಯೋಲ್: ಸಿಯೋಲ್‌ ದಕ್ಷಿಣ ಕೊರಿಯಾದ ಹೈಟೆಕ್‌ ರಾಜಧಾನಿ. ಇಲ್ಲಿನ ಜೀವನ ಶೈಲಿ ವಿಶ್ವ ಪ್ರಸಿದ್ಧವಾಗಿದೆ. ಸಿಯೋಲ್‌ ಸ್ಯಾಮ್ಸಂಗ್‌, ಎಲ್ಜಿ, ಹ್ಯುಂಡೈ ಸಹಿತ ಅನೇಕ ಜಾಗತಿಕ ಕಂಪೆನಿಗಳ ಪ್ರಧಾನ ಕಚೇರಿಗಳು ಇಲ್ಲಿವೆ.

ತೈಪೆ: ತೈವಾನ್‌ನ ತೈಪೆ ವಿಶ್ವದ ಮುಂದುವರಿದ ನಗರಗಳಲ್ಲಿ ಒಂದು. ಇದು ಏಷ್ಯಾದ ಜನಪ್ರಿಯ ತಂತ್ರಜ್ಞಾನಗಳ ತಾಣವೂ ಹೌದು. ಜತೆಗೆ ನಗರ ಮೂಲಸೌಕರ್ಯವನ್ನು ಚೆನ್ನಾಗಿ ವಿಸ್ತರಿಸಿಕೊಂಡಿದೆ. ನುರಿತ ಮಾನವಶಕ್ತಿಯನ್ನು ಸರಿಯಾಗಿ ಬಳಸಿಕೊಂಡಿದೆ.

ನ್ಯೂಯಾರ್ಕ್‌: ಅಮೆರಿಕ ನ್ಯೂಯಾರ್ಕ್‌ ವಿಶ್ವದ ಆರನೇ ಮುಂದುವರಿದ ನಗರವಾಗಿದೆ. ಟೈಮ್ಸ… ಸ್ಕ್ವೇರ್‌ ಮಾಡಿದ ಪಟ್ಟಿಯಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ ಇಲ್ಲಿದೆ. ನ್ಯೂಯಾರ್ಕ್‌ ನಗರವು ವಿಶ್ವ ಪ್ರಸಿದ್ಧ ಕಟ್ಟಡಗಳನ್ನು ಹೊಂದಿದೆ.

ಕ್ಯಾಲಿಫೋರ್ನಿಯಾ: ಅಮೆರಿಕದ ಈ ಮತ್ತೂಂದು ನಗರ ಪ್ರಪಂಚದ ಟೆಕ್‌ ಹಬ್‌ಗಳಲ್ಲಿ ಕ್ಯಾಲಿಫೋರ್ನಿಯಾ ಒಂದಾಗಿದೆ. ಗೂಗಲ್‌, ಆಪಲ್‌, ಮೈಕ್ರೋಸಾಫ್ಟ್, ಫೇಸ್‌ಬುಕ್‌ ಇದರ ಪ್ರಧಾನ ಕಚೇರಿಗಳು ಇಲ್ಲಿವೆ.

ಹಾಂಗ್‌ ಕಾಂಗ್‌: ಹಾಂಗ್‌ ಕಾಂಗ್‌ ಜಗತ್ತಿನ ಅತ್ಯಂತ ದುಬಾರಿ ನಗರ. ಹಾಂಗ್‌ ಕಾಂಗ್‌ ಏಷ್ಯಾದ ಆರ್ಥಿಕ ಕೇಂದ್ರವಾಗಿದೆ. ನಗರವೂ ಸುಂದರವಾಗಿದೆ.

ಸ್ಟ್ಯಾಕೋಮ್: ಸ್ವೀಡನ್‌ನ ಸ್ಟ್ಯಾಕೋಮ್ ವಿಶ್ವದ ಅತ್ಯಂತ ಸುಂದರ ನಗರಗಳಲ್ಲಿ ಒಂದು. ಇತ್ತೀಚೆಗೆ, ಸ್ಟ್ಯಾಕೋಮ್ ಯುರೋಪಿನಲ್ಲಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರವಾಗಿ ಬದಲಾಗಿದೆ.

ಶಾಂಘೈ: ಚೀನದ ಶಾಂಘೈ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಹಣಕಾಸು ಕೇಂದ್ರಗಳಲ್ಲಿ ಒಂದು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕಂಪನಿಗಳು ಶಾಂಘೈನತ್ತ ಮುಖ ಮಾಡುತ್ತಿವೆ.

ನಗರಾಭಿವೃದ್ಧಿಯ ಯೋಜನೆಗಳು
ಸ್ಮಾರ್ಟ್‌ಸಿಟಿ: ಕೇಂದ್ರ ಸರಕಾರ ನಗರಗಳ ಅಭಿವೃದ್ಧಿಗಾಗಿ ಮಹತ್ವಾಕಾಂಕ್ಷೆಯ ಸ್ಮಾರ್ಟ್‌
ಸಿಟಿ ಯೋಜನೆಯನ್ನು 2015ರಲ್ಲಿ ಪರಿಚಯಿಸಿದೆ. ಈ ಯೋಜನೆಯಡಿ ದೇಶದ ಪ್ರಮುಖ ನಗರಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಸುಸ್ಥಿರ ಅಭಿವೃದ್ಧಿ ಮತ್ತು ಮೂಲ ಸೌಲಭ್ಯಗಳನ್ನು ಉತ್ತಮ ಪಡಿಸುವುದಾಗಿದೆ. “ಸ್ಮಾರ್ಟ್‌ ಸಿಟಿ’ ಪರಿಕಲ್ಪನೆಯಡಿಯಲ್ಲಿ ದೇಶದ 99 ಪ್ರಮುಖ ನಗರಗಳನ್ನು ಆಯ್ಕೆಮಾಡಿಕೊಳ್ಳಲಾಗಿದ್ದು, ಇವುಗಳ ಅಭಿವೃದ್ಧಿಗೆ 2 ಲಕ್ಷ ಕೋಟಿಗೂ ಅಧಿಕ ಅನುದಾನವನ್ನು ಮಿಸಲಿಡಲಾಗಿದೆ. ಇದರಲ್ಲಿ ಮಂಗಳೂರು ಸೇರಿ ರಾಜ್ಯದ 7 ನಗರಗಳೂ ಜಾಗಪಡೆದಿವೆ.

ಅಮೃತ್‌: ನಗರ ವ್ಯಾಪ್ತಿಯಲ್ಲಿರುವ ಹಿಂದುಳಿದವರ, ಬಡವರ ಜೀವನಮಟ್ಟವನ್ನು ಸುಧಾರಿಸಿ ಮೂಲ ಸೌಕರ್ಯವನ್ನು ಅಭಿವೃದ್ಧಿಗೊಳಿಸಲೆಂದು ಈ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ. ಈ ಯೋಜನೆಯಡಿ ದೇಶದ ಸುಮಾರು 500 ನಗರಗಳು ಆಯ್ಕೆಯಾಗಿದ್ದು 50 ಸಾವಿರ ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.

ಸ್ವತ್ಛ ಭಾರತ ಮಿಶನ್‌: ಕೇಂದ್ರ ಸರಕಾರ 2014ರ ಅ. 2ರ ಗಾಂಧಿ ಜಯಂತಿ ದಿನದಂದು ಸ್ವತ್ಛ ಭಾರತ ಮಿಷನ್‌ ಜಾರಿಗೊಳಿಸಿದೆ. ಬಯಲು ಶೌಚಾಲಯ ಮುಕ್ತ ನಗರ ಮತ್ತು ವೈಜ್ಞಾನಿಕವಾಗಿ ಘನ ತ್ಯಾಜ್ಯ ನಿರ್ವಹಣೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಇವುಗಳು ನಗರವನ್ನು ಅಂದಾಗಾಣಿಸಲು ನೆರವಾಗುತ್ತದೆ.

ಹೃದಯ್‌: ಹೃದಯ್‌ ಯೋಜನೆ 2015ರ ಜನವರಿ 15ರಂದು ಜಾರಿಗೆ ಬಂದಿದೆ. ಈ ಯೋಜನೆಯಡಿಯಲ್ಲಿ ನಗರಗಳ ಪಾರಂಪರಿಕ ಸ್ಥಳಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುತ್ತಿದೆ. ಇನ್ನು 2005ರಲ್ಲಿ ಜೆಎನ್‌ಯುಆರ್‌ಎಂ ಯೋಜನೆಗೆ ಚಾಲನೆ ನೀಡಲಾಯಿತು. ಈ ಯೋಜನೆಯನ್ನು ಎರಡು ಘಟಕವಾಗಿ ವಿಭಾಗಿಸಲಾಗಿದ್ದು ಇದರ ಪ್ರಕಾರ ನಗರಗಳ ಸ್ಲಂನ ಅಭಿವೃದ್ಧಿ ಮಾಡುವುದು ಉದ್ದೇಶವಾಗಿದೆ.

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

11

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.