ಪರಿಸರದಿಂದ ಮನುಷ್ಯ ಎಂಬ ಸತ್ಯ ಅರಿಯಿರಿ: ಡಾ| ಎಂ.ಆರ್.ರವಿ
Team Udayavani, Jun 6, 2018, 10:26 AM IST
ಸಸಿಹಿತ್ಲು : ಪರಿಸರದಿಂದ ಮನುಷ್ಯನಾಗಿದ್ದಾನೆಯೇ ಹೊರತುನಾವು ಪರಿಸರ ವಿರೋಧಿಯಾಗಿರಬಾರದು. ಜವಾಬ್ದಾರಿ ಅರಿತುಕೊಳ್ಳಲು ನಮಗೆ ಅನೇಕ ಅವಕಾಶ ಇವೆ ಜಿಲ್ಲೆಯಲ್ಲಿ ಸ್ವಚ್ಛ ಭಾರತದ ಕಲ್ಪನೆಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ ಪಂಚಾಯತ್‌ನ ಸಿಬಂದಿಗಳೇ ಇಂದು ಕಚೇರಿ ಬಿಟ್ಟು ಗ್ರಾಮೀಣ ಭಾಗಕ್ಕೆ ಆಗಮಿಸಿ ಜಾಗೃತಿ ಮೂಡಿಸಿದ್ದಾರೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್. ರವಿ ಹೇಳಿದರು.
ಸಸಿಹಿತ್ಲು ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಮಿಷನ್ ಹಾಗೂ ಜಿಲ್ಲಾ ನೆರವು ಘಟಕದ ಸಂಯೋಜನೆಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಂದ ಜಾಗೃತಿ ಮೂಡಿಸಿ ಗ್ರಾಮೀಣ ಭಾಗದಲ್ಲಿ ಸುಂದರ ಪರಿಸರದ ವಾತಾವರಣದ ಪರಿಕಲ್ಪನೆ ಇದ್ದರೆ ಮಾತ್ರ ಇಂತಹ ಕಾರ್ಯ ಯಶಸ್ಸಾಗುತ್ತದೆ. ಇಂದು ಸಿಬಂದಿ ಗಳಿಗೂ ಸಹ ಪರಿಸರದ ವಿಶಿಷ್ಟ ಅನುಭವವನ್ನು ತಿಳಿದುಕೊಳ್ಳಲು
ಅರ್ಥ ಪೂರ್ಣವಾಗಿ ಸಹಕಾರಿಯಾಗಿದೆ ಎಂದರು.
ಜಿ.ಪಂ. ಉಪ ಕಾರ್ಯದರ್ಶಿ ರವಿ ಬಸ್ರಿಹಳ್ಳಿ, ಸಂಯೋಜನ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಯೋಜನಾ ನಿರ್ದೇಶಕ ಟಿ.ಎನ್.ಲೋಕೇಶ್, ಯೋಜನಾಧಿಕಾರಿ ಸಚಿನ್, ಶಾಲಾ ಮುಖ್ಯ ಶಿಕ್ಷಕಿ ಕ್ಲೋಟಿಲ್ಡಾ ಲೋಬೋ, ಶಾಲಾ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನಿಲ್ ಕುಂದರ್, ಹಳೆಯಂಗಡಿ ಗ್ರಾ.ಪಂ.ಪ್ರಭಾರ ಪಿಡಿಒ ಕೇಶವ ದೇವಾಡಿಗ, ಪಡುಪಣಂಬೂರು ಗ್ರಾ.ಪಂ.ಪಿಡಿಒ ಅನಿತಾ ಕ್ಯಾಥರಿನ್, ಕಾರ್ಯದರ್ಶಿ ಲೋಕನಾಥ ಭಂಡಾರಿ, ಸಿಬಂದಿಗಳಾದ ಶರ್ಮಿಳಾ ಹಿಮಕರ್, ದಿನಕರ್, ಅಭಿಜಿತ್, ಸುನಿತಾ, ಹಳೆಯಂಗಡಿ ಪಂಚಾಯತ್ ಸಿಬಂದಿಗಳಾದ ಪ್ರಮಿಳಾ, ಹರೀಶ್, ಮಹಮ್ಮದ್ ತುಪಾಕಿ, ಅಂಗನವಾಡಿ ಕಾರ್ಯಕರ್ತೆಯರಾದ ಕವಿತಾ, ರತ್ನಾ ಎಸ್., ಸುಜಾತಾ, ಸವಿತಾ, ಗೀತಾ ಕೆ., ಮಾಲಿನಿ, ಶುಭಾವತಿ, ಶಾಲಾ ಸಹ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಜಿ. ಪಂ.ನ ನೆರವು ಘಟಕದ ಜಿಲ್ಲಾ ಸಂಯೋಜಕಿ ಮಂಜುಳಾ
ಸ್ವಾಗತಿಸಿ, ನಿರೂಪಿಸಿದರು.
ಪರಿಸರದ ದಿನದ ಚಟುವಟಿಕೆ
ಜಿಲ್ಲಾ ಪಂಚಾಯತ್‌ನ ಆಡಳಿತ, ಲೆಕ್ಕ, ಪರಿಷತ್, ಯೋಜನಾ ವಿಭಾಗದ ಅಧಿಕಾರಿಗಳು ಹಾಗೂ ಸಿಬಂದಿ ಸೇರಿ 60 ಮಂದಿ, ಅಂಗನವಾಡಿ ಕಾರ್ಯಕರ್ತರು, ಹಳೆಯಂಗಡಿ ಹಾಗೂ ಪಡುಪಣಂಬೂರು ಸಿಬಂದಿಗಳೊಂದಿಗೆ ಸೇರಿಕೊಂಡು, ಗಿಡ ನೆಡುವುದು, ಶ್ರಮದಾನ, ಸಮುದ್ರದ ಬದಿಯಲ್ಲಿ ತ್ಯಾಜ್ಯ ಸಂಗ್ರಹ, ಮನೆ ಮನೆಗೆ ಭೇಟಿ ನೀಡಿ ತ್ಯಾಜ್ಯ ವಿಲೇವಾರಿ ಬಗ್ಗೆ ಸ್ವಚ್ಛ ಮಿತ್ರದ ಕೈಪಿಡಿಯೊಂದಿಗೆ ಮಾಹಿತಿ, ರಸ ಪ್ರಶ್ನೆ, ಪರಿಸರದ ಸ್ಪರ್ಧೆಗಳಲ್ಲಿ ಮುಕ್ತವಾಗಿ ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.