ವಿಶ್ವ ಆಹಾರ ದಿನಾಚರಣೆಯ ಜಾಗೃತಿ ಅಭಿಯಾನ 


Team Udayavani, Oct 15, 2017, 12:47 PM IST

15-Mng-10.jpg

 ತೋಕೂರು : ಹಸಿದವನ ಹೊಟ್ಟೆಯನ್ನು ತಣಿಸಲು ಪ್ರಯತ್ನಿಸುವುದು ಸಹ ಸಮಾಜ ಸೇವೆಯ ಒಂದು ಗುಣ, ವೃಥಾ ಆಹಾರವನ್ನು ಪೋಲು ಮಾಡದೆ. ಅಗತ್ಯವಿರುವಷ್ಟು ಮಾತ್ರ ಹೊಟ್ಟೆ ತುಂಬಿಸಿಕೊಳ್ಳಿ. ಇದರಿಂದ ಆರೋಗ್ಯಕ್ಕೂ ಒಳ್ಳೆಯದು, ಸಮಾಜಕ್ಕೊಂದು ಸಂದೇಶವೂ ಸಿಗುತ್ತದೆ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ತೋಕೂರು ಶ್ರೀ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.14ರಂದು ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಮೂಲ್ಕಿಯ ಜನ ವಿಕಾಸ ಸಮಿತಿಯ ಸಹಕಾರದಲ್ಲಿ ವಿಶ್ವ ಆಹಾರ ದಿನಾಚರಣೆಯ ಪ್ರಯುಕ್ತ ನಡೆದ ಆಹಾರದ ಅಪವ್ಯಯವನ್ನು ತಡೆಗಟ್ಟುವ ಉದ್ದೇಶದ ಆಹಾರ ಜಾಗೃತಿ ಅಭಿಯಾನ-2017ಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್‌ ಭಟ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆಹಾರದ ಬಗ್ಗೆ ಕಾಳಜಿಯನ್ನು ವಹಿಸಲು ಮಕ್ಕಳ ಮೂಲಕ ಜಾಗೃತಿ ಮೂಡಿಸುವ ಪುನರೂರು ಪ್ರತಿಷ್ಠಾನದ ಯೋಚನೆ ಮತ್ತು ಯೋಜನೆ ಉತ್ತಮ ಕಾರ್ಯಕ್ರಮವಾಗಿದೆ. ಇದರಿಂದ ಮಕ್ಕಳ ಮನಸ್ಸನ್ನು ಗೆಲ್ಲಲು ನಾವು ಸಹ ಪರಿವರ್ತನೆ ಆಗಬೇಕಾಗಿದೆ ಎಂದರು.

ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್‌ ಪುನರೂರು ಸ್ವಾಗತಿಸಿ, ಪ್ರಸ್ತಾವನೆಗೈದು, ಆಹಾರದ ಪ್ರಾಮುಖ್ಯವನ್ನು ತಿಳಿಸಿದರು. ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್‌. ಕೆ.ಉಷಾರಾಣಿ, ಕಿನ್ನಿಗೋಳಿ ಲಯನ್ಸ್‌ ಕ್ಲಬ್‌ನ ಅಧ್ಯಕ್ಷೆ ಶಾಂಭವಿ ಶೆಟ್ಟಿ ನಿಡ್ಡೋಡಿ, ಲಯನೆಸ್‌ ಕ್ಲಬ್‌ ಅಧ್ಯಕ್ಷೆ ಸ್ಮಿತಾ ಎಂ. ಡಿ’ಸೋಜಾ, ಶಾಲಾ ಮುಖ್ಯ ಶಿಕ್ಷಕಿ ಗೌರಿ, ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ ಯೋಗೀಶ್‌, ಸಹಾಯಕಿ ವಿಶಾಂತಿ, ಉದ್ಯಮಿ ನಿಡ್ಡೋಡಿ ಸಚಿನ್‌ ಶೆಟ್ಟಿ, ಗ್ರಾಮ ಕರಣಿಕ ಮೋಹನ್‌, ಜನ ವಿಕಾಸ ಸಮಿತಿಯ ಅಧ್ಯಕ್ಷ ಪಿ.ಎಸ್‌.ಸುರೇಶ್‌ ರಾವ್‌, ಶ್ರೇಯಾ ಪುನರೂರು, ಆನಂದ ಮೇಲಂಟ, ಭಾಗ್ಯಾ ರಾಜೇಶ್‌, ಶಶಿಕರ ಕೆರೆಕಾಡು, ಸಹ ಶಿಕ್ಷಕಿಯರಾದ ಗೌರಿ, ಮೋಹಿನಿ, ಸರಿತಾ, ಅನಿತಾ, ನಿತೇಶ್‌ ಶೈಲಜಾ ಉದಯಕುಮಾರ್‌, ಪ್ರೇಮಾ ಉಪಸ್ಥಿತರಿದ್ದರು. ಉಪನ್ಯಾಸಕ ಜಿತೇಂದ್ರ ವಿ. ರಾವ್‌ ಹೆಜಮಾಡಿ ನಿರೂಪಿಸಿದರು, ಪ್ರಾಣೇಶ್‌ ಭಟ್‌ ದೇಂದಡ್ಕ ವಂದಿಸಿದರು.

ಆಹಾರ ಜಾಗೃತಿ ಅಭಿಯಾನ 
ಮೂಲ್ಕಿ ಹೋಬಳಿಯ 90 ಶಾಲಾ ಕಾಲೇಜುಗಳಿಗೆ, ಹೊಟೇಲ್‌, ಕಲ್ಯಾಣ ಮಂಟಪ ಹಾಗೂ ಸಭಾ ಭವನಗಳ ಸಹಿತ ಸುಮಾರು 210 ಕಡೆಗಳಿಗೆ ತೆರಳಿ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಘೋಷ ವಾಕ್ಯದ ವಿವಿಧ ಫಲಕಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಮುಂದಿನ ಮೂರು ದಿನಗಳ ಕಾಲ ನಡೆಯಲಿದೆ.

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.